ಬುಂಡಿ (ರಾಜಸ್ಥಾನ):ಬೃಹತ್ ಮಿಡತೆ ಹಿಂಡುಗಳ ದಾಳಿ ತಪ್ಪಿಸಲು ರಾಜಸ್ಥಾನದ ಬುಂಡಿ ಜಿಲ್ಲೆಯ ಜಿಲ್ಲಾಡಳಿತ ವಿಶಿಷ್ಟ ಕ್ರಮ ಕೈಗೊಂಡಿದೆ.
ಪೊಲೀಸ್ ವ್ಯಾನ್‌ಗಳು, ಅಗ್ನಿಶಾಮಕ ಟ್ರಕ್‌ಗಳು ಮತ್ತು ಇತರ ವಾಹನಗಳು ಮಿಡತೆ ಹಿಂಡುಗಳನ್ನು ಹೆದರಿಸಲು ಸೈರನ್ ಹಾಕಿಕೊಂಡು ಪಟ್ಟಣದ ಸುತ್ತಲೂ ತಿರುಗಾಡುತ್ತಿವೆ.

ಮಿಡತೆಗಳ ಬಗ್ಗೆ ಕೃಷಿ ಇಲಾಖೆ ಈಗಾಗಲೇ ಜಾಗರೂಕವಾಗಿದೆ ಮತ್ತು ಬುಂಡಿ ಮಿಡತೆ ನಿಯಂತ್ರಣ ಕೊಠಡಿಯನ್ನು ಸಹ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಂಟಾರ್ ಸಿಂಗ್ ನೆಹ್ರಾ ಹೇಳಿದ್ದಾರೆ.
ಮಿಡತೆಗಳು ಎಲ್ಲಿ ತಡರಾತ್ರಿ ನಿಲ್ಲುತ್ತವೆಯೋ ಅಲ್ಲಿ ರಾಸಾಯನಿಕ ಸಿಂಪಡಿಸುವಿಕೆಯನ್ನು ಮಾಡಲಾಗುವುದು ಎಂದು ಅವರು ಹೇಳಿದರು.