ಕರ್ನಾಟಕ

karnataka

ETV Bharat / bharat

ಇಂದು 'ಸ್ಟ್ರಾಬೆರಿ ಚಂದ್ರಗ್ರಹಣ'... ಏನು ಮಾಡಬೇಕು, ಏನು ಮಾಡಬಾರದು!? - ಚಂದ್ರಗ್ರಹಣ

ಇಂದು ವರ್ಷದ ಎರಡನೇ ಗ್ರಹಣ ಸಂಭವಿಸಲಿದೆ. ಈ ಗ್ರಹಣವು ಸಾಮಾನ್ಯ ಚಂದ್ರ ಗ್ರಹಣಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ.

Lunar Eclipse
Lunar Eclipse

By

Published : Jun 5, 2020, 2:11 AM IST

ನವದೆಹಲಿ: ಇಂದು ವರ್ಷದ ಎರಡನೇ ಚಂದ್ರಗ್ರಹಣ ಸಂಭವಿಸಲಿದ್ದು, ಸಾಮಾನ್ಯವಾಗಿ ಸಂಭವಿಸುವ ಚಂದ್ರಗ್ರಹಣಕ್ಕಿಂತ ಇದು ಭಿನ್ನವಾಗಿರಲಿದೆ. ಈ ಚಂದ್ರ ಗ್ರಹಣ ದೇಶದಲ್ಲಿಇಂದು ರಾತ್ರಿ 11:15 ಕ್ಕೆ ಪ್ರಾರಂಭವಾಗಲಿದ್ದು, ಜೂನ್ 6 ರಂದು ಮುಂಜಾನೆ 2:34 ಕ್ಕೆ ಮುಕ್ತಾಯಗೊಳ್ಳಲಿದೆ.

ಈ ಚಂದ್ರಗ್ರಹಣವನ್ನ ಬರಿಗಣ್ಣಿನಿಂದ ನೋಡಬಹುದಾಗಿದ್ದು, ಯಾವುದೇ ವಿಶೇಷ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಅವಶ್ಯಕತೆ ಇಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಭಾರತದ ಪ್ರಮುಖ ಎಲ್ಲ ನಗರಗಳಲ್ಲೂ ಇದು ಗೋಚರವಾಗಲಿದೆ.

ಏನಿದು ಸ್ಟ್ರಾಬೆರಿ ಚಂದ್ರಗ್ರಹಣ?

ಪ್ರಮುಖವಾಗಿ ನಾವು ಖಗ್ರಾಹ, ಖಂಡಗ್ರಾಸ, ತೋಳಚಂದ್ರ ಗ್ರಹಣ ಬಗ್ಗೆ ಕೇಳಿದ್ದೇವೆ. ಆದರೆ ಈ ಬಾರಿ ಸ್ಟ್ರಾಬೆರಿ ಚಂದ್ರಗ್ರಹಣ ನಡೆಯಲಿದ್ದು, ಪ್ರಮುಖವಾಗಿ ಜೂನ್ ತಿಂಗಳಿನಲ್ಲಿ ಸ್ಟ್ರಾಬೆರಿ ಹಣ್ಣುಗಳು ಸಿಜನ್​ ಇರುವುದರಿಂದ ಅದಕ್ಕೆ ಈ ಹೆಸರು ಇಡಲಾಗಿದೆ.

ಈ ಸಮಯದಲ್ಲಿ ಮೃತ್ಯುಂಜಯ ಮಂತ್ರ ಪಠಣೆ, ಆಹಾರ ಪದಾರ್ಥಗಳಲ್ಲಿ ತುಳಿಸಿ ಎಲೆ ಸೇರಿಸುವುದು ಹಾಗೂ ದಾನ ಮಾಡುವುದು ಪ್ರಮುಖ ಎಂದು ಹೇಳಲಾಗಿದೆ. ಇನ್ನು ಗ್ರಹಣದ ಸಮಯದಲ್ಲಿ ಉಳಿದ ಆಹಾರ ಸೇವನೆ ಮಾಡಬಾರದು ಎಂಬ ಸಂಪ್ರದಾಯ ಸಹ ಇದೆ.ಚಂದ್ರಗ್ರಹಣಕ್ಕೂ ಮೊದಲು ಹಾಗೂ ನಂತರ ಸ್ನಾನ ಮಾಡುವುದು. ಗರ್ಭಿಣಿಯರು ಮನೆಯಿಂದ ಹೊರಬರದಂತೆ ಸಲಹೆ ನೀಡಲಾಗಿದೆ.

ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ದಕ್ಷಿಣ ಅಮೆರಿಕ, ಫೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಅಂಟಾರ್ಟಿಕ್​​ ಭಾಗಗಳಲ್ಲೂ ಇದು ಗೋಚರವಾಗಲಿದೆ.

ABOUT THE AUTHOR

...view details