ಲಖನೌ:ಕಿಂಗ್ ಜಾರ್ಜ್ ಮೆಡಿಕಲ್ ಯೂನಿವರ್ಸಿಟಿಯ 25 ವರ್ಷದ ಕಿರಿಯ ವೈದ್ಯರೊಬ್ಬರು, ಇಬ್ಬರು ರೋಗಿಗಳೊಂದಿಗೆ ಸಂಪರ್ಕಕ್ಕೆ ಬಂದ ನಂತರ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಕೊವಿಡ್-19 ಸೋಂಕಿಗೆ ತುತ್ತಾದ ಕೆನಡಾದ ಮಹಿಳೆ ಮತ್ತು ಅವರ ಸಂಬಂಧಿಕರೊಬ್ಬರು ಕೆಜಿಎಂಯುನ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 25 ವರ್ಷದ ಕಿರಿಯ ವೈದ್ಯರು ಈ ರೋಗಿಗಳ ಮಾದರಿಗಳನ್ನು ತೆಗೆದುಕೊಂಡಿದ್ದಾರೆ. ಇದ್ದಕ್ಕಿದ್ದಂತೆ, ಕೆಲವು ರೋಗಲಕ್ಷಣಗಳು ಅವರಲ್ಲೂ ಕಂಡುಬಂದಿವೆ.
ಅವರನ್ನು ವಿಶ್ವವಿದ್ಯಾಲಯದ ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಕೊರೊನಾ ಸೋಂಕಿಗೆ ತುತ್ತಾಗಿರುವುದು ತಿಳಿದು ಬಂದಿದೆ. ವೈದ್ಯರನ್ನು ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೆಜಿಎಂಯು ವಕ್ತಾರ ಡಾ.ಸುಧೀರ್ ಸಿಂಗ್ ತಿಳಿಸಿದ್ದಾರೆ.
ಐಸೊಲೇಷನ್ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿರುವ ಇತರ 14 ಜನರನ್ನು ಸಹ ಪರೀಕ್ಷಿಸಲಾಯಿತು. ಅವರಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ ಎಂದು ಡಾ.ಸುಧೀರ್ ಸಿಂಗ್ ತಿಳಿಸಿದ್ದಾರೆ. ಕೆಜಿಎಂಯುನಲ್ಲಿ ದಾಖಲಾದ ಇತರ ಇಬ್ಬರು ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.