ಕರ್ನಾಟಕ

karnataka

ETV Bharat / bharat

ದೆಹಲಿ, ರಾಜಸ್ಥಾನದಲ್ಲಿ ಲಘು ಭೂಕಂಪ - ದೆಹಲಿಯಲ್ಲಿ ಭೂಕಂಪನ

ಇಂದು ಮಧ್ಯಾಹ್ನ 1 ಗಂಟೆ ವೇಳೆಗೆ ರಾಷ್ಟ್ರ ರಾಜಧಾನಿಯಲ್ಲಿ 2.1 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದ್ರೆ, ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.

earthquake in delhi
ಭೂಕಂಪನ

By

Published : Jun 8, 2020, 4:18 PM IST

Updated : Jun 8, 2020, 5:58 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್​ ಮಾಪನದಲ್ಲಿ 2.1ರಷ್ಟು ತೀವ್ರತೆ ದಾಖಲಾಗಿದೆ.

ಭೂಕಂಪನದ ಕೇಂದ್ರ ಬಿಂದು ದೆಹಲಿ-ಗುರ್​ಗಾಂವ್ ಗಡಿಯಲ್ಲಿದ್ದು, ಮಧ್ಯಾಹ್ನ 1 ಗಂಟೆ ವೇಳೆಗೆ ಭೂಮಿ ಕಂಪಿಸಿದೆ. ಭೂಕಂಪನದಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ನ್ಯಾಷನಲ್​ ಸೆಂಟರ್​​ ಫಾರ್ ಸಿಸ್ಮೋಲಜಿ ತಿಳಿಸಿದೆ. ಕಳೆದ ವಾರ ಉತ್ತರ ಪ್ರದೇಶದ ನೋಯ್ಡಾದಲ್ಲಿ ಭೂಕಂಪನ ಸಂಭವಿಸಿದ ಬಳಿಕ ದೆಹಲಿಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು.

ಇತ್ತ ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ 3.16 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ನ್ಯಾಷನಲ್​ ಸೆಂಟರ್​​ ಫಾರ್ ಸಿಸ್ಮೋಲಜಿ (ಎನ್‌ಸಿಎಸ್) ತಿಳಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ಹಾನಿಯಾಗಿಲ್ಲ ಎಂದು ಮಾಹಿತಿ ನೀಡಿದೆ.

ಅಂಬಮಾಟಾ, ಸೂರಜ್‌ಪೋಲ್, ದೆಹಲಿ ಗೇಟ್, ಮತ್ತು ಚಾಂದ್‌ಪೋಲ್ ಪ್ರದೇಶಗಳು ಸೇರಿದಂತೆ ಪಟ್ಟಣದ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ, ಶೀಘ್ರದಲ್ಲೇ ಕೇಂದ್ರಬಿಂದುವನ್ನು ಪ್ರಕಟಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ.

Last Updated : Jun 8, 2020, 5:58 PM IST

ABOUT THE AUTHOR

...view details