ನವದೆಹಲಿ:ಇದೇ ತಿಂಗಳ 31ರಂದು ಲಾಕ್ಡೌನ್ 4.0 ಮುಕ್ತಾಯವಾಗಲಿದ್ದು, ಜೂನ್ 1ರ ನಂತರ ಲಾಕ್ಡೌನ್ 5.0 ಜಾರಿಯಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜೂನ್ ತಿಂಗಳಲ್ಲೂ ಲಾಕ್ಡೌನ್ ಮೂಂದುವರಿಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಲಾಕ್ಡೌನ್ 5.0 ಕೆಲವೇ ನಗರಗಳಿಗೆ ಮಾತ್ರ ಸೀಮಿತವಾಗಲಿದೆ ಎನ್ನಲಾಗಿದೆ.
11 ನಗರಗಳಿಗೆ ಮಾತ್ರ ಲಾಕ್ಡೌನ್ 5.0:
ಕೊರೊನಾ ಪ್ರಕರಣಗಳು ಹೆಚ್ಚಾಗಿರುವ 11 ನಗರಗಳಲ್ಲಿ ಲಾಕ್ಡೌನ್ 5.0 ಜಾರಿಯಾಗಲಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ನವದೆಹಲಿ, ಮುಂಬೈ, ಪುಣೆ, ಥಾಣೆ, ಸೂರತ್, ಅಹಮದಾಬಾದ್, ಬೆಂಗಳೂರು, ಇಂದೋರ್, ಚೆನ್ನೈ, ಜೈಪುರ ಮತ್ತು ಕೋಲ್ಕತ್ತಾದಲ್ಲಿ ನಿರ್ಬಂಧಗಳು ಮುಂದುವರಿಯಲಿವೆ. ದೇಶಾದ್ಯಂತ ಇರುವ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಶೇಕಡಾ 70 ರಷ್ಟು ಪ್ರಕರಣಗಳು ಈ 11 ನಗರಗಳಲ್ಲಿ ಪತ್ತೆಯಾಗಿವೆ.