ಕರ್ನಾಟಕ

karnataka

ETV Bharat / bharat

ಕೋವಿಡ್-19 ವಿರುದ್ಧ ಹೋರಾಡಲು ಇರುವ ಏಕೈಕ ಅಸ್ತ್ರ ಲಾಕ್​ಡೌನ್​ ಮಾತ್ರ: ಕೇಂದ್ರ ಸಚಿವ ಗಿರಿರಾಜ್ ಸಿಂಗ್ - ಕೇಂದ್ರ ಸಚಿವ ಗಿರಿರಾಜ್ ಸಿಂಗ್

ಲಾಕ್‌ಡೌನ್ ಜಾರಿಗೊಳಿಸದಿದ್ದರೆ ಭಾರತವು ಸ್ಪೇನ್, ಇಟಲಿ, ಅಮೆರಿಕ ಮತ್ತು ಇತರ ದೇಶಗಳಂತಹ ಪರಿಸ್ಥಿತಿಗಳನ್ನು ಎದುರಿಸಬೇಕಾಗಿತ್ತು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.

Union Minsiter Giriraj Singh
ಕೇಂದ್ರ ಸಚಿವ ಗಿರಿರಾಜ್ ಸಿಂಗ್

By

Published : Apr 18, 2020, 9:36 AM IST

ನವದೆಹಲಿ:ಪ್ರಧಾನಿ ಮೋದಿ ಘೋಷಣೆ ಮಾಡಿರುವ ಲಾಕ್​ಡೌನ್​ ಒಂದೇ ಕೊರೊನಾ ವೈರಸ್ ವಿರುದ್ಧದ ಹೋರಾಡಲು ಇರುವ ಏಕೈಕ ಅತ್ಯುತ್ತಮ ವಿಧಾನ ಎಂದು ಕೇಂದ್ರ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.

ಪ್ರಸ್ತುತ ಸನ್ನಿವೇಶದಲ್ಲಿ, ಕೋವಿಡ್-19 ವಿರುದ್ಧ ಹೋರಾಡುವ ಏಕೈಕ ಅಸ್ತ್ರವೆಂದರೆ ಅದು ಲಾಕ್​ಡೌನ್. ಬೇರೆ ರಾಜ್ಯಗಳ ಸಿಎಂಗಳು, WHO ಮತ್ತು ಇತರ ದೇಶಗಳು, ಪ್ರಧಾನಿ ಮೋದಿ ಅವರ ಲಾಕ್​ಡೌನ್ ನಿರ್ಧಾರವನ್ನು ಶ್ಲಾಘಿಸಿದ್ದಾರೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.

ಕೇಂದ್ರ ಸಚಿವ ಗಿರಿರಾಜ್ ಸಿಂಗ್

ಲಾಕ್‌ಡೌನ್ ಜಾರಿಗೊಳಿಸದಿದ್ದರೆ ಭಾರತವು ಸ್ಪೇನ್, ಇಟಲಿ, ಅಮೆರಿಕ ಮತ್ತು ಇತರ ದೇಶಗಳಂತಹ ಪರಿಸ್ಥಿತಿಗಳನ್ನು ಎದುರಿಸಬೇಕಾಗಿತ್ತು. ಕೊರೊನಾ ವೈರಸ್‌ಗೆ ಸರಿಯಾದ ಔಷಧಿ ಇಲ್ಲವಾದ್ದರಿಂದ ಜನರು, ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರದ ನಿಯಮಗಳನ್ನು ಪಾಲಿಸಬೇಕು ಎಂದಿದ್ದಾರೆ.

ದೇಶದಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ಮೇ 3 ರವರೆಗೆ ಲಾಕ್​ಡೌನ್ ವಿಸ್ತರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಆದರೆ, ಹಾಟ್‌ಸ್ಪಾಟ್​ಗಳಲ್ಲದ ಪ್ರದೇಶಗಳಲ್ಲಿ ಏಪ್ರಿಲ್ 20ರ ನಂತರ ಕೆಲವು ವಿನಾಯಿತಿ ನೀಡಲಾಗುವುದು ಎಂದು ಹೇಳಿದ್ದರು.

ABOUT THE AUTHOR

...view details