ಕರ್ನಾಟಕ

karnataka

ETV Bharat / bharat

ಜಪಾನ್ ಪಿಎಂ ಆಗಿ ಆಯ್ಕೆಯಾದ ಸುಗಾಗೆ ಪ್ರಧಾನಿ ಮೋದಿ ಅಭಿನಂದನೆ - ಪ್ರಧಾನಿ ಮೋದಿ ಟ್ವೀಟ್

ಜಪಾನ್ ಪ್ರಧಾನಿ ಸ್ಥಾನಕ್ಕೆ ಯೊಶಿಹಿದೆ ಸುಗಾ ಆಯ್ಕೆಯಾಗಿದ್ದು, ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

Modi
ಪ್ರಧಾನಿ ಮೋದಿ

By

Published : Sep 16, 2020, 2:47 PM IST

ನವದೆಹಲಿ:ಜಪಾನ್​ಗೆ ನೂತನ ಪ್ರಧಾನಿ ಹುದ್ದೆಗೆ ನೂತನವಾಗಿ ಆಯ್ಕೆಯಾಗಿರುವ ಯೊಶಿಹಿದೆ ಸುಗಾ ಅವರಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಉಭಯ ರಾಷ್ಟ್ರಗಳು ಜಂಟಿಯಾಗಿ ಜಾಗತಿಕ ಸಹಭಾಗಿತ್ವದಲ್ಲಿ ಪಾಲ್ಗೊಳ್ಳುವುದನ್ನು ಭಾರತ ಬಯಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಯೊಶಿಹಿದೆ ಸುಗಾ ಬುಧವಾರ ಪ್ರಧಾನಮಂತ್ರಿ ಹುದ್ದೆಗೆ ಅಲ್ಲಿನ ಸಂಸತ್ತಿನ ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

ಶಿಂಜೋ ಅಬೆ ಅನಾರೋಗ್ಯ ಕಾರಣಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದರು. ಇದಾದ ನಂತರ ಸುಗಾ ಅವರು ಆಡಳಿತ ಪಕ್ಷದಿಂದ ಪ್ರಧಾನಿ ಅಭ್ಯರ್ಥಿಯಾಗಿ ನಾಮಕರಣಗೊಂಡಿದ್ದಾರೆ.

ABOUT THE AUTHOR

...view details