ಕರ್ನಾಟಕ

karnataka

ETV Bharat / bharat

ಲೋಕಸಮರ : ಬಿಜೆಪಿ ಅಭ್ಯರ್ಥಿಗಳ ಮತ್ತೊಂದು ಲಿಸ್ಟ್ ರಿಲೀಸ್.. - ಈಟಿವಿ ಭಾರತ್

ಲೋಕಸಭೆ ಚುನಾವಣಾ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ದೆಹಲಿಯ ನಾಲ್ಕು ಮತ್ತು ಪಂಜಾಬ್, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದ ತಲಾ ಒಂದು ಕ್ಷೇತ್ರದ ಟಿಕೆಟ್‌ನ ಬಿಜೆಪಿ ಘೋಷಿಸಿದೆ. ​​

ಬಿಜೆಪಿ ಅಭ್ಯರ್ಥಿಗಳ ಮತ್ತೊಂದು ಲಿಸ್ಟ್ ರಿಲೀಸ್

By

Published : Apr 21, 2019, 10:29 PM IST

ನವದೆಹಲಿ: ಲೋಕಸಭಾ ಚುನಾವಣಾ ಅಭ್ಯರ್ಥಿಗಳ 23ನೇ ಪಟ್ಟಿಯನ್ನು ಇಂದು ಬಿಜೆಪಿ ಪ್ರಕಟಿಸಿದೆ. ಈ ಮೂಲಕ ದೆಹಲಿಯ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಬಿಜೆಪಿ ಘೋಷಿಸಿದಂತಾಗಿದೆ.

ಹಾಗೆಯೇ ಮಧ್ಯಪ್ರದೇಶ, ಪಂಜಾಬ್ ಹಾಗೂ ಉತ್ತರ ಪ್ರದೇಶದ ತಲಾ ಒಂದು ಕ್ಷೇತ್ರದ ಅಭ್ಯರ್ಥಿಯನ್ನು ಕೂಡ ಅನೌನ್ಸ್ ಮಾಡಲಾಗಿದೆ.

ದೆಹಲಿಯ ಚಾಂದ್ನಿ ಚೌಕ್​ ಕ್ಷೇತ್ರದಿಂದ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಡಾ.ಹರ್ಷವರ್ಧನ್, ಈಶಾನ್ಯ ಕ್ಷೇತ್ರದಿಂದ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ಪಶ್ಚಿಮ ದೆಹಲಿಯಿಂದ ಪ್ರವೇಶ್ ವರ್ಮಾ ಹಾಗೂ ದಕ್ಷಿಣ ದೆಹಲಿಯಿಂದ ರಮೇಶ್ ವಿಧುರಿಗೆ ಬಿಜೆಪಿ ಟಿಕೆಟ್ ನೀಡಿದೆ.ಬಿಜೆಪಿಯ ಕೇಂದ್ರ ಚುನಾವಣಾ ಆಯೋಗವು ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿ, ಪ್ರೆಸ್ ರಿಲೀಸ್ ಮಾಡಿದೆ.

ABOUT THE AUTHOR

...view details