ನವದೆಹಲಿ: ಈಗಾಗಲೇ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಸೇನೆಯಲ್ಲಿ ಸಧೃಢತೆ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಿದ್ದರೆ, ಇತ್ತ ನೈರುತ್ಯ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಅಲೋಕ್ ಕ್ಲೇರ್ ದೆಹಲಿಯಿಂದ ಜೈಪುರದ ತನಕ ಸೈಕಲ್ ತುಳಿಯುವ ಮೂಲಕ ಫಿಟ್ನೆಸ್ ಬಗ್ಗೆ ವಿಶೇಷ ಜಾಗೃತಿ ಮೂಡಿಸಿದ್ದಾರೆ.
"ಫಿಟ್ನೆಸ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ, ನೈರುತ್ಯ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಅಲೋಕ್ ಕ್ಲೇರ್, ಸೇನಾ ಸಿಬ್ಬಂದಿಯೊಡನೆ ದೆಹಲಿಯಿಂದ ಜೈಪುರಕ್ಕೆ ಸೈಕಲ್ ಮೂಲಕ ತೆರಳಿದ್ದಾರೆ" ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.