ಕರ್ನಾಟಕ

karnataka

ETV Bharat / bharat

ಯುವತಿಯರ ಹುಚ್ಚಾಟ...ಆಡಿ ಕಾರ್​ ಗುದ್ದಿದ ರಭಸಕ್ಕೆ 30 ಅಡಿ​ ಎತ್ತರಕ್ಕೆ ಹಾರಿ ಬಿದ್ದು ಯುವಕ ಸಾವು! - ಜೈಪುರ್​ ರಸ್ತೆ ಅಪಘಾತ,

ನೂರೊಂದು ಕನಸುಗಳನ್ನು ಹೊತ್ತು ಕಾನ್ಸ್​ಟೇಬಲ್​ ಪರೀಕ್ಷೆ ಬರೆಯಲು ತೆರಳುತ್ತಿದ್ದ ಯುವಕನೊಬ್ಬನಿಗೆ ಐಷಾರಾಮಿ ಕಾರ್​ನಲ್ಲಿ ವೇಗವಾಗಿ ಬಂದ ಯುವತಿ ಡಿಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ಯುವಕ 30 ಅಡಿಗಳಷ್ಟು ಮೇಲಕ್ಕೆ ಹಾರಿ ರಸ್ತೆ ಪಕ್ಕದ ಅಂಗಡಿ ಮೇಲೆ ಬಿದ್ದು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಜೈಪುರ್​ನಲ್ಲಿ ನಡೆದಿದೆ.

luxury car killed to Young man, luxury car killed to Young man in Jaipur, Jaipur road accident, Jaipur road accident news, ಯುವಕನ ಸಾವಿಗೆ ಕಾರಣವಾದ ಐಷಾರಾಮಿ ಕಾರ್​, ಜೈಪುರದಲ್ಲಿ ಯುವಕನ ಸಾವಿಗೆ ಕಾರಣವಾದ ಐಷಾರಾಮಿ ಕಾರ್, ಜೈಪುರ್​ ರಸ್ತೆ ಅಪಘಾತ, ಜೈಪುರ್​ ರಸ್ತೆ ಅಪಘಾತ ಸುದ್ದಿ,
ಆಡಿ ಕಾರ್​ ಗುದ್ದಿದ ರಭಸಕ್ಕೆ 30 ಫೀಟ್​ ಎತ್ತರಕ್ಕೆ ಹಾರಿ ಬಿದ್ದು ಯುವಕ ಸಾವು

By

Published : Nov 6, 2020, 11:31 AM IST

ಜೈಪುರ್​: ಯುವತಿಯರ ಹುಚ್ಚು ಕಾರು ಚಾಲನೆಯಿಂದ ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ನಗರದ ಎಲಿವೆಟೆಡ್​ ರಸ್ತೆಯಲ್ಲಿ ನಡೆದಿದೆ.

ಮಾಹಿತಿಗಳ ಪ್ರಕಾರ, ರಾಜಸ್ಥಾನ ಪೊಲೀಸರು ಇಂದು ಕಾನ್ಸ್​ಟೇಬಲ್​ ಪರೀಕ್ಷೆ ಕೈಗೊಂಡಿದ್ದಾರೆ. ಪರೀಕ್ಷೆ ಬರೆಯಲು ಬಂದಿದ್ದ ಯುವಕ ಎಲಿವೆಟೆಡ್​ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ, ಐಷಾರಾಮಿ ಆಡಿ ಕಾರಿನಲ್ಲಿ ಬಂದ ಯುವತಿಯರು ಯುವಕನಿಗೆ ಡಿಕ್ಕಿ ಹೊಡೆದಿದ್ದಾರೆ.

ಆಡಿ ಕಾರ್​ ಗುದ್ದಿದ ರಭಸಕ್ಕೆ 30 ಫೀಟ್​ ಎತ್ತರಕ್ಕೆ ಹಾರಿ ಬಿದ್ದು ಯುವಕ ಸಾವು

ಇನ್ನು ಡಿಕ್ಕಿ ರಭಸಕ್ಕೆ ಯುವಕ 30 ಅಡಿಗಳಷ್ಟು ಮೇಲಕ್ಕೆ ಹಾರಿ ರಸ್ತೆ ಪಕ್ಕದ ಅಂಗಡಿಯೊಂದರ ಮಾಳಿಗೆ ಮೇಲೆ ಬಿದ್ದು ಸಾವನ್ನಪ್ಪಿದ್ದಾನೆ. ಈ ಅಪಘಾತದಲ್ಲಿ ಯುವಕನ ಕಾಲೊಂದು ತುಂಡಾಗಿ ಬೇರೆ ಸ್ಥಳದಲ್ಲಿ ಬಿದ್ದಿದೆ. ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಮೃತ ಯುವಕನ ಶವವನ್ನು ಎಸ್‌ಎಂಎಸ್ ಆಸ್ಪತ್ರೆಯ ಮೋರ್ಗ್‌ನಲ್ಲಿ ಇಡಲಾಗಿದ್ದು, ಅಪಘಾತದ ಬಗ್ಗೆ ಮೃತ ವ್ಯಕ್ತಿಯ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.

ಮೃತ ವ್ಯಕ್ತಿಯ ಕುಟುಂಬ ಜೈಪುರ ತಲುಪಿದ ನಂತರವೇ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಮೃತರ ಕುಟುಂಬ ಎಫ್‌ಐಆರ್ ದಾಖಲಿಸಿದ ನಂತರ ಯುವತಿಯರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಆಡಿ ಕಾರು ಮತ್ತು ಯುವತಿಯರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details