ಕರ್ನಾಟಕ

karnataka

ETV Bharat / bharat

ಮದ್ಯ ಪ್ರಿಯರಿಗೆ ಖುಷಿ ಸುದ್ದಿ: ಗೋವಾದಲ್ಲಿ ಸಿಗ್ತಿದೆ ದೇಶಿ ಸಾರಾಯಿ ಹುರಾಕ್

ಈ ಬಾರಿ ಲಾಕ್​ಡೌನ್​ನಿಂದಾಗಿ ಬೇರಾವುದೇ ಮದ್ಯ ಸಿಗುತ್ತಿಲ್ಲವಾದ್ದರಿಂದ ಗೋವಾ ಹುರಾಕ್​ಗೆ ಭಾರಿ ಬೇಡಿಕೆ ಕಂಡು ಬಂದಿದೆ. ಗೋಡಂಬಿ ಹಣ್ಣುಗಳಿಂದ ತಯಾರಿಸಲಾಗುವ ಹುರಾಕ್ ಮದ್ಯಕ್ಕೆ ಜನ ಮುಗಿ ಬೀಳುತ್ತಿದ್ದಾರೆ.

Goa opts for hurrack
Goa opts for hurrack

By

Published : Apr 11, 2020, 3:50 PM IST

ಪಣಜಿ:ಮದ್ಯ ಪ್ರಿಯರಿಗೆ ಗೋವಾದಿಂದ ಖುಷಿ ಸುದ್ದಿಯೊಂದು ಬಂದಿದೆ. ಲಾಕ್​ಡೌನ್​ನಿಂದಾಗಿ ಬೀಯರ್, ವಿಸ್ಕಿ, ರಮ್, ಬ್ರ್ಯಾಂಡಿ ಸಿಗದಿದ್ದರೂ ಗೋವಾದಲ್ಲಿ ಹುರಾಕ್ ದೇಶಿ ಮದ್ಯ ಧಾರಾಳವಾಗಿ ಸಿಗುತ್ತಿದೆ. ಗೋವಾದ ಊರುಗಳ ಮೂಲೆಮೂಲೆಗಳಲ್ಲಿ ಹುರಾಕ್ ತಯಾರಿಸುವ ಡಿಸ್ಟಿಲರಿಗಳಿದ್ದು, ಜನ ಹುರಾಕ್​ಗೆ ಮುಗಿ ಬಿದ್ದಿದ್ದಾರೆ. ಹುರಾಕ್ ಅಥವಾ ಓರಾಕ್ ಎಂದು ಸ್ಥಳೀಯವಾಗಿ ಇದನ್ನು ಕರೆಯಲಾಗುತ್ತದೆ.

"ಹುರಾಕ್​ಗೆ ಬೇಡಿಗೆ ಭಾರಿ ಹೆಚ್ಚಾಗುತ್ತಿದೆ. ಹೇಗಾದರೂ ಮಾಡಿ ಹುರಾಕ್​ ಖರೀದಿಸಿ, ಕುಡಿಯಲು ಜನ ಹಾತೊರೆಯುತ್ತಿದ್ದಾರೆ." ಎಂದು ಗೋಡಂಬಿ ಡಿಸ್ಟಿಲರಿ ಹಾಗೂ ಬಾಟ್ಲಿಂಗ್ ಅಸೋಸಿಯೇಶನ್ ಸಂಸ್ಥಾಪಕ ಹಾಗೂ ಅಧ್ಯಕ್ಷ ಮ್ಯಾಕ್ ವಾಜ್ ಹೇಳಿದ್ದಾರೆ.

ಗೋಡಂಬಿ ಹಣ್ಣುಗಳಿಂದ ತಯಾರಿಸಲಾಗುವ ಹುರಾಕ್ ಮದ್ಯವನ್ನು ಮಾರುಕಟ್ಟೆಯಲ್ಲಿ ಮಾರುವುದಿಲ್ಲ. ಗೋವಾದ ಹಳ್ಳಿಗಳಲ್ಲಿರುವ ಡಿಸ್ಟಿಲರಿಗಳಲ್ಲಿ ತಯಾರಿಸಿ ಅಲ್ಲಿಯೇ ಬಾಟಲಿಗಳಿಗೆ ಇದನ್ನು ತುಂಬಿಸಲಾಗುತ್ತದೆ. 100 ರೂ.ಗೆ 1 ಲೀಟರ್​ ಹುರಾಕ್​ ಮದ್ಯ ಸಿಗುತ್ತಿದ್ದು, ಬೇಡಿಕೆ ಹೆಚ್ಚಾದರೂ ಇದರ ತಯಾರಕರು ಬೆಲೆ ಹೆಚ್ಚಿಸಿಲ್ಲ ಎನ್ನುತಾರೆ ವಾಜ್.

ಹುರಾಕ್​ ಅನ್ನು ಬಹುತೇಕ ಮನೆಗಳಲ್ಲಿ ಕುಡಿಯಲು ಉಪಯೋಗಿಸಲಾಗುತ್ತದೆ ಹಾಗೂ ಇದನ್ನು ಬಹಳ ಕಾಲದವರೆಗೆ ಸಂಗ್ರಹಿಸಿಟ್ಟುಕೊಳ್ಳಲಾಗದು ಎನ್ನುತ್ತಾರೆ ಪೋಂಡಾ ಬಳಿಯ ಗೋಡಂಬಿ ಕೃಷಿಕ ವಿಕಾಸ ಪ್ರಭು.

ಹುರಾಕ್​ ಸೀಸನ್​ಗಾಗಿ ಜನ ಕಾಯುತ್ತಿರುತ್ತಾರೆ. ಆದರೆ ಈ ಬಾರಿ ಲಾಕ್​ಡೌನ್​ನಿಂದಾಗಿ ಬೇರಾವುದೇ ಮದ್ಯ ಸಿಗುತ್ತಿಲ್ಲವಾದ್ದರಿಂದ ಹುರಾಕ್​ಗೆ ಭಾರಿ ಬೇಡಿಕೆ ಬಂದಿದೆ. ಇದರಿಂದ ಗೋಡಂಬಿ ಬೆಳೆಗಾರರು ಸಹ ಸಕತ್ ಖುಷಿಯಾಗಿದ್ದು, ಒಂದಿಷ್ಟು ಲಾಭ ಮಾಡಿಕೊಳ್ಳುವ ಸಿದ್ಧತೆ ನಡೆಸಿದ್ದಾರೆ.

ABOUT THE AUTHOR

...view details