ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟ ಬೆಂಗಳೂರಿನ ಇಸ್ಕಾನ್ ಸರಿಯಾಗಿ 9 ಗಂಟೆಗೆ ಲೈಟ್ಗಳನ್ನ ಬಂದ್ ಮಾಡಿ ಕೃಷ್ಣನ ಆಲಯದಲ್ಲಿ ದೀಪಗಳನ್ನ ಬೆಳಗಿಸಿ, ಕೊರೊನಾ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು...ಆ ವೇಳೆ ಇಸ್ಕಾನ್ ಕಂಡು ಬಂದಿದ್ದು ಹೀಗೆ
ಕೊರೊನಾ ವಿರುದ್ಧ ದೇಶದ ಹೋರಾಟ... ಪಿಎಂ ಕರೆಗೆ ಹಣತೆ ಹಚ್ಚಿ ಸೋಂಕು ನಿರ್ಮೂಲನೆಯ ಪಣ ತೊಟ್ಟ ಜನತೆ: LIVE UPDATE - ಲಾಕ್ಡೌನ್ ಅಪ್ಡೇಟ್ಸ್
23:57 April 05
ಬೆಂಗಳೂರಿನ ಇಸ್ಕಾನ್ನಲ್ಲೂ ದೀಪಗಳ ಸಾಲು ಸಾಲು.. ಕೊರೊನಾ ಹೋರಾಟಕ್ಕೆ ಬೆಂಬಲ
23:43 April 05
ಪಂಜಾಬ್ನಲ್ಲಿ ಕೊರೊನಾಗೆ 7 ನೇ ಬಲಿ :
ಪಂಜಾಬ್‌ನ ಅಮೃತಸರ ಆಸ್ಪತ್ರೆಯಲ್ಲಿ 75 ವರ್ಷದ ಕೊರೊನಾ ಸೋಂಕಿತ ಮೃತ ಪಟ್ಟಿದ್ದಾರೆ.
23:08 April 05
ಕೊರೊನಾ ಸಮರಕ್ಕೆ ಕೈಜೋಡಿಸಿದ ಡಿಸಿಎಂ ಸವದಿ
ಕುಟುಂಬ ಸಮೇತರಾಗಿ ದೀಪ ಬೆಳಗಿಸಿ ಕೊರೊನಾ ಪಿಡುಗನ್ನು ತೊಲಗಿಸುವ ಪ್ರಯತ್ನಕ್ಕೆ ಡಿಸಿಎಂ ಲಕ್ಷ್ಮಣ ಕೈ ಜೋಡಿಸಿದರು.
22:55 April 05
ದೀಪ ಬೆಳಗಿದ ಪಾಕಿಸ್ತಾನದ ಹೈಕಮಿಷನ್ ಸದಸ್ಯರಿಂದ
ಪಾಕಿಸ್ತಾನದ ಭಾರತದ ಹೈಕಮಿಷನ್ ಸದಸ್ಯರು ದೀಪಗಳನ್ನು ಬೆಳಗಿಸಿದರು.
22:48 April 05
ಮೊಂಬತ್ತಿ ಹಚ್ಚಿದ ಬಾಲಿವುಡ್ ತಾರೆಯರು
ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಅರ್ಜುನ್ ರಾಂಪಾಲ್, ಕೃತಿ ಸನೋನ್ ಮತ್ತು ರವೀನಾ ಟಂಡನ್ ತಮ್ಮ ಮನೆಗಳಲ್ಲಿ ಮೇಣದಬತ್ತಿಗಳನ್ನು ಹಚ್ಚಿದರು.
22:41 April 05
ಕೊರೊನಾ ಯುದ್ಧಕ್ಕೆ ಕೈ ಜೋಡಿಸಿದ ಸೇನೆ
ಮೊಂಬತ್ತಿ ಹಾಗೂ ದೀಪ ಬೆಳಗುವ ಮೂಲಕ 130 ಕೋಟಿ ಭಾರತೀಯರೊಂದಿಗೆ ಸೇನೆಯೂ ಸಹ ಕೈ ಜೋಡಿಸಿದೆ.
