ನಿಮಚ್ (ಮಧ್ಯಪ್ರದೇಶ): ಬ್ಯಾಂಕ್ನೊಳಗೆ ಹೋಗಿರುವ ಬಾಲಕ ಕೇವಲ ಅರ್ಧ ನಿಮಿಷದ ಕಾಲಾವಧಿಯಲ್ಲಿ ಬರೋಬ್ಬರಿ 10 ಲಕ್ಷ ರೂ ಎಗರಿಸಿ ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ನಿಮಚ್ನಲ್ಲಿ ನಡೆದಿದೆ.
10 ವರ್ಷ, 10 ಲಕ್ಷ, ಬರೀ 30 ಸೆಕೆಂಡಿನ ಕೆಲಸ: ವಿಡಿಯೋ ನೋಡಿ - 10 ಲಕ್ಷ ರೂ ಕಳ್ಳತನ
10 ವರ್ಷದ ಬಾಲಕನೋರ್ವ ಬ್ಯಾಂಕ್ನೊಳಗಿದ್ದ 10 ಲಕ್ಷ ರೂ. ದೋಚಿ ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಬಾಲಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Madhya Pradesh
ಜವಾದ್ನ ಜಿಲ್ಲಾ ಸ್ವಸಹಾಯ ಬ್ಯಾಂಕ್ನಲ್ಲಿ ಈ ಘಟನೆ ನಡೆದಿದೆ. ಬ್ಯಾಂಕ್ನೊಳಗೆ ಬಂದಿರುವ ಬಾಲಕ ಮತ್ತೋರ್ವ ವ್ಯಕ್ತಿಯ ಸಲಹೆಯಂತೆ ಕ್ಯಾಶಿಯರ್ ಕೌಂಟರ್ ಬಳಿ ಆಗಮಿಸಿದ್ದಾನೆ. ಈ ವೇಳೆ ಅಲ್ಲಿ ಇಟ್ಟಿರುವ 500 ರೂ ಮುಖಬೆಲೆಯ ಎರಡು ಕಟ್ಟು ಹಣವನ್ನು ಬ್ಯಾಗ್ನೊಳಗೆ ಹಾಕಿಕೊಂಡಿದ್ದಾನೆ. ಇದರ ಸಂಪೂರ್ಣ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬ್ಯಾಂಕ್ನಲ್ಲಿ ಅನೇಕರು ಉಪಸ್ಥಿತರಿದ್ದರೂ ಬಾಲಕನ ಕೃತ್ಯ ಯಾರ ಗಮನಕ್ಕೂ ಬಂದಿರಲಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಶೋಧ ಕಾರ್ಯ ನಡೆಸುತ್ತಿದ್ದಾರೆ.
Last Updated : Jul 15, 2020, 4:08 PM IST