ಲಖನೌ: ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ ಪರಿಸ್ಥಿತಿ ಉದ್ವಗ್ನಿವಾಗಿದ್ದು, ಇನ್ನೆರಡು ತಿಂಗಳಲ್ಲಿ ನಡೆಯುವ ಲೋಕಸಭಾ ಚುನಾವಣೆ ಮೇಲೆ ಕರಿನೆರಳು ಆವರಿಸಿದೆ.
ಗಡಿ ಉದ್ವಿಗ್ನ : ಲೋಕಸಭಾ ಚುನಾವಣೆ ಬದಲಾವಣೆ ಆಗಲ್ಲ
ಅಭ್ಯರ್ಥಿಗಳು ವಿದೇಶಗಳಲ್ಲಿ ಇರುವ ತಮ್ಮ ಆಸ್ತಿಯ ಕುರಿತಂತೆ ಮಾಹಿತಿಯನ್ನು ನೀಡಬೇಕು. ಅದನ್ನು ಆದಾಯ ತೆರಿಗೆ ಇಲಾಖೆ ಮೇಲ್ವಿಚಾರಣೆ ನಡೆಸಲಿದೆ ಎಂದು ಇದೇ ವೇಳೆ ಸುನಿಲ್ ಆರೋರ ಹೇಳಿದ್ದಾರೆ.
ಸುನಿಲ್ ಆರೋರ
ಇದರ ನಡುವೆ ಚುನಾವಣಾ ಆಯೋಗ ಲೋಕಸಭಾ ಚುನಾವಣೆಯ ಆಯೋಜನೆ ಕುರಿತಂತೆ ಸ್ಪಷ್ಟನೆ ನೀಡಿದೆ. ಗಡಿಯಲ್ಲಿ ಸದ್ಯದ ಸ್ಥಿತಿ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಚುನಾವಣೆ ನಿಗದಿಯಂತೇ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರ ಸ್ಪಷ್ಟಪಡಿಸಿದ್ದಾರೆ.
ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಅಂತಹ ಬೂತ್ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು ಎಂದು ಚುನಾವಣಾ ಆಯೋಗ ಸೂಚಿಸಿತ್ತು.