22:30 April 05
ಕೊರೊನಾ ಕಂಟಕ ದೂರಾಗಲಿ ಎಂದು ಪ್ರಾರ್ಥಿಸಿದ ಶೆಟ್ಟರ್
- ಹುಬ್ಬಳ್ಳಿಯ ತಮ್ಮ ಸ್ವಗೃಹದಲ್ಲಿ ಕುಟುಂಬ ಸಮೇತರಾಗಿ ದೀಪ ಬೆಳಗುವ ಮೂಲಕ ದೇಶಕ್ಕೆ ಬಂದೊದಗಿದ ಕೊರೊನಾ ಕಂಟಕ ದೂರಾಗಲಿ ಎಂದು ಸಚಿವ ಜಗದೀಶ್ ಶೆಟ್ಟರ್ ಪ್ರಾರ್ಥಿಸಿದರು.
22:01 April 05
ಜನತೆ ತೋರಿದ ಪ್ರತಿಕ್ರಿಯೆಗೆ ಮೂಕ ವಿಸ್ಮಿತನಾಗಿದ್ದೇನೆ : ಸಿಎಂ ಬಿಎಸ್ವೈ
ದೀಪ ಬೆಳಗುವಂತೆ ಮಾನ್ಯ ಪ್ರಧಾನಿಗಳು ನೀಡಿದ ಕರೆಗೆ ನಮ್ಮ ಜನತೆ ತೋರಿದ ಪ್ರತಿಕ್ರಿಯೆಗೆ ಮೂಕ ವಿಸ್ಮಿತನಾಗಿದ್ದೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ಧಾರೆ.
21:49 April 05
ಮಗನ ಕರೆಗೆ ಓಗೊಟ್ಟ ತಾಯಿ..
- ಗುಜರಾತ್: ಪಿಎಂ ಮೋದಿಯವರ ತಾಯಿ ಹೀರಾಬೆನ್ ತಮ್ಮ ನಿವಾಸದಲ್ಲಿ ಲೈಟ್ ಆಫ್ ಮಾಡಿ, ಮಣ್ಣಿನ ದೀಪ ಬೆಳಗಿಸಿದರು.
21:29 April 05
ದೀಪ ಬೆಳಗಿಸಿದ ದೇಶದ ರಕ್ಷಣಾ ಸಚಿವ
- ಮೋದಿಗೆ ಕರೆಗೆ ಕೈ ಜೋಡಿಸಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್ ತಮ್ಮ ಕುಟುಂಬದೊಂದಿಗೆ ದೀಪ ಬೆಳಗಿಸಿದರು.
21:24 April 05
ಹಣತೆ ಹಚ್ಚಿ ಮೋದಿ ಕರೆಗೆ ಕೈಜೋಡಿಸಿದ ಅಮಿತ್ ಶಾ
- ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ನಿವಾಸದಲ್ಲಿ ವಿದ್ಯುತ್ ದೀಪ ಆರಿಸಿ, ಹಣತೆ ಹಚ್ಚಿ ಮೋದಿ ಕರೆಗೆ ಕೈಜೋಡಿಸಿದರು.
