ಕೇರಳ: ಮಕರವಿಲಕ್ಕು ಹಬ್ಬಕ್ಕಾಗಿ (ಮಕರ ಸಂಕ್ರಾಂತಿ) ಅಯ್ಯಪ್ಪ ಸನ್ನಿಧಾನ ಶಬರಿಮಲೆ ದೇವಸ್ಥಾನವನ್ನು ತೆರೆಯಲಾಯಿತು. ನಾಳೆ ಬೆಳಗ್ಗೆಯಿಂದ ದೇವಾಲಯದ ಒಳಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು.
ಸಂಜೆ 5.00ಕ್ಕೆ ಬೆಟ್ಟದ ದೇವಾಲಯವನ್ನು ತೆರೆಯಲಾಗಿದ್ದರೂ, ಗುರುವಾರ ಬೆಳಗ್ಗೆಯಿಂದಲೇ ಭಕ್ತರಿಗೆ ಪ್ರವೇಶಿಸಲು ಅವಕಾಶವಿದೆ ಎಂದು ದೇವಾಲಯವನ್ನು ನಿರ್ವಹಿಸುವ ಟ್ರವಂಕೂರ್ ದೇವಸ್ವಂ ಮಂಡಳಿಯ (ಟಿಡಿಬಿ) ಅಧಿಕಾರಿಗಳು ತಿಳಿಸಿದ್ದಾರೆ.
ಬಾಗಿಲು ತೆರೆದ ಶಬರಿಮಲೆ ಅಯ್ಯಪ್ಪ ದೇವಾಲಯ ಶುಭ ಮಕರವಿಲಕ್ಕು ಉತ್ಸವವನ್ನು (ಮಕರ ಸಂಕ್ರಾಂತಿ) ಜನವರಿ 14ರಂದು ಆಚರಿಸಲಾಗುತ್ತಿದ್ದು, ಜನವರಿ 20ರಂದು ದೇವಾಲಯವನ್ನು ಮುಚ್ಚಲಾಗುವುದು. ಕೋವಿಡ್-19 ನಿರ್ಬಂಧಗಳಿಂದಾಗಿ, ದಿನಕ್ಕೆ 5,000 ಭಕ್ತರಿಗೆ ಮಾತ್ರ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಲಾಗುತ್ತದೆ.
ಕೋವಿಡ್-19 ನೆಗೆಟಿವ್ ಪ್ರಮಾಣಪತ್ರವನ್ನು ಹೊಂದಿರುವ ಯಾತ್ರಿಕರಿಗೆ ಮಾತ್ರ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದು ಟಿಡಿಬಿ ಅಧಿಕಾರಿಗಳು ತಿಳಿಸಿದ್ದಾರೆ.