ನವದೆಹಲಿ:ದೇಶದಲ್ಲಿ ಹೇರಿಕೆ ಮಾಡಲಾಗಿರುವ 2.0 ಲಾಕ್ಡೌನ್ ಮುಕ್ತಾಯಗೊಳ್ಳಲು ಕೇವಲ ಎರಡು ದಿನ ಬಾಕಿ ಉಳಿದುಕೊಂಡಿದ್ದು, ಇದರ ಬೆನ್ನಲ್ಲೇ ಮುಂದಿನ ನಡೆ ಯಾವ ರೀತಿಯಲ್ಲಿರುತ್ತದೆ ಎಂಬುದರ ಕುರಿತು ಮಾಹಿತಿ ಪಡೆದುಕೊಳ್ಳಲು ನಮೋ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿದರು.
ಲಾಕ್ಡೌನ್ ಅಂತ್ಯಕ್ಕೆ ಇನ್ನೆರಡೇ ದಿನ ಬಾಕಿ... ಮಹತ್ವದ ಸಭೆ ನಡೆಸಿದ ನಮೋ! - ದೇಶದಲ್ಲಿ ಲಾಕ್ಡೌನ್
ಕೊರೊನಾ ವಿರುದ್ಧ ಹೋರಾಟ ನಡೆಸಿರುವ ಭಾರತ ಈಗಾಗಲೇ ಎರಡನೇ ಹಂತದ ಲಾಕ್ಡೌನ್ ಹೇರಿಕೆ ಮಾಡಿದ್ದು, ಅದು ಮುಕ್ತಾಯಗೊಳ್ಳಲು ಕೇವಲ ಎರಡು ದಿನ ಬಾಕಿ ಉಳಿದಿದೆ. ಇದರ ಮಧ್ಯೆ ಮುಂದಿನ ನಡೆ ಏನು ಎಂಬುದರ ಕುರಿತು ನಮೋ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿದರು.
ಕೊರೊನಾ ವಿರುದ್ಧ ಹೋರಾಟ ನಡೆಸಿರುವ ಭಾರತ ದೇಶದಲ್ಲಿ ಮೇ 3ರವರೆಗೆ ಎರಡನೇ ಹಂತದ ಲಾಕ್ಡೌನ್ ಹೇರಿಕೆ ಮಾಡಿದ್ದು, ಅದು ಮುಂದಿನ ಎರಡು ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಇದರ ಮಧ್ಯೆ ದೇಶದ ವಿವಿಧ ರಾಜ್ಯಗಳಲ್ಲಿ ರೆಡ್, ಗ್ರೀನ್ ಹಾಗೂ ಆರೇಂಜ್ ಝೋನ್ ಎಂಬ ವಲಯ ವಿಂಗಡನೆ ಮಾಡಲಾಗಿದ್ದು, ಅಲ್ಲಿ ಯಾವ ರೀತಿ ನಿಯಮಗಳು ಜಾರಿಗೊಳ್ಳಲಿವೆ ಎಂಬುದರ ಮಾರ್ಗಸೂಚಿ ಕೇಂದ್ರದಿಂದ ರಿಲೀಸ್ ಆಗಬೇಕಾಗಿದೆ.
ನಮೋ ನಡೆಸಿದ ಚರ್ಚೆಯಲ್ಲಿ ಗೃಹ ಸಚಿವ ಅಮಿತ್ ಶಾ, ರೈಲ್ವೆ ಮಂತ್ರಿ ಪಿಯೂಷ್ ಗೋಯಲ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ವಿಮಾನಯಾನ ಸಚಿವ ಹರಿದೀಪ್ ಪುರಿ ಹಾಗೂ ಆರೋಗ್ಯ ಸಚಿವ ಹರ್ಷವರ್ಧನ್ ಭಾಗಿಯಾಗಿದ್ದರು. ಲಾಕ್ಡೌನ್ ಮುಕ್ತಾಯಗೊಂಡ ಬಳಿಕ ದೇಶದಲ್ಲಿ ಯಾವ ರೀತಿ ಮಾರ್ಗಸೂಚಿ ಜಾರಿಗೊಳಿಸಬೇಕು ಎಂಬುದರ ಕುರಿತು ಮಹತ್ವದ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.