21:21 April 05
ಮಣ್ಣಿನ ಹಣತೆ ಹಚ್ಚಿ ಕೊರೊನಾ ವಿರುದ್ಧದ ಕರೆಗೆ ಬೆಂಬಲ ಸೂಚಿಸಿದ ಹರ್ಷವರ್ಧನ
- ಕೇಂದ್ರ ಸಚಿವ ಹರ್ಷವರ್ಧನ ಮಣ್ಣಿನ ಹಣತೆ ಹಚ್ಚಿ ಕೊರೊನಾ ವಿರುದ್ಧದ ಕರೆಗೆ ಬೆಂಬಲ ಸೂಚಿಸಿದರು
21:18 April 05
ವಿದ್ಯುತ್ ದೀಪಗಳನ್ನು ಆರಿಸಿ ಮೊಂಬತ್ತಿ ಬೆಳಗಿಸಿ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್
21:16 April 05
ಕೇಂದ್ರ ಸಚಿವ ಹರ್ಷವರ್ಧನ ಮಣ್ಣಿನ ಹಣತೆ ಹಚ್ಚಿ ಕೊರೊನಾ ವಿರುದ್ಧದ ಕರೆಗೆ ಬೆಂಬಲ ಸೂಚಿಸಿದರು
- ಕೇಂದ್ರ ಸಚಿವ ಹರ್ಷವರ್ಧನ ಮಣ್ಣಿನ ಹಣತೆ ಹಚ್ಚಿ ಕೊರೊನಾ ವಿರುದ್ಧದ ಕರೆಗೆ ಬೆಂಬಲ ಸೂಚಿಸಿದರು
21:14 April 05
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮನೆಯಲ್ಲಿ ದೀಪ ಬೆಳಗಿ ಕೊರೊನಾ ವಿರುದ್ಧ ಜಾಗೃತಿ
- ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮನೆಯಲ್ಲಿ ದೀಪ ಬೆಳಗಿ ಕೊರೊನಾ ವಿರುದ್ಧ ಜಾಗೃತಿ
- ಮಣ್ಣಿನ ಹಣತೆ ಹಚ್ಚಿ ಕೊರೊನಾ ವಿರುದ್ಧ ಸಂದೇಶ ರವಾನೆ
21:12 April 05
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮನೆಯಲ್ಲಿ ಮೋದಿ ಕರೆಗೆ ಸ್ಪಂದನೆ
- ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮನೆಯಲ್ಲಿ ಮೋದಿ ಕರೆಗೆ ಸ್ಪಂದನೆ
- ಕುಟುಂಬದೊಂದಿಗೆ ದೀಪ ಹಚ್ಚಿ ಕೊರೊನಾ ವಿರುದ್ಧ ಜಾಗೃತಿ
21:07 April 05
ಪ್ರಧಾನಿ ನರೇಂದ್ರ ಮೋದಿ ಕರೆಗೆ ವಾಣಿಜ್ಯ ನಗರಿಯಿಂದ ರೆಸ್ಪಾನ್ಸ್
- ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ವಾಣಿಜ್ಯ ನಗರಿಯಿಂದ ರೆಸ್ಪಾನ್ಸ್
- ಸಾರ್ವಜನಿಕರು, ಮೋದಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಬೆಂಬಲ
- ಮನೆಯ ವಿದ್ಯುತ್ ದೀಪಗಳನ್ನು ಆಫ್ ಮಾಡಿ ಜ್ಯೋತಿ ಬೆಳಗಿಸಿದ ಅಭಿಮಾನಿಗಳು
- ಮನೆಗಳ ಬಾಗಿಲು, ಬಾಲ್ಕನಿಗಳಲ್ಲಿ ದೀಪಗಳನ್ನು ಬೆಳಗಿಸುವ ಮೋದಿ ಕರೆಗೆ ಬೆಂಬಲ
20:51 April 05
ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ಕರೆಗೆ ಫುಲ್ ರೆಸ್ಪಾನ್
- ಕುಟುಂಬ ಸದಸ್ಯರ ಜತೆಗೆ ದೀಪ ಬೆಳಗಿದ ಕೇಂದ್ರ ಸಚಿವ ಸುರೇಶ ಅಂಗಡಿ
- ವಿಶ್ವೇಶ್ವರ ನಗರದ ನಿವಾಸದ ಮುಂಭಾಗದಲ್ಲಿ ದೀಪ ಬೆಳಗಿಸಿದ ಸುರೇಶ್ ಅಂಗಡಿ
- ಕುಂದಾನಗರಿನ ಬೆಳಗಾವಿಯಲ್ಲಿ ಪ್ರಧಾನಿ ಮೋದಿ ಕರೆಗೆ ಫುಲ್ ರೆಸ್ಪಾನ್
20:42 April 05
ಕೊರೊನಾ ವಿರುದ್ಧ ಬೆಳಕಿನ ಯುದ್ಧಕ್ಕೆ ಸಜ್ಜಾಯ್ತು ಭಾರತ, ದೀಪ ಹಚ್ಚೋಕೆ ಕ್ಷಣಗಣನೆ
ಭಾರತದಲ್ಲಿ ಮೋದಿ ಕರೆಗೆ ದೇಶವೇ ಒಗ್ಗೂಡುತ್ತಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಕೊರೊನಾ ವಿರುದ್ಧ ಬೆಳಕಿನ ಯುದ್ಧ ಆರಂಭವಾಗಲಿದೆ.
