ನವದೆಹಲಿ:ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಗೃಹ ಬಳಕೆಯ ಸಬ್ಸಿಡಿ ಸಹಿತ ಹಾಗೂ ಸಬ್ಸಿಡಿ ರಹಿತ ಅಡುಗೆ ಅನಿಲದಲ್ಲಿ ದರ ಏರಿಕೆ ಆಗಲಿದ್ದು, ಪರಿಷ್ಕೃತ ಬೆಲೆಯು ಜೂನ್ 1ರಿಂದಲೇ ಜಾರಿಗೆ ಬರುತ್ತಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಬ್ಸಿಡಿ ಮೂಲಕ ವಿತರಿಸುವ 14.2 ಕೆ.ಜಿ. ಸಿಲಿಂಡರ್ ಮೇಲೆ ₹ 1.23 ಏರಿಕೆಯಾಗಿ ಸದ್ಯ ₹ 497.37ಕ್ಕೆ ಫಲಾನುಭವಿಗಳಿಗೆ ದೊರೆಯಲಿದೆ. ಸಬ್ಸಿಡಿ ರಹಿತ ಸಿಲಿಂಡರ್ ಮೇಲೆ ₹ 25 ಏರಿಕೆಯಾಗಿ ಈ ಹಿಂದೆ ₹ 712.50 ಇದ್ದದ್ದು ₹ 737.50ಕ್ಕೆ ಸಿಗಲಿದೆ.