ಕರ್ನಾಟಕ

karnataka

ETV Bharat / bharat

ಹೊಸ ದಾಖಲೆ ಸೃಷ್ಟಿಸಿದ ಲೋಕಸಭೆ: ಮೊದಲ ಬಾರಿಗೆ ಮಧ್ಯರಾತ್ರಿ 12.34ರವರೆಗೆ ಶೂನ್ಯ ಅವಧಿಗೆ ಅವಕಾಶ!

ಲೋಕಸಭೆ ರಚಿನೆಯಾದ ನಂತರ ಇದೇ ಮೊದಲ ಬಾರಿಗೆ ಶೂನ್ಯ ಅವಧಿಗೆ ಸುಮಾರು ಎರಡು ಗಂಟೆಗಳವರೆಗೆ ಅವಕಾಶ ನೀಡುವ ಮೂಲಕ ಸ್ಪೀಕರ್ ಓಂ ಬಿರ್ಲಾ ದಾಖಲೆ ಬರೆದಿದ್ದಾರೆ.

lok sabha speaker Om Birla
ಲೋಕಸಭೆ ಸ್ಪೀಕರ್ ಓಂ ಬಿರ್ಲಾ

By

Published : Sep 21, 2020, 9:14 AM IST

ನವದೆಹಲಿ: ಹೆಚ್ಚಿನ ಭಾರತೀಯರು ನಿದ್ರೆಯಲ್ಲಿದ್ದಾಗ ನಡೆಯುತ್ತಿರುವ ಮಾನ್ಸೂನ್ ಅಧಿವೇಶನ ಲೋಕಸಭೆಯು ಸಂಸತ್ತಿನ ಇತಿಹಾಸದಲ್ಲಿ 'ತುರ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳು' ಕೇಳುವ ಮೂಲಕ ಮತ್ತೊಂದು ದಾಖಲೆ ಬರೆದಿದೆ.

ಭಾನುವಾರ ಮಧ್ಯಾಹ್ನ 3 ಗಂಟೆಗೆ ತನ್ನ ಪ್ರಕ್ರಿಯೆಯನ್ನು ಪ್ರಾರಂಭಿಸಿದ ಕೆಳಮನೆ, ಅಧಿವೇಶನವನ್ನು ಮಧ್ಯರಾತ್ರಿ 12.34ಕ್ಕೆ ಮುಕ್ತಾಯಗೊಳಿಸಿತು. ಸಂಸದರು ಎತ್ತಿದ 'ತುರ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳು' ಕೇಳಲು ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಹಲವಾರು ಸಂಸದರು ಮತ್ತು ಅಧಿಕಾರಿಗಳು, ಲೋಕಸಭೆ ರಚನೆಯಾದ ನಂತರ ಇದೇ ಮೊದಲ ಬಾರಿಗೆ ಶೂನ್ಯ ಅವಧಿಗೆ ಸುಮಾರು ಎರಡು ಗಂಟೆಗಳವರೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಮಾನ್ಸೂನ್ ಅಧಿವೇಶನದ 'ಶೂನ್ಯ ಅವಧಿ'ಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ ಸ್ಪೀಕರ್ ಓಂ ಬಿರ್ಲಾ, ತಮ್ಮ ವಿಷಯಗಳನ್ನು ಒಂದು ನಿಮಿಷದೊಳಗೆ ಮುಗಿಸುವಂತೆ ಸಂಸತ್ ಸದಸ್ಯರನ್ನು ವಿನಂತಿಸಿದರು. "ನಾನು ಪ್ರತೀ ಸಂಸದರಿಗೆ ಶೂನ್ಯ ಅವಧಿ ಸಮಯದಲ್ಲಿ ಸಾಕಷ್ಟು ಅವಕಾಶಗಳನ್ನು ನೀಡುತ್ತೇನೆ. ಆದರೆ ಸಾಕಷ್ಟು ಸಮಯವಿಲ್ಲ" ಎಂದು ಬಿರ್ಲಾ ರಾತ್ರಿ 10.30ರ ಸುಮಾರಿಗೆ ಪ್ರಾರಂಭವಾದ ಶೂನ್ಯ ಅವಧಿಯನ್ನು 2 ಗಂಟೆ ನಡೆಸುವ ಮೂಲಕ ಇತಿಹಾಸ ರಚಿಸುವ ಮೊದಲು ಹೇಳಿದ್ದರು.

ಕೋವಿಡ್ -19 ಮುನ್ನೆಚ್ಚರಿಕೆಗಳಿಂದಾಗಿ ಸೆಪ್ಟೆಂಬರ್ 14ರಂದು ಪ್ರಾರಂಭವಾದ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಶೂನ್ಯ ಅವಧಿಗೆ ಅರ್ಧ ಗಂಟೆಯ ಸಮಯವನ್ನು ನಿಗದಿಪಡಿಸಲು ನಿರ್ಧರಿಸಲಾಗಿತ್ತು. ಆದ್ರೆ ಗಡಿಯಾರವು 12 ಗಂಟೆ ಹೊಡೆದ ಕೂಡಲೇ ಸ್ಪೀಕರ್ ಮತ್ತೆ ಸದನದ ಸಮಯವನ್ನು ಅರ್ಧ ಗಂಟೆಯವರೆಗೆ ವಿಸ್ತರಿಸಿದರು ಮತ್ತು 'ಶೂನ್ಯ ಅವಧಿ' ಸಮಯದಲ್ಲಿ ಮಾತನಾಡಲು ಅವಕಾಶ ಪಡೆದ ಎಲ್ಲಾ ಸಂಸದರಿಗೆ ಅವಕಾಶ ನೀಡಿದರು.

ABOUT THE AUTHOR

...view details