18:46 April 05
ರಾಜ್ಯದಲ್ಲಿ ಮತ್ತೆ ಏಳು ಮಂದಿಗೆ ಕೊರೊನಾ
- ರಾಜ್ಯದಲ್ಲಿ ಮತ್ತೆ ಏಳು ಮಂದಿಗೆ ಕೊರೊನಾ
- ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 151ಕ್ಕೆ ಏರಿಕೆ
- ಬೆಂಗಳೂರಿನ ಇಬ್ಬರು, ಬೆಳಗಾವಿಯ ನಾಲ್ವರಲ್ಲಿ ಸೋಂಕು
- ಬೆಳಗಾವಿಯ ರಾಯಭಾಗದವರಾದ ಸೋಂಕಿತರು
- ಬಳ್ಳಾರಿಯಲ್ಲಿ ಒಬ್ಬರಿಗೆ ಕೊರೊನಾ ಸೋಂಕು ಪತ್ತೆ
- ಮೂವರಿಗೆ ಐಸಿಯುನಲ್ಲಿ ಚಿಕಿತ್ಸೆ, 11 ಮಂದಿ ಗುಣಮುಖ
18:23 April 05
ತಮಿಳುನಾಡಿನಲ್ಲಿ ಇಂದು ಹೊಸ 86 ಸೋಂಕಿತರು ಪತ್ತೆ
- ತಮಿಳುನಾಡಿನಲ್ಲಿ ಇಂದು ಹೊಸ 86 ಸೋಂಕಿತರು ಪತ್ತೆ
- 86 ಸೋಂಕಿತರಲ್ಲಿ 85 ಸೋಂಕಿತರು 'ತಬ್ಲಿಘಿ'ಗೆ ಸಂಬಂಧಪಟ್ಟವರು
- ರಾಜ್ಯದಲ್ಲಿ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 571ಕ್ಕೆ ಏರಿಕೆ
- ಇಂದು ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಬ್ಬರ ಬಲಿ
- ತಮಿಳುನಾಡಿನಲ್ಲಿ ಈವರೆಗೆ ಒಟ್ಟು 5 ಮಂದಿ ಸೋಂಕಿಗೆ ಸಾವು
17:30 April 05
ಕಣಿವೆ ನಾಡಲ್ಲಿ ಇಂದು 14 ಸೋಂಕಿತರು ಪತ್ತೆ
- ಜಮ್ಮು-ಕಾಶ್ಮೀರದಲ್ಲಿ 14 ಹೊಸ ಕೊರೊನಾ ಪ್ರಕರಣಗಳು ಪತ್ತೆ
- ಒಟ್ಟು ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 106ಕ್ಕೆ ಏರಿಕೆ
- ಜಮ್ಮು-ಕಾಶ್ಮೀರ ಸರ್ಕಾರದ ವಕ್ತಾರ ರೋಹಿತ್ ಕನ್ಸಾಲ್ ಸ್ಪಷ್ಟನೆ
16:27 April 05
75 ಲಕ್ಷಕ್ಕೂ ಹೆಚ್ಚು ಮಂದಿಗೆ ಆಹಾರ ಪೂರೈಕೆ: ಕೇಂದ್ರ ಆರೋಗ್ಯ ಇಲಾಖೆ
- ಲಾಕ್ಡೌನ್ ವೇಳೆ 75 ಲಕ್ಷಕ್ಕೂ ಹೆಚ್ಚು ಮಂದಿಗೆ ಆಹಾರ ಒದಗಿಸಲಾಗಿದೆ
- ದೇಶಾದ್ಯಂತ 23,661 ರಿಲೀಫ್ ಕ್ಯಾಂಪ್ಗಳ ಸ್ಥಾಪನೆ
- ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ರಿಲೀಫ್ ಕ್ಯಾಂಪ್
