ಕರ್ನಾಟಕ

karnataka

ETV Bharat / bharat

ಭೂಮಿ ಪೂಜೆ ಕಾರ್ಯಕ್ರಮಕ್ಕೆ ಅಡ್ವಾಣಿ ಗೈರಾಗಿದ್ದೇಕೆ?: ಹಲವು ಪ್ರಶ್ನೋತ್ತರಗಳು - ಎಲ್​.ಕೆ. ಅಡ್ವಾಣಿ

90ರ ದಶಕದಲ್ಲಿ ರಥಯಾತ್ರೆಯ ಮೂಲಕ ಅಯೋಧ್ಯೆಯಲ್ಲಿ ರಾಮಮಂದಿರದ ಕನಸು ಬಿತ್ತಿದ್ದ ಬಿಜೆಪಿಯ ಭೀಷ್ಮ, ಹಿರಿಯ ರಾಜಕೀಯ ಮುತ್ಸದ್ದಿ ಎಲ್​​.ಕೆ.ಅಡ್ವಾಣಿ ಇಂದು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಇದು ಕೆಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

By

Published : Aug 5, 2020, 5:21 PM IST

Updated : Aug 5, 2020, 5:31 PM IST

ನವದೆಹಲಿ:ಇಂದು ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿದ ಐತಿಹಾಸಿಕ ದಿನ. ಕಟ್ಟುವೆವು ನಾವು ರಾಮಮಂದಿರ ಎಂದು ಘೋಷಣೆ ಕೂಗಿ, ರಥಯಾತ್ರೆ ಆರಂಭಿಸಿದ್ದ ಬಿಜೆಪಿಯ ಹಿರಿಯ ಮುತ್ಸದ್ದಿ ಎಲ್​.ಕೆ.ಅಡ್ವಾಣಿಯವರೇ ಇಂದಿನ ಐತಿಹಾಸಿಕ ಕ್ಷಣಕ್ಕೆ ಗೈರಾಗಿದ್ದು, ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಕೇವಲ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮಾತ್ರವಲ್ಲ, ಕಾರ್ಯಕ್ರಮದ ಸಮಾರಂಭದ ಪೋಸ್ಟರ್​ಗಳಲ್ಲೂ ಅಡ್ವಾಣಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

90ರ ದಶಕದಲ್ಲಿ ಬಾಬರಿ ಮಸೀದಿ ವಿಚಾರವನ್ನು ಮುನ್ನೆಲೆಗೆ ತಂದು ರಾಮಮಂದಿರ ಕನಸನ್ನು ಎಲ್ಲರಲ್ಲಿ ಬಿತ್ತಿದವರಲ್ಲಿ ಎಲ್.ಕೆ.ಅಡ್ವಾಣಿ ಪ್ರಮುಖರು. ಯಾವ ಪಕ್ಷವನ್ನು ಉತ್ತುಂಗಕ್ಕೇರಿಸಲು ಶ್ರಮಿಸಿದರೋ ಅದೇ ಪಕ್ಷದ ಐತಿಹಾಸಿಕ ಸಮಾರಂಭಕ್ಕೆ ಅಡ್ವಾಣಿ ಗೈರಾಗಿದ್ದೇಕೆ ಎನ್ನುವ ಪ್ರಶ್ನೆಯನ್ನು ಜನರು ಕೇಳುವಂತಾಗಿದೆ.

ವಿನಯ್ ಕಟಿಯಾರ್, ಉಮಾ ಭಾರತಿ, ಮುರಳಿ ಮನೋಹರ್ ಜೋಶಿ ಮತ್ತು ಕಲ್ಯಾಣ್ ಸಿಂಗ್ ಅವರೊಂದಿಗೆ ರಾಮ ಮಂದಿರದ ಚಿಂತನೆಯನ್ನು ಜನರಲ್ಲಿ ಬೆಳೆಯುವಂತೆ ಮಾಡುವಲ್ಲಿ ಅನುಭವಿ ರಾಜಕಾರಣಿ ಎಂದು ಎಲ್​.ಕೆ. ಅಡ್ವಾಣಿಯನ್ನು ಜನತೆ ಸ್ಮರಿಸಿಕೊಳ್ಳುತ್ತಾರೆ.

1991 ಚುನಾವಣೆಯಲ್ಲಿ ಇವರು ಮಂದಿರ ವಿಚಾರವನ್ನೇ ಘೋಷವಾಕ್ಯವನ್ನಾಗಿಸಿ ಪ್ರಚಾರ ನಡೆಸಿದ್ದರು. ''ನಾವು ರಾಮನ ಹೆಸರಿನಲ್ಲಿ ಪ್ರತಿಜ್ಞೆ ಮಾಡುತ್ತೇವೆ. ನಾವು ದೇವಾಲಯವನ್ನು ಅಲ್ಲಿಯೇ ನಿರ್ಮಿಸುತ್ತೇವೆ'' ಎಂದು ಕರೆ ನೀಡಿದ್ದರು.

ಬಾಬ್ರಿ ಮಸೀದಿ ಧ್ವಂಸ ವಿಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆ ಇನ್ನೂ ನಡೆಯುತ್ತಿದೆ. ರಾಮಮಂದಿರಕ್ಕಾಗಿ ಈ ವ್ಯಕ್ತಿ ಮಾಡಿದ ಆಂದೋಲನವನ್ನೆಲ್ಲಾ ಗಣನೆಗೆ ತೆಗೆದುಕೊಳ್ಳದೇ ಪ್ರಧಾನಿ ಮೋದಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂಬ ಊಹೆಗಳು ಹರಿದಾಡುತ್ತಿವೆ.

ಈ ಎಲ್ಲಾ ಊಹಾಪೋಹಗಳನ್ನು ಹೊರತುಪಡಿಸಿ ನೋಡುವುದಾದರೆ, ಕೊರೊನಾ ಸಂಕಷ್ಟದ ವೇಳೆಯಲ್ಲಿ ನಾಯಕರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು, ಅತಿಥಿಗಳ ಪಟ್ಟಿಯನ್ನು ಕಡಿಮೆ ಮಾಡುವ ಸಲುವಾಗಿ ಕೆಲವರನ್ನು ಆಹ್ವಾನಿಸಿಲ್ಲ ಎಂಬುದು ವಿಹೆಚ್​ಪಿ ಸದಸ್ಯ ಚಂಪತ್​ ರಾಯ್​ ಸ್ಪಷ್ಟಪಡಿಸಿದ್ದಾರೆ.

Last Updated : Aug 5, 2020, 5:31 PM IST

ABOUT THE AUTHOR

...view details