ಕರ್ನಾಟಕ

karnataka

ETV Bharat / bharat

ಕೊರೊನಾ ಭೀತಿ: ಸಂಸದರು, ಸಂದರ್ಶಕರಿಗೆ ಲೋಕಸಭೆ ಸಲಹೆ - Lok Sabha issues advisory for MPS over corona Virus fear

ಮಾರ್ಚ್ 11ರ ಹೋಳಿ ಆಚರಣೆ ಬಳಿಕ ಲೋಕಸಭೆ ಕಲಾಪಗಳು ಪುನಾರಂಭವಾಗಲಿದ್ದು, ಕೊರೊನಾ ವೈರಸ್​ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದ್ದು, ಸಂಸತ್​ ಪ್ರವೇಶಿಸುವ ಸಂಸದರು ಹಾಗೂ ಸಂದರ್ಶಕರಿಗೆ ಕೆಲವು ಸುರಕ್ಷತಾ ಸಲಹೆಗಳನ್ನು ನೀಡಲಾಗಿದೆ.

Lok Sabha issues advisory for MPS over corona Virus fear
ಲೋಕಸಭೆ

By

Published : Mar 6, 2020, 10:27 PM IST

ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್​ ಹರಡುವ ಭೀತಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಲೋಕಸಭೆಯಲ್ಲಿ ಕೂಡ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಲಾಗಿದೆ.

ಮಾರ್ಚ್ 11ರ ಹೋಳಿ ಆಚರಣೆ ಬಳಿಕ ಲೋಕಸಭೆ ಕಲಾಪಗಳು ಪುನಾರಂಭವಾಗಲಿದ್ದು, ಸಂಸತ್​ ಪ್ರವೇಶಿಸುವ ಸಂಸದರು ಹಾಗೂ ಸಂದರ್ಶಕರಿಗೆ ಈ ಕೆಳಗಿನ ಕೆಲವು ಸುರಕ್ಷತಾ ಸಲಹೆಗಳನ್ನು ಇಂದು ಲೋಕಸಭೆ ನೀಡಿದೆ.

1. ಉಸಿರಾಟ, ಕೈಗಳ ಶುಚಿತ್ವ ಸೇರಿದಂತೆ ಸಾಮಾನ್ಯ ನೈರ್ಮಲ್ಯದ ಕುರಿತು ಜಾಗೃತಿ ವಹಿಸಲು ಸೂಚನೆ

2. ಮುಂದಿನ ವಾರದಿಂದ ಸಂಸತ್​ನ ಒಳಗೆ ಯಾವುದೇ ಸಂದರ್ಶಕರನ್ನು ಸಂಸದರು ಭೇಟಿ ಮಾಡುವಂತಿಲ್ಲ ಹಾಗೂ ವಿನಾಕಾರಣ ಅಥವಾ ಅನಧಿಕೃತ ಕಾರಣಗಳಿಗೆ ಸಂದರ್ಶಕರು ಲೋಕಸಭೆಯನ್ನ ಪ್ರವೇಶಿಸುವಂತಿಲ್ಲ.

3. ಸಂಸತ್ತಿನ ಆವರಣದಲ್ಲಿ ದೊಡ್ಡ ದೊಡ್ಡ ಗುಂಪಾಗಿ ಸೇರುವಂತಿಲ್ಲ.

4. ಸಂಸದರನ್ನು ಭೇಟಿಯಾಗಲು ಬರುವ ಎಲ್ಲರಿಗೂ ರಿಸೆಪ್ಷನ್‌ ಕೇಂದ್ರದಲ್ಲಿ ಮಾತ್ರ ಒಂದು ಗಂಟೆ ಇರಲು ಅವಕಾಶ.

5. ಸಂಸದರನ್ನು ಭೇಟಿಯಾಗಲು ಬರುವ ಸಂದರ್ಶಕರಿಗೆ ಬಿಳಿ ಬಣ್ಣದ ಪಾಸ್ ನೀಡಲಾಗುತ್ತದೆ. ಆದರೆ ಅವರಿಗೆ ರಿಸೆಪ್ಷನ್‌ ಕೇಂದ್ರ ಬಿಟ್ಟು ಬೇರೆಡೆ ಹೋಗಲು ಅವಕಾಶವಿಲ್ಲ.

6. ಸಾಮಾನ್ಯ ಸಂದರ್ಶಕರಿಗೆ ನೀಲಿ ಬಣ್ಣದ ಪಾಸ್​, ಆದರೆ ಇದು ಸಂಸತ್ತಿನ ಕೆಲ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುತ್ತದೆ.

ABOUT THE AUTHOR

...view details