- ದೇಶಾದ್ಯಂತ 19,460 ಫುಡ್ ಕ್ಯಾಂಪ್ಗಳ ಅನುಷ್ಠಾನ
- ಸರ್ಕಾರದಿಂದ 9,951, ಎನ್ಜಿಓಗಳಿಂದ 9,509 ಫುಡ್ ಕ್ಯಾಂಪ್
16:20 April 05
ರಾಜ್ಯಸರ್ಕಾರಗಳಿಂದ ಲಾಕ್ಡೌನ್ ಪಾಲನೆ
- ರಾಜ್ಯಸರ್ಕಾರಗಳು ಲಾಕ್ಡೌನ್ ನಿರ್ದೇಶನಗಳನ್ನು ಪಾಲಿಸುತ್ತಿವೆ
- ಅಗತ್ಯ ವಸ್ತು ಹಾಗೂ ಸೇವೆಗಳ ಪೂರೈಕೆ ದೇಶದಲ್ಲಿ ತೃಪ್ತಿಕರವಾಗಿದೆ
- ಸುದ್ದಿಗೋಷ್ಠಿಯಲ್ಲಿ ಕೇಂದ್ರ ಆರೋಗ್ಯ ಇಲಾಖೆಯಿಂದ ಸ್ಪಷ್ಟನೆ
- ದೆಹಲಿಯಲ್ಲಿ ನಡೆಯುತ್ತಿರುವ ಕೇಂದ್ರ ಆರೋಗ್ಯ ಇಲಾಖೆಯ ಸುದ್ದಿಗೋಷ್ಠಿ
16:14 April 05
ಕಳೆದ 24 ಗಂಟೆಯಲ್ಲಿ 11 ಮಂದಿ ಕೊರೊನಾಗೆ ಬಲಿ
- ಕಳೆದ 24 ಗಂಟೆಯಲ್ಲಿ 11 ಮಂದಿ ಕೊರೊನಾಗೆ ಬಲಿ
- ದೇಶದಲ್ಲಿ ಒಟ್ಟು ಕೊರೊನಾಗೆ ಬಲಿಯಾದವರು 79
- ಮಹಾರಾಷ್ಟ್ರದಲ್ಲಿ ಈವರೆಗೂ 690 ಪ್ರಕರಣಗಳ ಪತ್ತೆ
16:08 April 05
24 ಗಂಟೆ ಅವಧಿಯಲ್ಲಿ 472 ಮಂದಿಗೆ ಸೋಂಕು: ಕೇಂದ್ರ ಆರೋಗ್ಯ ಇಲಾಖೆ
- 3374 ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ
- ಕಳೆದ 24 ಗಂಟೆ ಅವಧಿಯಲ್ಲಿ 472 ಹೊಸ ಕೊರೊನಾ ಪ್ರಕರಣ
- ದೇಶದಲ್ಲಿ ಅರ್ಧದಷ್ಟು ಸೋಂಕಿನ ಪ್ರಕರಣಗಳು ಹೆಚ್ಚಾಗಲು ಕಾರಣ ''ತಬ್ಲಿಘಿ''
- ಒಟ್ಟು 267 ಮಂದಿ ಸೋಂಕಿನಿಂದ ಗುಣಮುಖ
- ದೇಶದಲ್ಲಿ 274 ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರು ಪತ್ತೆ
15:32 April 05
ಬೆಂಗಳೂರಿನ ದಂಪತಿಯಲ್ಲಿ ಸೋಂಕು ದೃಢ
- ಬೆಂಗಳೂರು ಮೂಲದ ದಂಪತಿಯಲ್ಲಿ ಕೊರೊನಾ ಪತ್ತೆ
- ಸೋಂಕಿತ ಪತಿಗೆ 68 ವರ್ಷ, ಪತ್ನಿಗೆ 62 ವರ್ಷ ವಯಸ್ಸು
- ಮಾ.22ರಂದು ದುಬೈನಿಂದ ಬೆಂಗಳೂರಿಗೆ ಬಂದಿದ್ದ ದಂಪತಿ
- ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 146ಕ್ಕೆ ಏರಿಕೆ
15:06 April 05
