ಛರ್ತಪುರ್ (ಮಧ್ಯಪ್ರದೇಶ):ಮದುವೆ ಸಮಾರಂಭದ ವೇಳೆ ದಲಿತ ವರನೊಬ್ಬ ಕುದುರೆ ಮೇಲೆ ಕುಳಿತುಕೊಂಡು ಮೆರವಣಿಗೆ ಹೋಗಿದ್ದು, ಆತನ ಮೇಲೆ ಮೇಲ್ಜಾತಿಯವರು ಹಲ್ಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮದುವೆ ದಿನ ಕುದುರೆ ಮೇಲೆ ಕುಳಿತ ದಲಿತ ವರನ ಮೇಲೆ ಮೇಲ್ಜಾತಿಯವರಿಂದ ಹಲ್ಲೆ... ಪ್ರಕರಣ ದಾಖಲು! - ದಲಿತ ವರನ ಮೇಲೆ ಹಲ್ಲೆ
ಮದುವೆ ಸಮಾರಂಭದ ವೇಳೆ ಕುದುರೆ ಮೇಲೆ ಕುಳಿತುಕೊಂಡು ಗ್ರಾಮದ ತುಂಬೆಲ್ಲ ಮೆರವಣಿಗೆ ಮಾಡಿಸಿಕೊಂಡಿದ್ದಕ್ಕಾಗಿ ಆತನ ಮೇಲೆ ಮೇಲ್ಜಾತಿಯವರು ಹಲ್ಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
Dalit groom
ವರನ ಮೇಲೆ ಯಾದವ ಸಮುದಾಯದ ನಾಲ್ವರು ಹಲ್ಲೆ ಮಾಡಿದ್ದು, ಕೆಳ ಜಾತಿಯವನಾದ ನೀನು ಈ ರೀತಿಯಾಗಿ ನಡೆದುಕೊಳ್ಳುವಂತಿಲ್ಲ ಎಂದು ವಾರ್ನ್ ಮಾಡದ್ದಾರೆ ಎಂದು ಪೊಲೀಸ್ ಅಧಿಕಾರಿ ದೀಪಕ್ ಯಾದವ್ ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವರನ ಕುಟುಂಬಸ್ಥರು ದೂರು ದಾಖಲು ಮಾಡಿದ್ದು, ಹಲ್ಲೆ ನಡೆಸಿರುವ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.