ಹಿಮಾಚಲ ಪ್ರದೇಶ:ಸೆಲ್ಫ್ ಕ್ವಾರಂಟೈನ್ ಆಗದೆ ಊರಿನೊಳಗೆ ಪ್ರವೇಶವಿಲ್ಲ ಎಂದು ಹಿಮಾಚಲ ಪ್ರದೇಶದ ಕೃಷಿ ಸಚಿವ ಡಾ.ರಾಮ್ ಲಾಲ್ ಮಾರ್ಕಂಡ ಅವರನ್ನು ಸ್ಥಳೀಯರು ವಾಪಸ್ ಕಳುಹಿಸಿರುವ ಘಟನೆ ಕಾಝಾ ಪಟ್ಟಣದಲ್ಲಿ ನಡೆದಿದೆ.
'ಮೊದಲು ಕ್ವಾರಂಟೈನ್ ಆಗಿ'... ಸಚಿವರಿಗೆ ಊರೊಳಗೆ ಪ್ರವೇಶ ನೀಡದ ಸ್ಥಳೀಯರು - ಸೆಲ್ಫ್ ಕ್ವಾರಂಟೈ
ಕಾರ್ಮಿಕರ ಸಮಸ್ಯೆಯನ್ನು ಕೇಳಲು ಬರುತ್ತಿದ್ದ ಸಚಿವರನ್ನು ಊರಿನ ಪ್ರವೇಶದ್ವಾರದ ಬಳಿಯೇ ತಡೆದು ಪ್ರತಿಭಟನೆ ನಡೆಸಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.
!['ಮೊದಲು ಕ್ವಾರಂಟೈನ್ ಆಗಿ'... ಸಚಿವರಿಗೆ ಊರೊಳಗೆ ಪ್ರವೇಶ ನೀಡದ ಸ್ಥಳೀಯರು Locals stage protest against Himachal Minister](https://etvbharatimages.akamaized.net/etvbharat/prod-images/768-512-7544541-thumbnail-3x2-megha.jpg)
ಕಾಝಾದ ಕಾರ್ಮಿಕರ ಸಮಸ್ಯೆಯನ್ನು ಕೇಳಲು ಬರುತ್ತಿದ್ದ ಸಚಿವರನ್ನು ಪ್ರವೇಶದ್ವಾರದ ಬಳಿಯೇ ಜಿಲ್ಲೆಯ ಮಹಿಳಾ ಮಂಡಳಿ ಕಾರ್ಮಿಕರು ಸೇರಿ ನೂರಾರು ಜನರು ತಡೆದು ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪ್ರತಿಭಟನಾಕಾರರು, ಮಾರ್ಕಂಡ ಅವರು ಹೊರಗಡೆಯಿಂದ ಬಂದಿದ್ದು, ಅವರು ಕಾಝಾ ಪ್ರವೇಶಿಸುವ ಮೊದಲು ಕ್ವಾರಂಟೈನ್ ನಿಯಮವನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.
ಈ ಹಿಂದೆ ಕೂಡ ಕೇರಳದ ಕಣ್ಣೂರಿನಿಂದ ಕಾಝಾಗೆ ಬಸ್ನಲ್ಲಿ ಬಂದ ಜನರನ್ನು ತಡೆದು, ಬಸ್ ಅನ್ನು ವಾಪಸ್ ಕಳುಹಿಸಿದ್ದ ಘಟನೆ ನಡೆದಿತ್ತು. ಇದೀಗ ಕಾರ್ಮಿಕರ ಜೊತೆ ಸಭೆ ನಡೆಸಲೂ ಆಗದೆ, ಕಾಝಾದ ತಮ್ಮ ಕಚೇರಿಗೆ ಭೇಟಿ ನೀಡಲೂ ಆಗದೆ ರಾಮ್ ಲಾಲ್ ಮಾರ್ಕಂಡ ಹಿಂದಿರುಗಿದ್ದಾರೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.