ಔರಂಗಾಬಾದ್ನಲ್ಲಿ ಸೋಂಕಿಗೆ ಮೊದಲ ಬಲಿ
- ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಓರ್ವ ಸೋಂಕಿತ ಬಲಿ
- 79 ವರ್ಷ ವಯಸ್ಸಿನ ವೃದ್ಧ ಕೊರೊನಾ ಸೋಂಕಿಗೆ ಬಲಿ
- ಔರಂಗಾಬಾದ್ನಲ್ಲಿ ಸೋಂಕಿಗೆ ಮೊದಲ ಸಾವು
- ಮಹಾರಾಷ್ಟ್ರದಲ್ಲಿ 36ಕ್ಕೆ ಏರಿಕೆಯಾದ ಸಾವಿನ ಸಂಖ್ಯೆ
14:49 April 05
ಪುಣೆಯಲ್ಲಿಂದು ಮೂರನೇ ಬಲಿ
- ಮಹಾರಾಷ್ಟ್ರದ ಪುಣೆಯಲ್ಲಿ ಕೋವಿಡ್-19ಗೆ 69 ವರ್ಷ ವೃದ್ಧೆ ಸಾವು
- ಇಂದು ಪುಣೆಯಲ್ಲಿ ಮೂರನೇ ಬಲಿ ಪಡೆದ ಕೊರೊನಾ
- ಪುಣೆಯಲ್ಲಿ ಒಟ್ಟು ಸಾವಿನ ಸಂಖ್ಯೆ ಐದಕ್ಕೆ ಏರಿಕೆ
14:24 April 05
ಪ್ರಧಾನಿ ಮೋದಿಯಿಂದ ಕೊರೊನಾ ಸೋಂಕಿನ ಕುರಿತು ಚರ್ಚೆ
- ಪ್ರಧಾನಿ ಮೋದಿಯಿಂದ ಕೊರೊನಾ ಸೋಂಕಿನ ಕುರಿತು ಚರ್ಚೆ
- ಮಾಜಿ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ, ಪ್ರತಿಭಾ ಪಾಟೀಲ್ಗೆ ಆಹ್ವಾನ
- ಕೋವಿಡ್-19 ಸಂಬಂಧಿತ ಚರ್ಚೆಗೆ ಆಹ್ವಾನ ನೀಡಿದ ಪ್ರಧಾನಿ
- ಚರ್ಚೆಗೆ ಸೋನಿಯಾಗಾಂಧಿ, ಮುಲಾಯಂಸಿಂಗ್ ಯಾದವ್
- ನವೀನ್ ಪಟ್ನಾಯಕ್, ಕೆ.ಚಂದ್ರಶೇಖರ್ ರಾವ್, ಎಂ.ಕೆ.ಸ್ಟ್ಯಾಲಿನ್
- ಪ್ರಕಾಶ್ ಸಿಂಗ್ ಬಾದಲ್ ಮುಂತಾದವರಿಗೆ ಆಹ್ವಾನ
- ಮಾಜಿ ಪ್ರಧಾನಿಗಳಾದ ಹೆಚ್ಡಿಡಿ, ಮನಮೋಹನ್ಸಿಂಗ್ಗೆ ಆಹ್ವಾನ
13:05 April 05
ತಬ್ಲಿಘಿ ಜಮಾತ್ ವಿರುದ್ಧ ಮಾತನಾಡಿದ ವ್ಯಕ್ತಿ ಕೊಲೆ
- ತಬ್ಲಿಘಿ ಜಮಾತ್ ವಿರುದ್ಧ ಮಾತನಾಡಿದ ವ್ಯಕ್ತಿ ಕೊಲೆ
- ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಘಟನೆ
- ಪ್ರಯಾಗ್ರಾಜ್ನ ಕರೇಲಿ ಪ್ರದೇಶದಲ್ಲಿ ಗುಂಡಿಕ್ಕಿ ಕೊಲೆ
- ಮೃತನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ
- ಪರಿಹಾರ ಘೋಷಿಸಿದ ಯುಪಿ ಸಿಎಂ ಆದಿತ್ಯನಾಥ್
- ಆರೋಪಿಯ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ದೂರು
