ಕರ್ನಾಟಕ

karnataka

ETV Bharat / bharat

ಷರತ್ತುಗಳೊಂದಿಗೆ ಅಂಗಡಿಗಳನ್ನು ತೆರೆಯಲು ಕೇಂದ್ರ ಅನುಮತಿ - ಮಾಲ್​ಗಳನ್ನು ತೆರೆಯಲು ಇಲ್ಲ ಅನುಮತಿ

ಕಳೆದ ಕೆಲದಿನಗಳ ಹಿಂದೆಯಷ್ಟೆ ಲಾಕ್​ಡೌನ್​ನಿಂದ ಕೊಂಚ ವಿನಾಯ್ತಿ ನೀಡಿದ್ದ ಕೇಂದ್ರ ಸರ್ಕಾರ ಈಗ ಕೆಲ ಷರತ್ತುಗಳೊಂದಿಗೆ ಮತ್ತಷ್ಟು ವಿನಾಯ್ತಿಗಳನ್ನು ಘೋಷಿಸಿದೆ.

Centre Allows Shops To Open With Conditions
ಅಂಗಡಿಗಳನ್ನು ತೆರೆಯಲು ಕೇಂದ್ರ ಅನುಮತಿ

By

Published : Apr 25, 2020, 9:57 AM IST

ನವದೆಹಲಿ:ಲಾಕ್​ಡೌನ್​ ಘೋಷಣೆಯಾಗಿ ಒಂದು ತಿಂಗಳ ನಂತರ, ವಸತಿ ಪ್ರದೇಶಗಳಲ್ಲಿನ ಎಲ್ಲಾ ನೆರೆಹೊರೆಯ ಅಂಗಡಿ(ಮಾಲ್‌ಗಳನ್ನು ಹೊರತುಪಡಿಸಿ)ಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಈ ಬಗ್ಗೆ ಶುಕ್ರವಾರ ರಾತ್ರಿ ಆದೇಶ ಹೊರಡಿಸಿರುವ ಕೇಂದ್ರ ಗೃಹ ಸಚಿವಾಲಯ, ನಗರಸಭೆ ಹಾಗೂ ಪುರಸಭೆಗಳ ವ್ಯಾಪ್ತಿಯ ವಸತಿ ಸಮುಚ್ಚಯಗಳ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದೆ. ಮಾಸ್ಕ್ ಹಾಗೂ ಅಂತರ ಕಾಯ್ದುಕೊಳ್ಳುವಿಕೆ, ಅಂಗಡಿಯಲ್ಲಿ ಕೆಲಸ ಮಾಡುವವರು ಶೇ.50ರಷ್ಟು ಮಂದಿ ಮಾತ್ರ ಕರ್ತವ್ಯ ನಿರ್ವಹಿಸಬೇಕು. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಿದೆ.

ನಗರಸಭೆ ಹಾಗೂ ಪುರಸಭೆ ಪ್ರದೇಶಗಳಲ್ಲಿರುವ ಮಾರುಕಟ್ಟೆ ಸ್ಥಳಗಳು, ಮಾಲ್‌ಗನ್ನು ತೆರಯಲು 3ರವರೆಗೆ ಅವಕಾಶವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ವಿನಾಯಿತಿ ಕೊರೊನಾ ಹಾಟ್‌‌ಸ್ಪಾಟ್ ಹಾಗೂ ಕಂಟೈನ್ಮೆಂಟ್ ಝೋನ್‌‌ಗಳಿಗೆ ಅನ್ವಯಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ABOUT THE AUTHOR

...view details