ನವದೆಹಲಿ:ದೇಶದಲ್ಲಿ ಹೇರಿಕೆ ಮಾಡಲಾಗಿರುವ ಎರಡನೇ ಹಂತದ ಲಾಕ್ಡೌನ್ ಮೇ.3ಕ್ಕೆ ಮುಕ್ತಾಯಗೊಳ್ಳಲಿದ್ದು, ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ಮಹತ್ವದ ಆದೇಶ ಹೊರಹಾಕಿದೆ.
ಮೇ 4ರಿಂದ ಮುಂದಿನ ಎರಡು ವಾರಗಳ ಕಾಲ ದೇಶದಲ್ಲಿ ವಿಧಿಸಲಾಗಿರುವ ಲಾಕ್ಡೌನ್ ಮುಂದುವರಿಯಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮಹತ್ವದ ಮಾಹಿತಿ ಹೊರಹಾಕಿದ್ದು, ಆರೆಂಜ್ ಹಾಗೂ ಗ್ರೀನ್ ವಲಯಗಳಲ್ಲಿ ಲಾಕ್ಡೌನ್ನಲ್ಲಿ ಕೆಲವೊಂದು ಸಡಿಲಿಕೆ ಮಾಡಿದೆ.