ಗುರುದಾಸ್‌ಪುರ: ಮದುವೆಯಾಗಲು ಯುವತಿ ನಿರಾಕರಿಸಿದ್ದಕ್ಕೆ ಯುವಕನೊಬ್ಬ ಆಕೆಯ ಮೇಲೆ ಆಸಿಡ್ ದಾಳಿ ಮಾಡಿ ಅಮಾನವೀಯ ವರ್ತನೆ ತೋರಿರುವ ಘಟನೆ ಟಿಬ್ರಾ ಗ್ರಾಮದಲ್ಲಿ ಜರುಗಿದೆ.
ಮದುವೆಗೆ ನಕಾರ: ಯುವತಿ ಮೇಲೆ ಆಸಿಡ್ ದಾಳಿ, ತಂದೆಯ ಕಾಲು ಮುರಿದು ಕ್ರೌರ್ಯ
ಮದುವೆ ಆಗಲು ನಿರಾಕರಿಸಿದ್ದಕ್ಕೆ ಯುವಕನೊಬ್ಬ ಯುವತಿ ಮೇಲೆ ತನ್ನ ಕ್ರೌರ್ಯ ಮೆರೆದಿದ್ದಾನೆ. ಅಲ್ಲದೇ, ಯುವತಿಯ ತಂದೆಯ ಕಾಲನ್ನು ಮುರಿದಿದ್ದಾನೆ. ಈಗ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಈವರೆಗೂ ಆರೋಪಿಯ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಗುರುದಾಸ್‌ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆ ನಡೆದು ಹತ್ತು ದಿನಗಳು ಕಳೆದರೂ ಪೊಲೀಸರು ಈವರೆಗೂ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಈ ಯುವತಿಗೆ ಮಾತ್ರವಲ್ಲದೇ ಈಕೆಯ ಪೋಷಕರ ಮೇಲೂ ಯುವಕ ಹಲ್ಲೆ ಮಾಡಿದ್ದಾನೆ. ಯುವತಿಯ ತಂದೆಯ ಕಾಲು ಮುರಿದಿದ್ದು, ಆಸಿಡ್ ದಾಳಿ ಪರಿಣಾಮ ಯುವತಿಯ ಕಾಲು ಮತ್ತು ತೋಳುಗಳಿಗೆ ಗಾಯಗಳಾಗಿವೆ.
ಕುಟುಂಬದ ಪ್ರಕಾರ, ಬಾಲಕನ ಸಂಬಂಧಿಯೊಬ್ಬ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಹಿನ್ನೆಲೆ 10 ದಿನ ಕಳೆದರೂ ಆರೋಪಿಗಳ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಆರೋಪಿಸಿದ್ದಾರೆ.