12:02 April 05
ಏ.15ರಿಂದ ರಾಜ್ಯದಲ್ಲಿ ಹಂತ ಹಂತವಾಗಿ ಲಾಕ್ ಡೌನ್ ತೆರವು: ಯೋಗಿ ಆದಿತ್ಯನಾಥ್
- ಏಪ್ರಿಲ್ 15ರಿಂದ ರಾಜ್ಯದಲ್ಲಿ ಹಂತ ಹಂತವಾಗಿ ಲಾಕ್ ಡೌನ್ ತೆರವು
- ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭರವಸೆ
11:56 April 05
ಉತ್ತರಪ್ರದೇಶದಲ್ಲಿ ಕೊರೊನಾಗೆ ಮೂರನೇ ಬಲಿ
- ಉತ್ತರಪ್ರದೇಶದಲ್ಲಿ 55 ವರ್ಷದ ಕೊರೊನಾ ಸೋಂಕಿತ ಸಾವು
- ವಾರಣಾಸಿಯಲ್ಲಿ ಸಾವನ್ನಪ್ಪಿದ ಕೊರೊನಾ ಸೋಂಕಿತ ವ್ಯಕ್ತಿ
- ಉತ್ತರ ಪ್ರದೇಶದಲ್ಲಿ ಮೂರಕ್ಕೇರಿದ ಸಾವಿನ ಸಂಖ್ಯೆ
11:54 April 05
ಮಹಾರಾಷ್ಟ್ರದಲ್ಲಿ ಸೋಂಕಿಗೆ ಮತ್ತೊಂದು ಬಲಿ
- ಮಹಾರಾಷ್ಟ್ರದಲ್ಲಿ ಸೋಂಕಿಗೆ 52 ವರ್ಷದ ವ್ಯಕ್ತಿ ಬಲಿ
- ಪುಣೆಯ ಸಸ್ಸೂನ್ ಆಸ್ಪತ್ರೆಯಲ್ಲಿ ಸೋಂಕಿಗೆ ಸಾವು
- ಪುಣೆಯಲ್ಲಿ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 4ಕ್ಕೆ ಏರಿಕೆ
11:48 April 05
ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ
- ಮಹಾರಾಷ್ಟ್ರದಲ್ಲಿ ಇಂದು 26 ಹೊಸ ಕೊರೊನಾ ಪ್ರಕರಣಗಳು ಪತ್ತೆ
- ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 661ಕ್ಕೆ ಏರಿಕೆ
- ಮಹಾರಾಷ್ಟ್ರ ರಾಜ್ಯ ಆರೋಗ್ಯ ಇಲಾಖೆಯಿಂದ ಸ್ಪಷ್ಟನೆ
11:24 April 05
ಆಂಧ್ರದಲ್ಲಿ ಹೊಸದಾಗಿ 34 ಮಂದಿಯಲ್ಲಿ ಸೋಂಕು ಪತ್ತೆ
- ಆಂಧ್ರ ಪ್ರದೇಶದಲ್ಲಿ 24 ಗಂಟೆಯಲ್ಲಿ 34 ಮಂದಿಗೆ ಸೋಂಕು
- 226ಕ್ಕೆ ಏರಿಕೆಯಾದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ
- ಕರ್ನೂಲ್ನಲ್ಲಿ 23, ಚಿತ್ತೂರ್ನಲ್ಲಿ 7 ಮಂದಿಯಲ್ಲಿ ಸೋಂಕು ಪತ್ತೆ
10:49 April 05
ಗುಜರಾತ್ನಲ್ಲಿ ಕೊರೊನಾಗೆ 11ಕ್ಕೆ ಏರಿದ ಸಾವಿನ ಸಂಖ್ಯೆ
