ಕರ್ನಾಟಕ

karnataka

ETV Bharat / bharat

ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಗಾಂಧಿ ಕುಟುಂಬದ ಎಸ್​ಪಿಜಿ ಭದ್ರತೆ, ಜೆಎನ್​ಯು ವಿಚಾರ - ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಗಾಂಧಿ ಕುಟುಂಬದ ಎಸ್​ಜಿಪಿ ಭದ್ರತೆ

ನಿನ್ನೆಯಿಂದ ಸಂಸತ್​ನ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು, ಎರಡನೇ ದಿನವಾದ ಇಂದು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಲೋಕಸಭೆಯಲ್ಲಿ ಇಂದು ಜೆಎನ್​ಯು ವಿಚಾರ, ರೈತರ ಸಮಸ್ಯೆಗಳು, ಗಾಂಧಿ ಕುಟುಂಬಕ್ಕೆ ಎಸ್​ಪಿಜಿ ಭದ್ರತೆ ವಿಚಾರ ಸೇರಿದಂತೆ ಹಲವು ಮಹತ್ವದ ವಿಚಾರಗಳು ಪ್ರತಿಧ್ವನಿಸಿದ್ದು, ಹಲವು ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ.

ಲೋಕಸಭೆ

By

Published : Nov 19, 2019, 3:53 PM IST

ನವದೆಹಲಿ: ಸೋಮವಾರದಿಂದ ಸಂಸತ್​ನ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು, ಹಲವು ವಿಷಯಗಳ ಕುರಿತ ಚರ್ಚೆ ನಡೆದಿದೆ. ಮಧ್ಯಾಹ್ನದ ಭೋಜನ ವಿರಾಮದ ಬಳಿಕ ಮತ್ತೆ ಸದನದ ಕಲಾಪ ಮಧ್ಯಾಹ್ನ 3 ಗಂಟೆಗೆ ಆರಂಭವಾಗಿದೆ.

ಜೆನ್​ಯು ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರ...

ಸದನದಲ್ಲಿ ಜೆನ್​ಯು ವಿಚಾರ ಪ್ರಸ್ತಾಪಿಸದ ಬಿಎಸ್​ಪಿಯ ಡ್ಯಾನಿಶ್ ಅಲಿ ವಿಚಾರಕ್ಕೆ ಸ್ಪೀಕರ್ ಓಂ ಬಿರ್ಲಾ ಅವಕಾಶ ನಿರಾಕರಿಸಿದರು. ಶುಲ್ಕ ಹೆಚ್ಚಳ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಲಾಠಿಚಾರ್ಜ್‌ ಮಾಡಿದ್ದು ದುರದೃಷ್ಟಕರ. ಈ ವಿಚಾರವಾಗಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಡ್ಯಾನಿಶ್ ಅಲಿ ಒತ್ತಾಯಿಸಿದರು. ಆದರೆ ಈ ವಿಷಯ ಸ್ಪೀಕರ್​ ಪಟ್ಟಿ ಮಾಡಿದ ವಿಷಯ ಅಲ್ಲವಾದ್ದರಿಂದ ಸ್ಪೀಕರ್ ಓಂ ಬಿರ್ಲಾ ವಿಷಯದ ಚರ್ಚೆಗೆ ಅವಕಾಶ ನೀಡಲು ನಿರಾಕರಿಸಿದರು.

ಗಾಂಧಿ ಕುಟುಂಬಕ್ಕೆ ಎಸ್​ಪಿಜಿ ಭದ್ರತೆ ಹಿಂತೆಗೆದ ವಿಚಾರ ಚರ್ಚೆ...

ಗಾಂಧಿ ಕುಟುಂಬಕ್ಕೆ ಎಸ್​ಪಿಜಿ ಭದ್ರತೆ ತೆಗೆದು ಹಾಕಿದ ವಿಚಾರವನ್ನು ಕಾಂಗ್ರೆಸ್​ ನಾಯಕ ಅಧಿರ್​ ರಂಜನ್​ ಪ್ರಸ್ತಾಪಿಸಿದರು. ಗಾಂಧಿ ಕುಟುಂಬದ ಎಸ್​ಪಿಜಿ ಭದ್ರತೆ ತೆಗೆದು ಹಾಕುವ ಅವಶ್ಯಕತೆಯಾದರೂ ಏನಿತ್ತು? ಅವರು ಸಾಮನ್ಯ ರಾಜಕಾರಣಿಗಳಲ್ಲ. ದಿಢೀರನೆ ಅದನ್ನು ತೆಗೆದುಹಾಕುವಂತಹದ್ದು ಏನಾಯ್ತು ಎಂದು ಪ್ರಶ್ನಿಸಿದರು. 1991ರಿಂದ 2019ರವರೆಗೂ ಎನ್​ಡಿಎ ಸರ್ಕಾರ ಆಡಳಿತದಲ್ಲಿದ್ದಾಗ ಎಸ್​ಪಿಜಿ ಭದ್ರತೆಯನ್ನು ತೆಗೆದು ಹಾಕಿರಲೇ ಇಲ್ಲ ಎಂದು ಅಧಿರ್​ ರಂಜನ್​ ಹೇಳಿದರು.

ರೈತರ ಆದಾಯವನ್ನು ದ್ವಿಗುಣಗೊಳಿಸುವ ವಿಚಾರ...

2022ರ ವೇಳೆಗೆ ರೈತರ ಆದಯವನ್ನು ದ್ವಿಗುಣಗೊಳಿಸುವ ವಿಚಾರ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಪ್ರಸ್ತಾಪಗೊಂಡಿತು. ಈ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಪ್ರತಿಪಕ್ಷದ ಸಂಸದರು ಸದನದ ಬಾವಿಗಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಸಭಾಪತಿಗಳು, ರೈತರ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಪ್ರತಿಪಕ್ಷದ ಸದಸ್ಯರಿಗೆ ಮನವಿ ಮಾಡಿದರು.

ರೈತರು ನಮ್ಮ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ...

ಸದನದಲ್ಲಿ ರೈತರ ಬಗೆಗಿನ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ, ಕೃಷಿ ಹಾಗೂ ರೈತರ ಯೋಗಕ್ಷೇಮ ಸಚಿವ ನರೇಂದ್ರ ಸಿಂಗ್​ ತೋಮರ್​, ರೈತರ ಸಮಸ್ಯೆಗಳಿಗೆ ಪರಿಹಾರ ಕೊಡುವಲ್ಲಿ ಕೇಂದ್ರ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ನಮ್ಮ ಯೋಜನೆಗಳಿಂದ ದೇಶದ ಎಲ್ಲಾ ರೈತರು ಅನುಕೂಲ ಪಡೆದಿದ್ದಾರೆ ಎಂದರು.

ABOUT THE AUTHOR

...view details