ಕರ್ನಾಟಕ

karnataka

ETV Bharat / bharat

ನೋಡನೋಡುತ್ತಿದ್ದಂತೆ ಕುಸಿದ ಶಾಲಾ ಕಟ್ಟಡ: ವಿಡಿಯೋ ವೈರಲ್​ - Purnea News

ಸತತ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಬಿಹಾರ ತತ್ತರಿಸಿದೆ. ಸೀಮಾಲ್ವಾಡಿ ನಾಗ್ರಾ ತೋಲಾದ ಅಮೌರ್ ಬ್ಲಾಕ್‌ನ ಜ್ಞಾನೋದ್ ಪಂಚಾಯತ್‌ ಬಳಿಯ ಸರ್ಕಾರಿ ಶಾಲೆಯು ಮಳೆಯ ಅಬ್ಬರಕ್ಕೆ ಕುಸಿದು ಬಿದ್ದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಶಾಲಾ ಕಟ್ಟಡ ಕುಸಿತದ ವಿಡಿಯೋ
ಶಾಲಾ ಕಟ್ಟಡ ಕುಸಿತದ ವಿಡಿಯೋ

By

Published : Sep 16, 2020, 8:40 AM IST

ಪೂರ್ಣಿಯಾ (ಬಿಹಾರ):ಸತತ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ರಾಜ್ಯ ತತ್ತರಿಸಿದೆ. ಅನೇಕ ಭಾಗಗಳಲ್ಲಿ ಭೂ ಕುಸಿತ ಉಂಟಾಗಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಸೀಮಾಲ್ವಾಡಿ ನಾಗ್ರಾ ತೋಲಾದ ಅಮೌರ್ ಬ್ಲಾಕ್‌ನ ಜ್ಞಾನೋದ್ ಪಂಚಾಯತ್‌ ಬಳಿಯ ಸರ್ಕಾರಿ ಶಾಲೆಯು ಮಳೆಯ ಅಬ್ಬರಕ್ಕೆ ಕುಸಿದು ಬಿದ್ದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅಮೌರ್ ಬ್ಲಾಕ್‌ನ ಕನಕೈ ನದಿಯ ದಡದಲ್ಲಿರುವ ಪ್ರಾಥಮಿಕ ಶಾಲೆಯು ಸಂಪೂರ್ಣವಾಗಿ ನೀರುಪಾಲಾಗಿದೆ. ನೋಡನೋಡುತ್ತಿದ್ದಂತೆ ಸಂಪೂರ್ಣ ಶಾಲೆಯ ಕಟ್ಟಡ ನೀರುಪಾಲಾಗಿರುವ ವಿಡಿಯೋ ಲಭ್ಯವಾಗಿದೆ.

ಶಾಲಾ ಕಟ್ಟಡ ಕುಸಿತದ ವಿಡಿಯೋ

ಇನ್ನು ಈ ಹಿಂದೆ ಗ್ರಾಮಸ್ಥರು ಕಟ್ಟಡದ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸೂಚಿಸಿದ್ದರೂ ಸಹ ಅಧಿಕಾರಿಗಳ ಅಸಡ್ಡೆಯಿಂದ ಸ್ಥಗಿತಗೊಂಡಿತ್ತು. ಆದರೆ ಇದೀಗ ಸರ್ಕಾರಿ ಕಟ್ಟಡ ನೀರುಪಾಲಾಗಿದೆ.

ಭಾನುವಾರ ಇದೇ ರೀತಿಯಲ್ಲಿ ಬಯಾಸಿಯ ತಾರಾಬರಿ ಪಂಚಾಯತ್‌ ಬಳಿಯ ಮತ್ತೊಂದು ಕಟ್ಟಡವೂ ನೆಲಸಮವಾಗಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ಇದು ಮೂರನೇ ಘಟನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ABOUT THE AUTHOR

...view details