ಅಹಮದಾಬಾದ್(ಗುಜರಾತ್): ಷರತ್ತುಬದ್ಧವಾಗಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿರುವ ರಾಜ್ಯ ಸರ್ಕಾರದ ಕ್ರಮಕ್ಕೂ ಪವಿತ್ರ ರಂಜಾನ್ ತಿಂಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಭಾನುವಾರ ಹೇಳಿದ್ದಾರೆ.
ರಂಜಾನ್ಗೂ ಲಾಕ್ಡೌನ್ ಸಡಿಲಿಕೆಗೂ ಸಂಬಂಧವಿಲ್ಲ: ವಿಜಯ್ ರೂಪಾನಿ - ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ
ರಾಜ್ಯ ಸರ್ಕಾರ ಷರತ್ತುಬದ್ಧವಾಗಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿರುವ ನಿರ್ಧಾರಕ್ಕೂ ರಂಜಾನ್ ತಿಂಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಭಾನುವಾರ ಹೇಳಿದ್ದಾರೆ.
ಕಂಟೈನ್‌ಮೆಂಟ್ ವಲಯಗಳು, ಮಾಲ್‌ಗಳು ಮತ್ತು ಶಾಪಿಂಗ್ ಕಾಂಪ್ಲೆಕ್ಸ್‌ಗಳಲ್ಲಿರುವ ಅಂಗಡಿಗಳನ್ನು ಹೊರತುಪಡಿಸಿ ಇತರೆ ಸ್ವತಂತ್ರ ಅಂಗಡಿಗಳನ್ನು ತೆರೆಯಬಹುದೆಂದು ಬಿಜೆಪಿ ಸರ್ಕಾರ ಅನುಮತಿಸಿದೆ. ಈ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿದ್ದು, ರಂಜಾನ್ ತಿಂಗಳಾದ್ದರಿಂದ ಮುಸ್ಲಿಂ ಸಮುದಾಯದ ಅನುಕೂಲಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆ ಆದೇಶ ಹೊರಬಿದ್ದ ಒಂದು ದಿನದ ನಂತರ ರೂಪಾನಿಯವರು ಈ ಹೇಳಿಕೆ ನೀಡಿದ್ದಾರೆ.
"6.5 ಕೋಟಿ ಗುಜರಾತಿಗಳ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಮತ್ತು ಅವರು ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಹೊರಬರುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಉದ್ದೇಶ. ನಾವು ಹಿಂದೂಗಳು, ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರ ನಡುವೆ ತಾರತಮ್ಯ ಮಾಡುವುದಿಲ್ಲ. ನಾವು ಎಲ್ಲಾ 6.5 ಕೋಟಿ ಗುಜರಾತಿಗಳಿಗಾಗಿ ಹೋರಾಡುತ್ತಿದ್ದೇವೆ" ಎಂದು ರೂಪಾನಿ ಹೇಳಿದರು.