ಕರ್ನಾಟಕ

karnataka

ಕೊರೊನಾ ಭೀತಿ: ಆಂಧ್ರ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಿಕೆ

By

Published : Mar 15, 2020, 11:59 AM IST

Updated : Mar 15, 2020, 12:27 PM IST

ಆಂಧ್ರಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಲಾಗಿದೆ.

ec press meet
ರಾಜ್ಯ ಚುನಾವಣಾ ಆಯುಕ್ತ ಎನ್ ರಮೇಶ್​ಕುಮಾರ್ ಸುದ್ದಿಗೋಷ್ಠಿ

ಅಮಾರವತಿ: ಕೊರೊನಾ ಹರಡುವ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಆಂಧ್ರಪ್ರದೇಶ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ನಿಗದಿಗೊಳಿಸಿದ ಚುನಾವಣೆಯನ್ನು ಆರು ವಾರಗಳ ಕಾಲ ಮುಂದೂಡಿಕೆ ಮಾಡಿದೆ.

ಆಂಧ್ರಪ್ರದೇಶ ಚುನಾವಣಾ ಆಯುಕ್ತರಿಂದ ಸುದ್ದಿಗೋಷ್ಠಿ

ಇಂದು ಅಮರಾವತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಆಂಧ್ರಪ್ರದೇಶ ರಾಜ್ಯ ಚುನಾವಣಾ ಆಯುಕ್ತ ಎನ್ ರಮೇಶ್​ಕುಮಾರ್​, ಈ ಬಗ್ಗೆ ಮಾಹಿತಿ ನೀಡಿದರು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗೆ ನಿಗದಿಪಡಿಸಿದ್ದ ಚುನಾವಣೆಯನ್ನು ಆರು ವಾರಗಳ ಕಾಲ ಮುಂದೂಡಲಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರೊಂದಿಗೆ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಹೇಳಿದರು.

Last Updated : Mar 15, 2020, 12:27 PM IST

ABOUT THE AUTHOR

...view details