ಕರ್ನಾಟಕ

karnataka

ETV Bharat / bharat

ಲಾಕ್‌ ಡೌನ್ 4.0: ಬೆಂಗಳೂರು ಸೇರಿ ಹಲವು ನಗರಗಳಲ್ಲಿ ಓಲಾ, ಉಬರ್​ ಸೇವೆ ಪುನರಾರಂಭ - ಸೇವೆ ಪುನರಾರಂಭಿಸಿ ಒಲಾ ಹಾಗೂ ಉಬರ್

ಸರ್ಕಾರದ ಮಾರ್ಗಸೂಚಿಗಳಿಗೆ ಅನುಸಾರವಾಗಿ, ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಓಲಾ ಹಾಗೂ ಉಬರ್ ಹೆಚ್ಚಿನ ನಗರಗಳಲ್ಲಿ ಕಾರ್ಯನಿರ್ವಹಿಸಲಿವೆ.

ola and uber
ola and uber

By

Published : May 19, 2020, 2:30 PM IST

ನವದೆಹಲಿ: ನಾಲ್ಕನೇ ಹಂತದ ಲಾಕ್‌ ಡೌನ್​ನಲ್ಲಿ ಹೊಸ ಮಾರ್ಗಸೂಚಿಗಳೊಂದಿಗೆ ಓಲಾ ಹಾಗೂ ಉಬರ್ ದೆಹಲಿ, ಬೆಂಗಳೂರು ಸೇರಿದಂತೆ ಹೆಚ್ಚಿನ ನಗರಗಳಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಪ್ರಕಟಿಸಿವೆ.

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಓಲಾ ಮತ್ತು ಉಬರ್ ಸೇವೆ ಕಳೆದ 50 ದಿನಗಳಿಗಿಂತಲೂ ಹೆ್ಚ್ಚು ಕಾಲ ಸ್ಥಗಿತಗೊಂಡಿತ್ತು.

ಸರ್ಕಾರದ ಲಾಕ್‌ಡೌನ್ 4.0 ಮಾರ್ಗಸೂಚಿಗಳಿಗೆ ಅನುಸಾರವಾಗಿ, ಉಬರ್ ಭಾರತದ ಹೆಚ್ಚಿನ ನಗರಗಳಲ್ಲಿ ಸೇವೆಗಳನ್ನು ಪುನರಾರಂಭಿಸುತ್ತಿದೆ ಎಂದು ಉಬರ್ ತಿಳಿಸಿದೆ.

ಕರ್ನಾಟಕ, ತೆಲಂಗಾಣ, ದೆಹಲಿ, ಹರಿಯಾಣ, ಚಂಡೀಗಢ, ಪಂಜಾಬ್, ತಮಿಳುನಾಡು (ಚೆನ್ನೈ ಹೊರತುಪಡಿಸಿ), ಆಂಧ್ರಪ್ರದೇಶ, ಕೇರಳ, ಮತ್ತು ಅಸ್ಸಾಂ ರಾಜ್ಯಗಳಲ್ಲಿ ಸೇವೆ ಲಭ್ಯವಿರುತ್ತದೆ. ಆದರೆ ಸರ್ಕಾರದ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಓಲಾ ಹೇಳಿದೆ.

For All Latest Updates

ABOUT THE AUTHOR

...view details