ಬಾಲಸೋರ್ (ಒಡಿಶಾ):ಕಾರ್ತಿಕ ಪೂರ್ಣಿಮೆ ಹಿನ್ನೆಲೆ ಬಾಲಸೋರ್ನಲ್ಲಿ ಸ್ಥಳೀಯರು 150 ಅಡಿ ಉದ್ದದ ದೋಣಿಯಲ್ಲಿ ಪ್ರಯಾಣಿಸಿ ಪೂಜೆ ಸಲ್ಲಿಸಿದರು.
ಕಾರ್ತಿಕ ಪೂರ್ಣಿಮೆ ಹಿನ್ನೆಲೆ.. 150 ಅಡಿ ಉದ್ದದ ದೋಣಿಯಲ್ಲಿ ಪಯಣಿಸಿದ ಜನ - ಒಡಿಶಾದಲ್ಲಿ ಕಾರ್ತಿಕ ಪೂರ್ಣಿಮೆ ಆಚರಣೆ
ದೇಶಾದ್ಯಂತ ಕಾರ್ತಿಕ ಪೂರ್ಣಿಮೆ ಸಂಭ್ರಮ ಹಿನ್ನೆಲೆ ಬಾಲಸೋರ್ನಲ್ಲಿ ಸ್ಥಳೀಯರು 150 ಅಡಿ ಉದ್ದದ ದೋಣಿಯಲ್ಲಿ ಪ್ರಯಾಣಿಸಿ ಪೂಜೆ ಸಲ್ಲಿಸಿದರು.
ಬಾಲಾಸೋರ್ನಲ್ಲಿ ಕಾರ್ತಿಕ ಪೂರ್ಣಿಮೆಯ ಸಂಭ್ರಮ
ಕೋವಿಡ್ ಹಿನ್ನೆಲೆ ಒಡಿಶಾ ಸರ್ಕಾರ ನದಿಗಳ ಬಳಿ ತೆರಳದಂತೆ ಆದೇಶ ಹೊರಡಿಸಿ, ಪೊಲೀಸರನ್ನು ನಿಯೋಜಿಸಿತ್ತು. ಈ ಮಧ್ಯೆಯೂ ಜನರು, ಸಾಂಪ್ರದಾಯಿಕ ಪೂಜೆ ನೆರವೇರಿಸಿದ್ದಾರೆ. ಬಿಂದು ಸಾಗರ್ ಸರೋವರದ ಬಳಿ ಜನರು ದೋಣಿಗಳಲ್ಲಿ ಸಾಗದಂತೆ ಪೊಲೀಸರು ತಡೆದರು.
ಪುರಿಯಲ್ಲಿ ಭಗವಾನ್ ಜಗನ್ನಾಥ್ ಮತ್ತು ರಾಜರಾಜೇಶ್ವರಿ ದೇಗುಲದಲ್ಲಿ ಜನತೆ ಸಾಗರೋಪಾದಿಯಲ್ಲಿ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.