ಚೆನ್ನೈ:1978ರಲ್ಲಿ ತಮಿಳುನಾಡಿನ ನಾಗಪಟ್ಟಣಂನ ವಿಷ್ಣು ದೇವಸ್ಥಾನದಿಂದ ಕದ್ದ ವಿಜಯನಗರ ಕಾಲದ ಮೂರು ವಿಗ್ರಹ ಇದೀಗ ಭಾರತಕ್ಕೆ ವಾಪಸ್ ಬಂದಿವೆ. ಕ್ರಿ.ಶಕೆ 15ನೇ ಶತಮಾನದ ಭಗವಾನ್ ರಾಮ, ಸೀತೆ ಹಾಗೂ ಲಕ್ಷ್ಮಣ್ರ ವಿಗ್ರಹಗಳು ಇವಾಗಿವೆ.
ವಿಜಯನಗರ ಸಾಮ್ರಾಜ್ಯದ ರಾಮ, ಸೀತೆ, ಲಕ್ಷ್ಮಣರ ವಿಗ್ರಹ ಭಾರತಕ್ಕೆ ನೀಡಿದ ಲಂಡನ್! - ಲಕ್ಷ್ಮಣ್ರ ವಿಗ್ರಹ
15ನೇ ಶತಮನಾದ ವಿಜಯನಗರ ಸಾಮ್ರಾಜ್ಯದ ಮೂರು ವಿಗ್ರಹ ಇದೀಗ ಭಾರತಕ್ಕೆ ವಾಪಸ್ ಆಗಿದ್ದು, ಲಂಡನ್ ಅಧಿಕಾರಿಗಳಿಗೆ ಕೇಂದ್ರ ಸಚಿವರು ಧನ್ಯವಾದ ಹೇಳಿದ್ದಾರೆ.
1978ರಲ್ಲಿ ದೇವಾಲಯದಿಂದ ಈ ವಿಗ್ರಹಗಳು ಕಳ್ಳತನವಾಗಿದ್ದವು. ಇದೀಗ ಭಾರತದ ಹೈಕಮಿಷನ್, ಮೆಟ್ರೋಪಾಲಿಟನ್ ಪೊಲೀಸರ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಲಾಗಿತ್ತು. 40 ವರ್ಷಗಳ ಬಳಿಕ ಈ ವಿಗ್ರಹಗಳು ಲಂಡನ್ನಿಂದ ಭಾರತಕ್ಕೆ ವಾಪಸ್ ಮಾಡಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ಮಾತನಾಡಿದ್ದು, ಲಂಡನ್ ಅಧಿಕಾರಿಗಳು 15ನೇ ಶತಮಾನದ ಈ ವಿಗ್ರಹಗಳನ್ನ ವಾಪಸ್ ನೀಡಿದ್ದಾರೆ ಎಂದಿದ್ದಾರೆ. ಈ ವಿಗ್ರಹಗಳು ಭಾರತಕ್ಕೆ ಸೇರಿದ್ದು, 1978ರಲ್ಲಿ ತಮಿಳುನಾಡಿನ ದೇವಾಲಯದಿಂದ ಕಳ್ಳತನ ಮಾಡಲಾಗಿತ್ತು ಎಂದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಯುಕೆ ಅಧಿಕಾರಿಗಳು ಭಾರತಕ್ಕೆ ಇದೇ ರೀತಿಯ ಎರಡು ವಿಗ್ರಹ ಹಸ್ತಾಂತರ ಮಾಡಿದ್ದರು.