- ಗುಜರಾತ್ನಲ್ಲಿ ಒಟ್ಟು 11 ಮಂದಿ ಕೊರೊನಾಗೆ ಬಲಿ
- ಸೂರತ್ನಲ್ಲಿ ಆಸ್ಪತ್ರೆಯಲ್ಲಿ 71 ವರ್ಷದ ಮಹಿಳೆ ಸಾವು
- ರಾಜ್ಯದಲ್ಲಿ 14 ಹೊಸ ಸೋಂಕು ಪ್ರಕರಣಗಳು ಪತ್ತೆ
- 122ಕ್ಕೆ ಏರಿಕೆಯಾದ ಒಟ್ಟು ಸೋಂಕಿತರ ಸಂಖ್ಯೆ
- ಅಹಮದಾಬಾದ್ ನಗರದಲ್ಲೇ 55 ಪ್ರಕರಣಗಳು ಪತ್ತೆ
10:14 April 05
ಛತ್ತೀಸ್ಗಢದಲ್ಲಿ ಮೂವರು ಸೋಂಕಿನಿಂದ ಗುಣಮುಖ
- ಛತ್ತೀಸ್ಗಢದ 10 ಮಂದಿ ಸೋಂಕಿತರಲ್ಲಿ ಮೂವರು ಗುಣಮುಖ
- ಉಳಿದ ಏಳು ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ
- ಛತ್ತೀಸ್ಗಢ ಆರೋಗ್ಯ ಸಚಿವ ಟಿ.ಎಸ್.ಸಿಂಗ್ ಡಿಯೋ ಸ್ಪಷ್ಟನೆ
09:44 April 05
ಪಾಕ್ನಲ್ಲಿ 2818 ಸೋಂಕಿತರು, 41 ಮಂದಿ ಬಲಿ
- ಪಾಕಿಸ್ತಾನದಲ್ಲಿ 2818 ಮಂದಿಯಲ್ಲಿ ಕೊರೊನಾ ದೃಢ
- ಪಂಜಾಬ್ನಲ್ಲಿ 1131, ಸಿಂಧ್ನಲ್ಲಿ 839, ಖೈಬರ್ನಲ್ಲಿ 383
- ಬಲೂಚಿಸ್ತಾನದಲ್ಲಿ 175, ಗಿಲ್ಗಿಟ್ ಬಾಲ್ಟಿಸ್ತಾನದಲ್ಲಿ 193
- ಇಸ್ಲಾಮಾಬಾದ್ನಲ್ಲಿ 75 ಕೊರೊನಾ ಸೋಂಕಿತರು ಪತ್ತೆ
- ಈವರೆಗೂ ಪಾಕ್ನಲ್ಲಿ 41 ಕೊರೊನಾ ಸೋಂಕಿತರು ಬಲಿ
09:35 April 05
ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಮಹಾರಾಷ್ಟ್ರ ಫಸ್ಟ್
- ನಿನ್ನೆ ಮಹಾರಾಷ್ಟ್ರದಲ್ಲಿ 145 ಸೋಂಕಿತರು ಪತ್ತೆ
- ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 635ಕ್ಕೆ ಏರಿಕೆ
09:33 April 05
ತಮಿಳುನಾಡಿನಲ್ಲಿ ಕೊರೊನಾದಿಂದ ಇಬ್ಬರ ಸಾವು , ಪಂಜಾಬ್ನಲ್ಲಿ 7ನೇ ಬಲಿ
- ಕೊರೊನಾ ಮಹಾಮಾರಿಗೆ ತಮಿಳುನಾಡಿನಲ್ಲಿಂದು ಇಬ್ಬರ ಬಲಿ
- ರಾಜ್ಯದಲ್ಲಿ ಐದಕ್ಕೇರಿದ ಒಟ್ಟು ಬಲಿಯಾದವರ ಸಂಖ್ಯೆ
- 61 ವರ್ಷದ ರಾಮನಾಥಪುರಂನ ವೃದ್ಧ ಸೇರಿ ಐವರ ಸಾವು
- ರಾಜ್ಯದಲ್ಲಿ ಈವರೆಗೂ ಒಟ್ಟು 485 ಜನರಿಗೆ ಸೋಂಕು