ಕರ್ನಾಟಕ

karnataka

ETV Bharat / bharat

ಉಗ್ರರು ಅಡಗಿಸಿಟ್ಟಿದ್ದ ಮಷಿನ್​ ಗನ್​, ಶಸ್ತ್ರಾಸ್ತ್ರಗಳು ಪತ್ತೆ - ದೋಡಾದ ಚಿರಾಲಾ ಪ್ರದೇಶ

ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರು ಅಡಗಿಸಿಟ್ಟಿದ್ದ ಮಷಿನ್​ ಗನ್​, ಮದ್ದುಗುಂಡು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

Machine gun, ammunition found in JK militant hideout
ಉಗ್ರರು ಅಡಗಿಸಿಟ್ಟಿದ್ದ ಮಷಿನ್​ ಗನ್​, ಶಸ್ತ್ರಾಸ್ತ್ರಗಳು ಪತ್ತೆ

By

Published : Sep 7, 2020, 1:58 PM IST

ದೋಡಾ:ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಶಂಕಿತ ಉಗ್ರರು ಅಡಗಿಸಿಟ್ಟಿದ್ದ ಮಷಿನ್​ ಗನ್​, ಮದ್ದುಗುಂಡು ಹಾಗೂ ಶಸ್ತ್ರಾಸ್ತ್ರಗಳನ್ನು ಪೊಲೀಸರು ಮತ್ತು ಸೇನಾ ಪಡೆ ಪತ್ತೆ ಹಚ್ಚಿದ್ದಾರೆ.

ಉಗ್ರರು ಅಡಗಿಸಿಟ್ಟಿದ್ದ ಮಷಿನ್​ ಗನ್​, ಶಸ್ತ್ರಾಸ್ತ್ರಗಳು ಪತ್ತೆ

ದೋಡಾದ ಚಿರಾಲಾ ಪ್ರದೇಶದಲ್ಲಿನ ಉಗ್ರರ ಅಡಗುತಾಣದ ಬಗ್ಗೆ ನಿಖರ ಮಾಹಿತಿ ಮೇರೆಗೆ ಭದ್ರತಾ ಪಡೆ ಕಾರ್ಯಾಚರಣೆ ಆರಂಭಿಸಿತ್ತು. ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರು ಅಡಗಿಸಿಟ್ಟಿದ್ದ ಮಷಿನ್​ ಗನ್​, ಮದ್ದುಗುಂಡು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಚಿರಾಲಾ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.

ABOUT THE AUTHOR

...view details