ಕರ್ನಾಟಕ

karnataka

ETV Bharat / bharat

ಜೀವ ಪಡೆದ ಲೋಕಪಾಲ್​ ಸಂಸ್ಥೆ: ಭ್ರಷ್ಟರ ಬೇಟೆಗೆ ಅಧಿಕೃತ ಚಾಲನೆ - ನವದೆಹಲಿ

ಲೋಕಪಾಲ್​ ಸಂಸ್ಥೆಯ ಸದಸ್ಯರು ಇಂದು ಅಧಿಕಾರ ಸ್ವೀಕರಿಸಿದರು.

ಇಂದು ಅಧಿಕಾರ ಸ್ವೀಕರಿಸಿದ ಲೋಕಪಾಲ್​ ಸಂಸ್ಥೆಯ ಸದಸ್ಯರು

By

Published : Mar 27, 2019, 3:06 PM IST

ನವದೆಹಲಿ:ಹಲವು ವರ್ಷಗಳಿಂದ ಕಾಗದದ ಮೇಲೆಷ್ಟೇ ಉಳಿದಿದ್ದ ಲೋಕಪಾಲ್​ ಸಂಸ್ಥೆಗೆ ಇದೀಗ ಜೀವ ಬಂದಿದೆ. ಭ್ರಷ್ಟರ ಬೇಟೆಗೆ ರಚಿಸಲಾದ ಶಕ್ತಿಯುತ ಸಂಸ್ಥೆಗೆ ಅಧಿಕೃತ ಚಾಲನೆ ಸಿಕ್ಕಿದೆ.

ಚುನಾವಣೆ ಹೊಸ್ತಿಲಲ್ಲೇ ಮೊದಲ ಲೋಕಪಾಲರಾಗಿ ಆಯ್ಕೆಯಾಗಿರುವ ನ್ಯಾ. ಪಿನಕಿ ಚಂದ್ರ ಘೋಷ್​ ಅವರು ನಿನ್ನೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು. ಅಂತೆಯೆ, ಇಂದು ಲೋಕಪಾಲ್​ ಸಂಸ್ಥೆಯ ಸದಸ್ಯರು ಪ್ರತಿಜ್ಞಾವಿಧಿ ಕೈಗೊಂಡು, ಅಧಿಕಾರ ವಹಿಸಿಕೊಂಡರು.

ವಿವಿಧ ಹೈಕೋರ್ಟ್​ಗಳ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ದಿಲೀಪ್​ ಬಿ ಭೋಸಲೆ, ಪ್ರದೀಪ್​ ಕುಮಾರ್​ ಮೊಹಾಂತಿ, ಅಭಿಲಾಶ ಕುಮಾರಿ ಹಾಗೂ ಅಜಯ್​ ಕುಮಾರ್​ ತ್ರಿಪಾಠಿ ನ್ಯಾಯಾಂಗೀಯ ಸದಸ್ಯರಾಗಿ ಅಧಿಕಾರ ವಹಿಸಿಕೊಂಡರು.

ಸಶಸ್ತ್ರ ಸೀಮಾ ಬಲದ ಮೊದಲ ಮಹಿಳಾ ಮುಖ್ಯಸ್ಥೆ ಅರ್ಚನಾ ರಾಮಸುಂದರಂ, ಮಹಾರಾಷ್ಟ್ರದ ಮಾಜಿ ಮುಖ್ಯ ಕಾರ್ಯದರ್ಶಿ ದಿನೇಶ್​ ಕುಮಾರ್​ ಜೈನ್​, ಮಾಜಿ ಐಆರ್​ಎಸ್​ ಅಧಿಕಾರಿ ಮಹೇಂದರ್​ ಸಿಂಗ್​ ಹಾಗೂ ಗುಜರಾತ್​ನ ಮಾಜಿ ಐಎಎಸ್​ ಅಧಿಕಾರಿ ಇಂದ್ರಜಿತ್​ ಪ್ರಸಾದ್​ ಗೌತಮ್​ ಲೋಕಪಾಲ್​ ಸಂಸ್ಥೆಯ ಇತರೆ ಸದಸ್ಯರಾಗಿ ಅಧಿಕಾರಿ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಹಿಮಾಚಲ ಪ್ರದೇಶ ಮಾಜಿ ಸಿಎಂ ವೀರಭದ್ರ ಸಿಂಗ್​, ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್​ ಸಿಂಗ್​ ಹಾಗೂ ಛತ್ತೀಸ್​ಗಢದ ಸಚಿವ ಟಿಎಸ್​ ಸಿಂಗ್​ ಡಿಯೋ ಸೇರಿ ಹಿರಿಯ ರಾಜಕೀಯ ನಾಯಕರು ಹಾಗೂ ಸರ್ಕಾರಿ ಅಧಿಕಾರಿಗಳು ಉಪಸ್ಥಿತಿರಿದ್ದರು.


ABOUT THE AUTHOR

...view details