ಕರ್ನಾಟಕ

karnataka

ETV Bharat / bharat

ಚಲಿಸುತ್ತಿರುವ ಟ್ರಕ್‌ನಿಂದ ಕಳ್ಳತನ: ಖದೀಮರ ಕೈಚಳಕ ಮೊಬೈಲ್​ನಲ್ಲಿ ಸೆರೆ

ಮಧ್ಯಪ್ರದೇಶದ ಶಾಜಾಪುರ ಹೆದ್ದಾರಿಯಲ್ಲಿ ಚಲಿಸುತ್ತಿರುವ ಟ್ರಕ್‌ನಿಂದ ಬೈಕ್​ನಲ್ಲಿ ಬಂದ ಮೂವರು ಯುವಕರು ಕಳ್ಳತನ ಮಾಡಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Shajapur theft
ಚಲಿಸುತ್ತಿರುವ ಟ್ರಕ್‌ನಿಂದ ಕಳ್ಳತನ

By

Published : Sep 24, 2020, 4:32 PM IST

ಶಾಜಾಪುರ​ (ಮಧ್ಯಪ್ರದೇಶ): ಚಲಿಸುತ್ತಿರುವ ಟ್ರಕ್‌ನ ಹಿಂಬದಿ ಬಾಗಿಲ ಬೀಗ ಒಡೆದು ಯುವಕರು ಕಳ್ಳತನ ಮಾಡಿರುವ ಘಟನೆ ಮಧ್ಯಪ್ರದೇಶದ ಶಾಜಾಪುರ ಹೆದ್ದಾರಿಯಲ್ಲಿ ನಡೆದಿದೆ.

ಚಲಿಸುತ್ತಿರುವ ಟ್ರಕ್‌ನಿಂದ ಕಳ್ಳತನ

ಶಾಜಾಪುರ ಹೆದ್ದಾರಿಯಲ್ಲಿ ಹೋಗುತ್ತಿದ್ದ ಟ್ರಕ್‌ ಅನ್ನು ಬೈಕ್​ನಲ್ಲಿ ಬಂದ ಮೂವರು ಯುವಕರು ಹಿಂಬಾಲಿಸಿದ್ದಾರೆ. ಇವರಲ್ಲಿ ಓರ್ವ ಟ್ರಕ್‌ ಅನ್ನು ಹತ್ತಿ, ಅದರ ಹಿಂಬದಿ ಬಾಗಿಲ ಬೀಗ ಒಡೆದು ಟ್ರಕ್​ನಲ್ಲಿದ್ದ ಕೆಲ ವಸ್ತುಗಳನ್ನು ಕದ್ದು ಬೈಕ್​ನಲ್ಲಿದ್ದವರಿಗೆ ಕೊಟ್ಟಿದ್ದಾನೆ.

ಬೈಕ್​ ಹಿಂದೆ ಬರುತ್ತಿದ್ದ ಕಾರಿನಲ್ಲಿದ್ದವರು ಈ ದೃಶ್ಯವನ್ನು ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದಾರೆ. ಇವರನ್ನು ಕಂಡ ಯುವಕರು ಕಾರಿನ ಚಾಲಕನಿಗೆ ಮುಂದೆ ಹೋಗುವಂತೆ ಸನ್ನೆ ಮಾಡಿ ತೋರಿಸಿದ್ದಾರೆ. ಮುಂದೆ ಹೋದ ಕಾರು ಚಾಲಕ, ಟ್ರಕ್​ ಚಾಲಕನಿಗೆ ಖದೀಮರ ಕೃತ್ಯದ ಕುರಿತು ಮಾಹಿತಿ ನೀಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ABOUT THE AUTHOR

...view details