ಕರ್ನಾಟಕ

karnataka

ETV Bharat / bharat

ಸಂಕಷ್ಟದಲ್ಲಿ ಗೋಡಂಬಿ ಉದ್ಯಮ; ಸಹಾಯಕ್ಕಾಗಿ ಸರ್ಕಾರಕ್ಕೆ ಮೊರೆ

ಲಾಕ್​ಡೌನ್​ನಿಂದಾಗಿ ಆಮದು ಹಾಗೂ ರಫ್ತು ನಿಂತು ಹೋಗಿದ್ದರಿಂದ ಕೇರಳ ಗೋಡಂಬಿ ಉದ್ಯಮ ಸಂಕಷ್ಟದಲ್ಲಿದ್ದು, ಕೇಂದ್ರ ಸರ್ಕಾರ ತಕ್ಷಣ ಸಹಾಯ ಮಾಡಲು ಮುಂದಾಗಬೇಕೆಂದು ಗೋಡಂಬಿ ಉದ್ಯಮ ಸಂರಕ್ಷಣಾ ಮಂಡಳಿ ಆಗ್ರಹಿಸಿದೆ.

By

Published : Apr 11, 2020, 2:05 PM IST

Cashew industry cries for help from govt
Cashew industry cries for help from govt

ತಿರುವನಂತಪುರಂ: ಈಗಾಗಲೇ ಹಲವಾರು ಸಮಸ್ಯೆಗಳ ಸುಳಿಯಲ್ಲಿದ್ದ ಕೇರಳ ಗೋಡಂಬಿ ಉದ್ಯಮ ಲಾಕ್​ಡೌನ್​ನಿಂದಾಗಿ ಸಂಪೂರ್ಣ ಕುಸಿಯುವ ಹಾದಿಯತ್ತ ಸಾಗಿದೆ. ಕೇಂದ್ರ ಸರ್ಕಾರ ತಕ್ಷಣ ಸಹಾಯ ಮಾಡಲು ಮುಂದಾಗಬೇಕೆಂದು ಉದ್ಯಮ ಒಕ್ಕೊರಲಿನಿಂದ ಆಗ್ರಹಿಸಿದೆ.

ಈ ಕುರಿತು ಗೋಡಂಬಿ ಉದ್ಯಮ ಸಂರಕ್ಷಣಾ ಮಂಡಳಿಯು (Cashew Industry Protection Council-CIPC) ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು ಅಮೆರಿಕ, ಜಪಾನ್ ಹಾಗೂ ಕೊಲ್ಲಿ ರಾಷ್ಟ್ರಗಳಿಗೆ ಗೋಡಂಬಿ ರಫ್ತಿಗೆ ಅನುಮತಿ ನೀಡಬೇಕೆಂದು ಕೇಳಿಕೊಂಡಿದೆ.

"ಗೋಡಂಬಿ ರಫ್ತಿನ ಮೇಲೆ ಹೇರಲಾಗಿರುವ ರಫ್ತು ನಿಷೇಧ ನಿರ್ಧಾರದ ಬಗ್ಗೆ ತಕ್ಷಣ ಮರುಪರಿಶೀಲನೆ ಮಾಡಿ. ಈ ಸಮಯದಲ್ಲಿ ಗೋಡಂಬಿ ರಫ್ತಾಗದಿದ್ದರೆ ನಮ್ಮ ಮಾರುಕಟ್ಟೆಗಳನ್ನು ಚೀನಾ, ವಿಯೆಟ್ನಾಂ ಮುಂತಾದ ದೇಶಗಳು ಆಕ್ರಮಿಸಿಕೊಳ್ಳಲಿವೆ. ಆಫ್ರಿಕಾ ದೇಶಗಳಾದ ಐವರಿ ಕೋಸ್ಟ್​ ಹಾಗೂ ಘಾನಾಗಳಿಂದ ಬರುವ ಕಚ್ಚಾ ಗೋಡಂಬಿ ಬೀಜದ ಮೇಲೆ ಕೇರಳ ಗೋಡಂಬಿ ಉದ್ಯಮ ಅವಲಂಬಿತವಾಗಿದೆ. ಲಾಕ್​ಡೌನ್​ನಿಂದಾಗಿ ಆಮದು ನಿಂತುಹೋಗಿವೆ. ಖರೀದಿಗಾಗಿ ಈಗಾಗಲೇ ಬಂಡವಾಳ ಹೂಡಲಾಗಿದ್ದು, ತಕ್ಷಣ ಆಮದು ಆರಂಭವಾಗದಿದ್ದಲ್ಲಿ ಇಡೀ ಉದ್ಯಮ ನೆಲ ಕಚ್ಚಲಿದೆ." ಎಂದು ಸಿಐಪಿಸಿ ಪತ್ರದಲ್ಲಿ ತಿಳಿಸಿದೆ.

ವಿವಿಧ ಕಾರಣಗಳಿಂದ ಕಳೆದ ನಾಲ್ಕಾರು ವರ್ಷಗಳಿಂದ ಕೇರಳ ಗೋಡಂಬಿ ಉದ್ಯಮ ನಷ್ಟದಲ್ಲಿದ್ದು, ಬ್ಯಾಂಕ್​ಗಳಿಂದ ಪಡೆದ ಸಾಲ ತೀರಿಸಲಾಗುತ್ತಿಲ್ಲ. ಸಾಲದ ಕಂತು ಕಟ್ಟುವ ಅವಧಿಯನ್ನು ಒಂದು ವರ್ಷ ಅವಧಿಗೆ ಮುಂದೂಡಬೇಕೆಂದು ಸಿಐಪಿಸಿ ಪ್ರಧಾನಿಗೆ ಮನವಿ ಮಾಡಿದೆ.

ABOUT THE AUTHOR

...view details