ಕರ್ನಾಟಕ

karnataka

ETV Bharat / bharat

ಕರ್ಫ್ಯೂ ಆಪತ್ತು: ಅಪಘಾತವಾದ್ರೂ ನೆರವಿಗೆ ಬಾರದ ಆ್ಯಂಬುಲೆನ್ಸ್​, 12 ಕಿ.ಮೀ ಹೆಂಡ್ತಿ ಸೈಕಲ್​ ಮೇಲೆ ಹೊತ್ತೊಯ್ದ ಗಂಡ!

ಕೊರೊನಾ ಮಹಾಮಾರಿಯಿಂದ ಹೊರಬರಲು ದೇಶದ ಮೇಲೆ ಲಾಕ್​ಡೌನ್​ ಎಂಬ ಅಸ್ತ್ರ ಬಳಕೆ ಮಾಡಲಾಗಿದ್ದು, ಇದರಲ್ಲಿ ಸಿಲುಕಿ ಜನಸಾಮಾನ್ಯರು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ.

A man carried his injured wife on a bicycle for 12 kilometers
A man carried his injured wife on a bicycle for 12 kilometers

By

Published : Mar 26, 2020, 11:49 PM IST

ಲೂಧಿಯಾನ್​(ಪಂಜಾಬ್​):ರಕ್ಕಸ ವೈರಸ್ ಕೊರೊನಾ ಯಾರಿಗೂ ಗೊತ್ತಾಗದಂತೆ ಜನಸಾಮಾನ್ಯರ ಜೀವ ಹಿಂಡುತ್ತಿದೆ. ಈ ಮಹಾಮಾರಿಯಿಂದ ಹೊರಬರಲು ದೇಶದ ಮೇಲೆ ಲಾಕ್​ಡೌನ್​ ಎಂಬ ಯುದ್ಧ ಸಾರಲಾಗಿದ್ದು, ನಿತ್ಯ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಜನರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಪಂಜಾಬ್​ನ ಲೂಧಿಯಾನ್​ದಲ್ಲಿನ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಸ್ಫೋಟಗೊಂಡ ಪರಿಣಾಮ ಮಹಿಳೆಯೊಬ್ಬರು ಕಾಲಿಗೆ ಗಂಭೀರ ಗಾಯವಾಗಿದೆ. ಆಕೆಯನ್ನ ಭಾರತ್​ನಗರ ಆಸ್ಪತ್ರೆಯಲ್ಲಿ ದಾಖಲು ಮಾಡಿದಾಗ ಗಾಯಗೊಂಡ ಕಾಲಿನ ಭಾಗಕ್ಕೆ ಚಿಕಿತ್ಸೆ ನೀಡುವ ಬದಲು ಎದೆ ಭಾಗದ ಎಕ್ಸ್​-ರೇ ಮಾಡಿದ್ದಾರೆ. ಇದರಿಂದ ಬೇಸತ್ತು ಗಂಡ ದೇವದತ್​ ಆಕೆಯನ್ನ ಭಾರತ್​ನಗರದಿಂದ ಕಂಗನ್ವಾಲ್​ಗೆ ಕರೆದುಕೊಂಡು ಬರಬೇಕಾಗಿತ್ತು. ಈ ವೇಳೆ ಆ್ಯಂಬುಲೆನ್ಸ್​ನವರು 2 ಸಾವಿರ ರೂಪಾಯಿ ಹಣ ನೀಡುವಂತೆ ಕೇಳಿಕೊಂಡರು. ಅಷ್ಟೊಂದು ಹಣವಿಲ್ಲದ ಕಾರಣ ಸೈಕಲ್​ ಮೇಲೆ ಕರೆದುಕೊಂಡು ಬಂದಿರುವೆ ಎಂದು ದೇವದತ್​ ತನ್ನ ಕಣ್ಣೀರಿನ ಕಥೆ ಹೊರಹಾಕಿದ್ದಾನೆ. ಸುಮಾರು 12 ಕಿಲೋ ಮೀಟರ್​ ಸೈಕಲ್​ ಮೇಲೆ ಆಕೆಯನ್ನ ಕೂರಿಸಿಕೊಂಡು ಬಂದಿರುವೆ ಎಂದು ಆತ ಹೇಳಿದ್ದಾನೆ.

ದೇಶಾದ್ಯಂತ ಲಾಕ್​ಡೌನ್ ಆದೇಶ ಇರುವುದರಿಂದ ಯಾವುದೇ ವಾಹನಗಳು ರೋಡ್​ಗೆ ಇಳಿಯುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಆಂಬುಲೆನ್ಸ್​​ ಸಹಾಯ ಮಾಡದಿರುವುದು ನಿಜಕ್ಕೂ ಪ್ರಜ್ಞಾವಂತ ಸಮಾಜ ತಲೆತಗಿಸುವಂತಹದ್ದು ಎಂದರೆ ಸುಳ್ಳಲ್ಲ.

ABOUT THE AUTHOR

...view details