ನವದೆಹಲಿ: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಸೇವಾವಧಿ ಡಿ.31ಕ್ಕೆ ಮುಗಿಯಲಿದ್ದು, ಅವರ ಉತ್ತರಾಧಿಕಾರಿಯಾಗಿ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರವನೆ ಅವರನ್ನು ಸರ್ಕಾರ ನೇಮಕ ಮಾಡಿದೆ.
ಮುಂದಿನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಎಂ.ಎಂ.ನರವನೆ ನೇಮಕ - ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರವನೆ
ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಉತ್ತರಾಧಿಕಾರಿಯಾಗಿ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರವನೆ ಅವರನ್ನು ಸರ್ಕಾರ ನೇಮಕ ಮಾಡಿದ್ದು, ನರವನೆ ಅವರು ಸ್ವಾತಂತ್ರ್ಯೋತ್ತರ ಯುಗದ 28ನೇ ಸೇನಾ ಮುಖ್ಯಸ್ಥರಾಗಲಿದ್ದಾರೆ.

ಎಂ ಎಂ ನರವನೆ
ಎಂ.ಎಂ.ನರವನೆ ಅವರು ಪ್ರಸ್ತುತ ಪೂರ್ವ ವಲಯದ ಸೇನಾ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದು, ಸ್ವಾತಂತ್ರ್ಯೋತ್ತರ ಯುಗದ 28ನೇ ಸೇನಾ ಮುಖ್ಯಸ್ಥರಾಗಲಿದ್ದಾರೆ.
ನರವನೆ ಅವರ ನೇಮಕದೊಂದಿಗೆ, ವಾಯುಪಡೆಯ ಮುಖ್ಯಸ್ಥ ಆರ್.ಕೆ.ಎಸ್ ಭದೌರಿಯಾ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಸೇರಿದಂತೆ ಈ ಮೂವರು ಸೇವಾ ಮುಖ್ಯಸ್ಥರು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ 56ನೇ ಕೋರ್ಸ್‌ನಿಂದ ಬಂದವರಾಗಿದ್ದಾರೆ. ಇನ್ನು ಡಿ.31ರಂದು ಸೇನಾ ಮುಖ್ಯಸ್ಥರಾಗಿ ಎಂ.ಎಂ.ನರವನೆ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.