ಬೆಂಗಳೂರು: 17ನೇ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಬೇಕು ಅಂತಾ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಬಿಎಸ್ಪಿ ವರಿಷ್ಠೆ ಮಾಯಾವತಿ ಸೇರಿದಂತೆ ಹಲವು ಮುಖಂಡರು ಟ್ವೀಟ್ ಮೂಲಕ ಕರೆ ನೀಡಿದ್ದಾರೆ.
ಮತದಾನಕ್ಕೆ ಶುಭಕೋರಿ ಮೋದಿ, ರಾಹುಲ್, ಮಾಯಾವತಿ ಟ್ವೀಟ್.. ದೇಶಕ್ಕಾಗಿ ವೋಟ್ ಮಾಡಿ ಎಂದ ಗಣ್ಯರು - undefined
ಈಗ ದೇಶದಲ್ಲಿ 2ನೇ ಹಂತದ ಮತದಾನ ನಡೆಯುತ್ತಿದೆ. ಮತದಾನ ಮಾಡುವವರೆಲ್ಲರೂ ತಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತದಾನ ಬಳಸಿಕೊಳ್ಳುವರು ಎಂದು ನಾನು ನಂಬಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
![ಮತದಾನಕ್ಕೆ ಶುಭಕೋರಿ ಮೋದಿ, ರಾಹುಲ್, ಮಾಯಾವತಿ ಟ್ವೀಟ್.. ದೇಶಕ್ಕಾಗಿ ವೋಟ್ ಮಾಡಿ ಎಂದ ಗಣ್ಯರು](https://etvbharatimages.akamaized.net/etvbharat/images/768-512-3036241-thumbnail-3x2-twitt.jpg)
ಭಾರತದ ಆತ್ಮೀಯ ನಾಗರಿಕರೆ, 2ನೇ ಹಂತದ ಮತದಾನ ಇಂದು ಆರಂಭವಾಗಿದೆ. ಇವತ್ತು ಮತದಾನ ಮಾಡುವವರೆಲ್ಲರೂ ತಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸಲು ತಮ್ಮ ಮತದಾನ ಬಳಸಿಕೊಳ್ಳುವರು ಎಂದು ನಾನು ನಂಬಿದ್ದೇನೆ. ಯುವಕರು ಅತ್ಯಧಿಕ ಸಂಖ್ಯೆಯಲ್ಲಿ ವೋಟ್ ಚಲಾಯಿಸುವ ಭರವಸೆ ಇದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ನೀವು ಇಂದು ಮತ ಚಲಾಯಿಸಿದಾಗ, ನೀವು ನ್ಯಾಯ್ಗೆ ಮತ ಚಲಾಯಿಸುತ್ತೀರಿ ಎಂಬುದನ್ನು ನೆನಪಿಡಿ. ನ್ಯಾಯ್ ನಿರುದ್ಯೋಗಿ ಯುವಕರಿಗೆ, ನಮ್ಮ ಶಕ್ತಿಯುತ ರೈತರಿಗೆ, ಡಿಮಾನೈಟೈಸೇಷನ್ನಿಂದ ನಷ್ಟಕ್ಕೊಳಗಾದ ಸಣ್ಣ ವ್ಯಾಪಾರಸ್ಥರಿಗೆ. ಜಾತಿ- ಧರ್ಮದ ಕಾರಣದಿಂದ ಕಿರುಕುಳಕ್ಕೊಳಗಾದವರ ಮುಕ್ತಿಗೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.