ಕರ್ನಾಟಕ

karnataka

ETV Bharat / bharat

28ನೇ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಎಂ ಎಂ ನರವನೆ.. - ಸೇನಾ ಮುಖ್ಯಸ್ಥ ಸ್ಥಾನದಿಂದ ಬಿಪಿನ್​ ರಾವತ್ ನಿವೃತ್ತಿ

28ನೇ ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್​ ಜನರಲ್ ಮನೋಜ್​ ಮುಕುಂದ್​ ನರವನೆ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಸೇನಾ ಮುಖ್ಯಸ್ಥ ಸ್ಥಾನದಿಂದ ನಿವೃತ್ತಿಗೊಳ್ಳುತ್ತಿದ್ದಂತೆ, ಚೀಫ್ ಆಫ್ ಡಿಫೆನ್ಸ್ ಸ್ಟಾಫ್​ ಆಗಿ ಜನರಲ್ ಬಿಪಿನ್ ರಾವತ್ ಆಯ್ಕೆಯಾಗಿದ್ದಾರೆ.

Lt Gen MM Naravane takes over as 28th Army chief
28ನೇ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಎಂ.ಎಂ. ನರವನೆ

By

Published : Dec 31, 2019, 5:37 PM IST

ನವದೆಹಲಿ: 28ನೇ ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್​ ಜನರಲ್ ಮನೋಜ್​ ಮುಕುಂದ್​ ನರವನೆ ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ಈವರೆಗೂ ಸೇನಾ ಮುಖ್ಯಸ್ಥರಾಗಿದ್ದ ಬಿಪಿನ್​ ರಾವತ್, ತಮ್ಮ ಸೇವೆಯಿಂದ ನಿವೃತ್ತಿಗೊಂಡಿದ್ದು, ಈ ಹಿಂದೆ ಪೂರ್ವ ವಲಯದ ಸೇನಾ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ​ಎಂ.ಎಂ.ನರವನೆ ಇನ್ನುಮುಂದೆ ಸೇನೆಯನ್ನು ಮುನ್ನಡೆಸಲಿದ್ದಾರೆ.

28ನೇ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಎಂ.ಎಂ. ನರವನೆ

ಇನ್ನು ಸೇನಾ ಮುಖ್ಯಸ್ಥ ಸ್ಥಾನದಿಂದ ನಿವೃತ್ತಿಗೊಳ್ಳುತ್ತಿದ್ದಂತೆ, ದೇಶದ ಮೂರು ಸೇನಾಪಡೆಗಳ (ಭೂ ಸೇನೆ, ವಾಯುಪಡೆ, ನೌಕಾ ಪಡೆ) ಮೊದಲ ಮುಖ್ಯಸ್ಥರಾಗಿ ಜನರಲ್ ಬಿಪಿನ್ ರಾವತ್ ಆಯ್ಕೆಯಾಗಿದ್ದು, ಇನ್ನು ಮುಂದೆ ಅವರು ಚೀಫ್ ಆಫ್ ಡಿಫೆನ್ಸ್ ಸ್ಟಾಫ್​ ಆಗಿ ಕೆಲಸ ನಿರ್ವಹಿಸಲಿದ್ದಾರೆ.

ನರವನೆ ಅವರ ನೇಮಕದೊಂದಿಗೆ, ವಾಯುಪಡೆಯ ಮುಖ್ಯಸ್ಥ ಆರ್.ಕೆ.ಎಸ್ ಭದೌರಿಯಾ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಸೇರಿದಂತೆ ಈ ಮೂವರು ಸೇವಾ ಮುಖ್ಯಸ್ಥರು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ 56ನೇ ಕೋರ್ಸ್‌ನಿಂದ ಬಂದವರಾಗಿದ್ದಾರೆ.

For All Latest Updates

ABOUT THE AUTHOR

...view details