ಕರ್ನಾಟಕ

karnataka

ETV Bharat / bharat

ಕಾನ್ಪುರದಲ್ಲಿ ಹೆಚ್ಚಿದ ಮಿಡತೆ ಹಾವಳಿ.. ಜನರಿಗೆ ಪೊಲೀಸ್​ ಇಲಾಖೆಯಿಂದ ಮುನ್ನೆಚ್ಚರಿಕೆ - ಮಿಡತೆ ಹಾವಳಿ

ಮಿಡತೆಗಳ ಗುಂಪು ಕಾನ್ಪುರದ ಗ್ರಾಮೀಣ ಪ್ರದೇಶಗಳಲ್ಲಿ ಕಾಣಿಸಿಕೊಂಡಿದೆ. ಈಗ ನಗರ ಪ್ರದೇಶಕ್ಕೂ ಪ್ರವೇಶ ಪಡೆದಿವೆ. ಕಾನ್ಪುರದ ಟ್ರಾನ್ಸ್ ಗಂಗಾ ಸಿಟಿ ಮತ್ತು ಗಂಗಾ ಬ್ಯಾರೇಜ್ ಬೀದಿಗಳಲ್ಲಿ ತಡರಾತ್ರಿ ಮಿಡತೆಗಳ ಹಾವಳಿ ಹೆಚ್ಚುತ್ತಿದೆ..

ಕಾನ್ಪುರದಲ್ಲಿ ಹೆಚ್ಚಿದ ಮಿಡತೆ ಹಾವಳಿ
ಕಾನ್ಪುರದಲ್ಲಿ ಹೆಚ್ಚಿದ ಮಿಡತೆ ಹಾವಳಿ

By

Published : Jun 30, 2020, 3:41 PM IST

Updated : Jun 30, 2020, 4:01 PM IST

ಕಾನ್ಪುರ: ಕಾನ್ಪುರದಲ್ಲಿ ಮಿಡತೆಗಳ ಹಾವಳಿಯಿಂದ ರಕ್ಷಣೆ ಪಡೆಯಲು ಸಾರ್ವಜನಿಕರಿಗೆ ಪೊಲೀಸ್​ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ಸೂಚನೆ ನೀಡುತ್ತಿದೆ. ಕಾನ್ಪುರದ ಬೀದಿ ಬೀದಿಗಳಲ್ಲು ಪೊಲೀಸರು ಇಲಾಖೆ ವಾಹನದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಯಾರು ನಿಮ್ಮ ಮನೆಯ ಬಾಗಿಲುಗಳು ಮತ್ತು ಕಿಟಕಿಗಳನ್ನು ತೆರೆದಿಟ್ಟು ಮಲಗಬೇಡಿ. ಯಾವುದೇ ಆಹಾರ ಮತ್ತು ಪಾನೀಯವನ್ನು ತೆರೆದು ಇಡಬೇಡಿ ಎಂದು ಹೇಳುತ್ತಿದ್ದಾರೆ. ಮಿಡಿತೆಗಳ ಹಾವಳಿ ತಪ್ಪಿಸಲು ಜಿಲ್ಲಾಧಿಕಾರಿ, ಕೃಷಿ ಇಲಾಖೆ, ಅಗ್ನಿಶಾಮಕ ದಳ ಮತ್ತು ಜಿಲ್ಲೆಯ ಎಲ್ಲಾ ಇಲಾಖೆಗಳು ಸಜ್ಜುಗೊಂಡಿವೆ. ಇಲಾಖೆಗಳು ನೀಡುವ ಸೂಚನೆಯನ್ನು ಪಾಲಿಸುವಂತೆ ಕೊರಲಾಗುತ್ತಿದೆ.

ಕಾನ್ಪುರದಲ್ಲಿ ಹೆಚ್ಚಿದ ಮಿಡತೆ ಹಾವಳಿ

ಮಿಡತೆಗಳ ಗುಂಪು ಕಾನ್ಪುರದ ಗ್ರಾಮೀಣ ಪ್ರದೇಶಗಳಲ್ಲಿ ಕಾಣಿಸಿಕೊಂಡಿದೆ. ಈಗ ನಗರ ಪ್ರದೇಶಕ್ಕೂ ಪ್ರವೇಶ ಪಡೆದಿವೆ. ಕಾನ್ಪುರದ ಟ್ರಾನ್ಸ್ ಗಂಗಾ ಸಿಟಿ ಮತ್ತು ಗಂಗಾ ಬ್ಯಾರೇಜ್ ಬೀದಿಗಳಲ್ಲಿ ತಡರಾತ್ರಿ ಮಿಡತೆಗಳ ಹಾವಳಿ ಹೆಚ್ಚುತ್ತಿದೆ.

ಟ್ರಾನ್ಸ್ ಗಂಗಾ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಿಡತೆಗಳು ಆಕಾಶದಲ್ಲಿ ಹಾರುತ್ತಿರುವುದನ್ನು ಕಂಡ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಂಡಿತು. ಜಿಲ್ಲಾಡಳಿತವು ತಕ್ಷಣವೇ ಕೃಷಿ ಇಲಾಖೆ, ಅಗ್ನಿಶಾಮಕ ದಳ ಮತ್ತು ಇತರ ಇಲಾಖೆಗಳಿಗೆ ಎಚ್ಚರಿಕೆ ನೀಡಿ, ಜೊತೆಗೆ ಕಾನ್ಪುರ ನಗರದ ಎಲ್ಲಾ ಪೊಲೀಸ್ ಠಾಣೆಗಳ ಪೊಲೀಸ್ ಜೀಪ್ ಮೂಲಕ ಜನರನ್ನು ಸ್ಥಳಾಂತರಿಸುವಂತೆ ಆದೇಶಿಸಿತು.

ನಿಮ್ಮ ಪ್ರದೇಶದಲ್ಲಿ ಮಿಡತೆಗಳು ಕಂಡು ಬಂದಾಗ, ಏನಾದರೂ ವಸ್ತಗಳನ್ನು ಸುಟ್ಟು ಹೊಗೆ ಹಾಕಿ, ಜೋರಾಗಿ ಶಬ್ದ ಮಾಡಲು ಸೂಚಿಸಿದೆ. ಮಿಡತೆಗಳು ದೊಡ್ಡ ಶಬ್ದದಿಂದ ಪಲಾಯನ ಮಾಡಬಹುದು. ಯಾರಾದರೂ ಕೀಟನಾಶಕವನ್ನು ಹೊಂದಿದ್ರೆ, ಅವರು ಅದನ್ನು ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ಔಷಧ ಸಿಂಪಡಿಸುವ ಯಂತ್ರದ ಸೌಲಭ್ಯವಿದ್ದರೆ, ಅವರು ಯಂತ್ರದಿಂದ ಸಿಂಪಡಿಸುವ ಮೂಲಕ ಮಿಡತೆಗಳನ್ನು ಹೋಗಲಾಡಿಸಿ ಎಂದು ತಿಳಿಸಿದ್ದಾರೆ.

Last Updated : Jun 30, 2020, 4:01 PM IST

ABOUT THE AUTHOR

...view details