ಕರ್ನಾಟಕ

karnataka

ETV Bharat / bharat

ಎತ್ತು ಮಾರಿ ಎತ್ತಿನ ಜಾಗಕ್ಕೆ ತಾನೇ ಹೆಗಲುಕೊಟ್ಟ: ಇದು ಲಾಕ್​ಡೌನ್​ನ ಕಥೆ- ವ್ಯಥೆ

ಲಾಕ್‌ಡೌನ್‌ನ ನಿರಂತರ ವಿಸ್ತರಣೆಗಳಿಂದ ನಿರಾಶೆಗೊಂಡ ರಾಹುಲ್ ನಂತರ ತನ್ನ ಪೂರ್ವಜರ ಹಳ್ಳಿಗೆ ತೆರಳಲು ನಿರ್ಧರಿಸಿದ. ಎತ್ತಿನ ಬಂಡಿ ಜೊತೆ ಜೀವನದ ಬಂಡಿ ಸಾಗಿಸಲು ತನ್ನ ಊರ ಕಡೆ ಹೆಜ್ಜೆ ಹಾಕಿದ.

bull  cart
ಇಂದೋರ್

By

Published : May 13, 2020, 5:44 PM IST

ಇಂದೋರ್ (ಮಧ್ಯಪ್ರದೇಶ): ಕೊರೊನಾ ಹಲವಾರು ಜನರ ಜೀವನವನ್ನು ನಾಶಗೊಳಿಸಿದೆ ಎಂದರೆ ತಪ್ಪಾಗಲಾರದು. ಲಾಕ್‌ಡೌನ್ ಮಧ್ಯೆ ಇಲ್ಲೊಂದು ಮನಸ್ಸಿಗೆ ಭಾರವಾಗುವಂತಹ ಘಟನೆಯೊಂದು ನಡೆದಿದೆ.

ಇಂದೋರ್‌ನ ಬೈಪಾಸ್ ಪ್ರದೇಶದಲ್ಲಿ ಕಂಡುಬಂದ ಈ ಚಿತ್ರಗಳಲ್ಲಿ, ಒಬ್ಬ ಮನುಷ್ಯನು ತನ್ನ ಎತ್ತಿನೊಂದಿಗೆ ಸೇರಿ ಬಂಡಿ ಎಳೆಯುವುದನ್ನು ಕಾಣಬಹುದು, ಅವನ ಕುಟುಂಬವು ಹಿಂದೆ ಕುಳಿತಿದ್ದು ಯಾವುದೋ ಊರೆಡೆಗೆ ಪಯಣ ಸಾಗಿಸುವಂತಿದೆ.

ಮಧ್ಯಪ್ರದೇಶದ ಮೊಹೋ ಮೂಲದ ರಾಹುಲ್ ಎಂಬಾತ ಎರಡು ಎತ್ತುಗಳನ್ನು ಹೊಂದಿದ್ದ. ಅವುಗಳೊಂದಿಗೆ ಹೇಗಾದರೂ ಮಾಡಿ ಜೀವನದ ಬಂಡಿಯನ್ನು ಎಳೆಯುತ್ತಿದ್ದ. ಆದರೆ, ಕೊರೊನಾ ಲಾಕ್​ಡೌನ್​ ಅವನ ಜೀವನದ ತಿರುವನ್ನು ಬದಲಿಸಿತು. ಈ ಸಮಯದಲ್ಲಿ ಯಾವುದೇ ಆದಾಯದ ಮಾರ್ಗಗಳಿಲ್ಲದ ಕಾರಣ, ತನ್ನ ಕುಟುಂಬವನ್ನು ಪೋಷಿಸುವ ಸಲುವಾಗಿ ಒಂದು ಎತ್ತನ್ನು ಮಾರಾಟ ಮಾಡಿದನು.

ಲಾಕ್​ಡೌನ್​ ಕಾರಣದಿಂದಾಗಿ ಕೊಂಡುಕೊಳ್ಳಲು ಯಾರೂ ಆಸಕ್ತಿ ತೋರದ ಕಾರಣ ರಾಹುಲ್ ಎತ್ತನ್ನು ಅದರ ಬೆಲೆಯ ಮೂರನೇ ಒಂದು ಭಾಗಕ್ಕೆ ಮಾತ್ರ ಮಾರಾಟ ಮಾಡಬೇಕಾಗಿತ್ತು. ಅಂದರೆ ಕನಿಷ್ಠ 15 ಸಾವಿರ ರೂ ಎತ್ತನ್ನು ಬೇರೆ ದಾರಿ ಇಲ್ಲದೇ ಕೇವಲ 5,000 ರೂ.ಗಳಿಗೆ ಮಾರಾಟ ಮಾಡಬೇಕಾಯಿತು. ಇದೆಲ್ಲದರ ಹಿಂದೆ ತನ್ನ ಕುಟುಂಬದ ಪೋಷಣೆ ಆತನ ಕಣ್ಣ ಮುಂದಿತ್ತು.

ಲಾಕ್‌ಡೌನ್‌ನ ನಿರಂತರ ವಿಸ್ತರಣೆಗಳಿಂದ ನಿರಾಶೆಗೊಂಡ ರಾಹುಲ್ ನಂತರ ತನ್ನ ಪೂರ್ವಜರ ಹಳ್ಳಿಗೆ ತೆರಳಲು ನಿರ್ಧರಿಸಿದ. ಎತ್ತೊಂದನ್ನು ಮಾರಾಟ ಮಾಡಿದ್ದರಿಂದ ಬಂಡಿಯ ಇನ್ನೊಂದು ಎತ್ತಿನ ಸ್ಥಾನವನ್ನು ತಾನೇ ವಹಿಸಿಕೊಂಡು, ಹಿಂಭಾಗದಲ್ಲಿ ತನ್ನ ಕುಟುಂಬವನ್ನು ಕುಳ್ಳಿರಿಸಿ ಎತ್ತಿನ ಬಂಡಿ ಜೊತೆ ಜೀವನದ ಬಂಡಿ ಸಾಗಿಸಲು ತನ್ನ ಊರ ಕಡೆ ಹೆಜ್ಜೆ ಹಾಕಿದ.

ಕೊರೊನಾ ಸಾಂಕ್ರಾಮಿಕ ರೋಗವನ್ನು ಹರಡುವುದನ್ನು ತಡೆಗಟ್ಟುವ ಸಲುವಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಗೊಳಿಸಲಾಗಿದ್ದರೂ, ದುರದೃಷ್ಟವಶಾತ್, ಇದು ಮಾನವ ಬಿಕ್ಕಟ್ಟಿಗೆ ಕಾರಣವಾಗಿದೆ, ವಲಸಿಗರು ಕೆಲಸವಿಲ್ಲದೇ ಸಿಲುಕಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಕಳೆದ ಕೆಲವು ದಿನಗಳಿಂದ ದೇಶಾದ್ಯಂತದ ವಲಸಿಗರ ಪರಿಸ್ಥಿತಿ ಹೇಗಿದೆ ಎಂಬುದು ಇದೊಂದೇ ಕಥೆ ಎಲ್ಲವನ್ನ ಹೇಳುವಂತಿದೆ.

ABOUT THE AUTHOR

...view details