ಭೋಪಾಲ್ (ಮಧ್ಯಪ್ರದೇಶ): 2020ರ ರಾಷ್ಟ್ರೀಯ ಕ್ರೀಡಾ ಮತ್ತು ಸಾಹಸ ಪ್ರಶಸ್ತಿ ವಿಜೇತ ಮಧ್ಯ ಪ್ರದೇಶದ ಕ್ರೀಡಾಪಟುಗಳು ಮತ್ತು ತರಬೇತುದಾರರನ್ನು ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಶನಿವಾರ ಭೇಟಿಯಾದರು.
ಮಧ್ಯಪ್ರದೇಶ: ರಾಷ್ಟ್ರೀಯ ಕ್ರೀಡಾ ಮತ್ತು ಸಾಹಸ ಪ್ರಶಸ್ತಿ ಪುರಸ್ಕೃತರನ್ನು ಭೇಟಿ ಮಾಡಿದ ಸಿಎಂ ಮಲ್ಲಕಂಭ ತರಬೇತುದಾರ ಯೋಗೇಶ್ ಮಾಲವೀಯ ಮತ್ತು ವಿಶೇಷ ಚೇತನ ಈಜುಪಟು ಸತೇಂದ್ರ ಸಿಂಗ್ ಅವರನ್ನು ಸಿಎಂ ಭೇಟಿಯಾದರು.
"ಮಲ್ಲಕಂಭ ಪ್ರವೀಣ ಯೋಗೇಶ್ ಮಾಲವೀಯ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ಲಭಿಸಿರುವುದು ಮಧ್ಯಪ್ರದೇಶಕ್ಕೆ ಹೆಮ್ಮೆಯ ವಿಷಯ. ಇವರು ದ್ರೋಣಾಚಾರ್ಯ ಪ್ರಶಸ್ತಿ ಪಡೆದ ರಾಜ್ಯದ ಮೊದಲ ತರಬೇತುದಾರರಾಗಿದ್ದಾರೆ. ಟೆಂಜಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿ ಪಡೆಯುವ ಮೂಲಕ ದಿವ್ಯಾಂಗ ಈಜುಗಾರ ಸತೇಂದ್ರ ಸಿಂಗ್ ಅವರು ಕೂಡ ರಾಜ್ಯಕ್ಕೆ ಖ್ಯಾತಿ ತಂದಿದ್ದಾರೆ" ಎಂದು ಚೌಹಾಣ್ ಹೇಳಿದರು.
ಸಭೆಯಲ್ಲಿ ಮಾಲವೀಯ ಮತ್ತು ಸಿಂಗ್ ಅವರಿಗೆ ಕ್ರಮವಾಗಿ 10 ಮತ್ತು 5 ಲಕ್ಷ ಬಹುಮಾನಗಳನ್ನು ಸಿಎಂ ಘೋಷಿಸಿದರು.
ಕ್ರೀಡಾಪಟುಗಳು ಮುಖ್ಯಮಂತ್ರಿಗಳ ಪ್ರೋತ್ಸಾಹಕ್ಕೆ ಧನ್ಯವಾದ ಅರ್ಪಿಸಿದ್ದು, ರಾಜ್ಯದಲ್ಲಿ ಕ್ರೀಡಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಬೇಕೆಂದು ಒತ್ತಾಯಿಸಿದರು.