ಕರ್ನಾಟಕ

karnataka

ETV Bharat / bharat

ಲಾಕ್​​ಡೌನ್​ ಉಲ್ಲಂಘನೆ:  ಪ್ರಾರ್ಥನೆ ಸಲ್ಲಿಸುತ್ತಿದ್ದ 28 ಮಂದಿ ಬಂಧನ - Covid-19

ರಂಜಾನ್​​ ಪ್ರಯುಕ್ತ ಸೋಮವಾರ ಮುಂಜಾನೆ ಪ್ರಾರ್ಥನೆ ಸಲ್ಲಿಸಲು ಮಸೀದಿಯಲ್ಲಿ ನೆರೆದಿದ್ದ 28 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸ್ಥಳದಿಂದ ಪರಾರಿಯಾದವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Lockdown violation: 28 arrested for offering prayers in mosque in Uttar Pradesh
ಲಾಕ್‌ಡೌನ್ ಉಲ್ಲಂಘನೆ

By

Published : May 25, 2020, 4:41 PM IST

ಔರಾಯಾ (ಉತ್ತರ ಪ್ರದೇಶ):ಜಿಲ್ಲೆಯಲ್ಲಿಲಾಕ್​ಡೌನ್​ ಆದೇಶ ಉಲ್ಲಂಘಿಸಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ 28 ಮಂದಿಯನ್ನು ಬಂಧಿಸಲಾಗಿದೆ.

ರಂಜಾನ್​​​ ಪ್ರಯುಕ್ತ ಸಮುದಾಯದ ಹಲವರು ಅಜಿತ್ಮಾಲ್ ವ್ಯಾಪ್ತಿಗೆ ಬರುವ ಮಸೀದಿಯಲ್ಲಿ ನಮಾಜ್​ ಮಾಡುತ್ತಿದ್ದರು. ವಿಷಯ ತಿಳಿದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅವರು, ಬಂಧಿಸುವಂತೆ ಅಜಿತ್ಮಾಲ್ ಎಸ್‌ಎಚ್‌ಒಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ 35ಕ್ಕೂ ಹೆಚ್ಚು ಮಂದಿ ಇದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಇದರಲ್ಲಿ 10-12 ಮಂದಿ 15 ವರ್ಷದೊಳಗಿನವರು. ಪರಾರಿಯಾದವರ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸರ್ಕಲ್​ ಅಧಿಕಾರಿ ಕಮಲೇಶ್​ ನಾರಾಯಣ್​ ಪಾಂಡೇ ತಿಳಿಸಿದರು.

ಉತ್ತರ ಪ್ರದೇಶದಲ್ಲಿ 6,017 ಕೊರೊನಾ ವೈರಸ್ ಪ್ರಕರಣಗಳಿವೆ. 158 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ABOUT THE AUTHOR

...view details