ವಾಷಿಂಗ್ಟನ್:ಅಮೆರಿಕಾವು ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಈ ಎರಡೂ ದೇಶಗಳ ನಡುವೆ ಹಲವು ಸಂಗತಿಗಳು ನಡೆಯುತ್ತಿವೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ನಾವು ಭಾರತದೊಂದಿಗೆ ಹಲವು ವಿಭಿನ್ನ ವಿಚಾರಗಳ ಬಗ್ಗೆ ವ್ಯವಹರಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ನನ್ನ ಅತ್ಯುತ್ತಮ ಗೆಳೆಯ. ಇದನ್ನು ನೀವು ಹೋಸ್ಟನ್ನಲ್ಲಿ ಕಂಡಿರಬಹುದು. ಇನ್ನು ಭಾರತ ಹಾಗೂ ಅಮೆರಿಕಾ ನಡುವೆ ಹಲವು ವಿಚಾರಗಳು ನಡೆಯಲಿದೆ ಎಂದು ಭಾರತದೊಂದಿಗಿನ ವ್ಯಾಪಾರ-ವ್ಯವಹಾರದ ಅಭಿವೃದ್ಧಿ ಬಗೆಗೆ ಮಾಧ್ಯಮದವರ ಪ್ರಶ್ನೆಗೆ ಟ್ರಂಪ್ ಉತ್ತರಿಸಿದ್ದಾರೆ.