ನವದೆಹಲಿ: ಮಹಾಮಾರಿ ಕೊರೊನಾ ವೈರಸ್ನಿಂದ ಎಲ್ಲೆಡೆ ಆರ್ಥಿಕ ಸಂಕಷ್ಟ ಉಂಟಾಗಿದ್ದು, ಇದೀಗ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರ ಸಂಬಳದಲ್ಲಿ ಶೇ.30ರಷ್ಟು ಕಡಿತಗೊಳಿಸಲು ನಿರ್ಧರಿಸಲಾಗಿದೆ. ಒಂದು ವರ್ಷದ ಮಟ್ಟಿಗೆ ಸಂಬಳ ಕಡಿತಗೊಳಿಸಲು ನಿರ್ಧರಿಸಲಾಗಿದೆ.
ಕೊರೊನಾ ತಂದಿಟ್ಟ ಸಂಕಷ್ಟ: ವರ್ಷದ ಮಟ್ಟಿಗೆ ಸಂಸತ್ ಸದಸ್ಯರ ಸಂಬಳದಲ್ಲಿ ಶೇ.30ರಷ್ಟು ಕಡಿತ - ಸಂಸದರ ಸಂಬಳ ಶೇ.30ರಷ್ಟು ಕಡಿತ
ಸಂಸತ್ ಸದಸ್ಯರ ಸಂಬಳವನ್ನ ಶೇ.30ರಷ್ಟು ಕಡಿತಗೊಳಿಸುವ ಮಸೂದೆಯನ್ನ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಲೋಕಸಭೆಯಲ್ಲಿ ಮಂಡಿಸಿದ್ದಾರೆ.
Lok Sabha passes bill
ಮಹಾಮಾರಿ ಕೊರೊನಾ ವೈರಸ್ ಕಾರಣದಿಂದ ವರ್ಷದ ಮಟ್ಟಿಗೆ ಸಂಸದರ ಸಂಬಳ ಶೇ.30ರಷ್ಟು ಕಡಿತಗೊಳಿಸುವ ಮಸೂದೆಯನ್ನ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಲೋಕಸಭೆಯಲ್ಲಿ ಮಂಡಿಸಿದರು.
ಸಂಸತ್ ಸದಸ್ಯರ ಸಂಬಳ, ಭತ್ಯೆ ಮತ್ತು ಪಿಂಚಣಿ ತಿದ್ದುಪಡಿ ಮಸೂದೆ 2020 ಮಂಡನೆಯಾಗಿದ್ದು, ಇದೀಗ ಲೋಕಸಭೆ ಹಾಗೂ ರಾಜ್ಯಸಭೆಗಳ ಸಮ್ಮತಿ ಸಿಗಬೇಕಾಗಿದೆ. 1954ರಲ್ಲಿ ಈ ಕಾಯ್ದೆ ಜಾರಿಗೆ ಬಂದಿದ್ದು, ಇದೀಗ ಪ್ರಹ್ಲಾದ್ ಜೋಶಿ ತಿದ್ದುಪಡಿ ಮಸೂದೆ ಮಂಡಿಸಿದ್ದಾರೆ.