ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಎರಡನೇ ಹಂತದ ಲಾಕ್ಡೌನ್ ಘೋಷಣೆ ಆಗಿದ್ದೇ ತಡ, ಟ್ವಿಟ್ಟರ್ನಲ್ಲಿ ಮೀಮ್ ಹ್ಯಾಷ್ಟ್ಯಾಗ್ಗಳು ಸದ್ದುಮಾಡುತ್ತಿವೆ. ತಮಾಷೆ ಹಾಗೂ ಹತಾಷೆಯ ಹ್ಯಾಷ್ಟ್ಯಾಗ್ಗಳು ಟ್ವಿಟ್ಟರ್ನಲ್ಲಿ ಹರಿದಾಡುತ್ತಿವೆ.
ಮೋದಿ ಲಾಕ್ಡೌನ್ 2.O ಘೋಷಣೆ ಬೆನ್ನಲ್ಲೇ ಟ್ವಿಟ್ಟರ್ನಲ್ಲಿ ಮೀಮ್ಗಳದ್ದೇ ಪಾರುಪತ್ಯ! - ಟ್ವಿಟ್ಟರ್ ಮೀಮ್
ಲಾಕ್ಡೌನ್ 2.O ಘೋಷಣೆಯಾಗಿದ್ದೇ ತಡ, ಜನರಿಂದ ತಮಾಷೆ, ಹತಾಷೆ ಭಾವಗಳು ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಕ್ತವಾಗುತ್ತಿದೆ. ಈ ಸಂಬಂಧ ಟ್ವಿಟ್ಟರ್ ಹ್ಯಾಷ್ಟ್ಯಾಗ್ಗಳು ಟ್ರೆಂಡ್ ಆಗುತ್ತಿವೆ.
ಮೀಮ್
ಪ್ರಧಾನಿ ತಮ್ಮ ಭಾಷಣ ಆರಂಭಕ್ಕೂ ಮುಂಚೆ ಮುಖಕ್ಕೆ ಮಫ್ಲರ್ ಸುತ್ತಿಕೊಂಡು ಬಂದಿದ್ದರು. ಭಾಷಣ ಆರಂಭ ಮಾಡುತ್ತಿದ್ದಂತೇ ತಮ್ಮ ಮಫ್ಲರ್ ತೆಗೆದು ಭಾಷಣ ಮುಂದುವರಿಸಿದರು. ಇದು ಕೂಡಾ ಟ್ರೋಲಿಗರ ಬಾಯಿಗೆ ಆಹಾರವಾಗಿದೆ.
ಸದ್ಯ ಟ್ವಿಟ್ಟರ್ನಲ್ಲಿ #Narendermodi, #Lockdown2, Extended, 3rd of May ಹ್ಯಾಷ್ಟ್ಯಾಗ್ಗಳು ಟ್ರೆಂಡಿಂಗ್ನಲ್ಲಿದ್ದು, ಇದರಲ್ಲು ಹಲವು ಟ್ರೋಲ್ಗಳು ಹರಿದಾಡುತ್ತಿವೆ.