ನವದೆಹಲಿ:ಇಂಡಿಯನ್ ಏರ್ ಫೋರ್ಸ್ (ಐಎಎಫ್)ನ 88ನೇ ವಾರ್ಷಿಕೋತ್ಸವ ಪ್ರಯುಕ್ತ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಭಾಶಯ ಕೋರಿದ್ದಾರೆ.
ಭಾರತೀಯ ವಾಯುಪಡೆ ದಿನಕ್ಕೆ ಶುಭ ಕೋರಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ - ಭಾರತೀಯ ವಾಯುಪಡೆ ದಿನಕ್ಕೆ ಶುಭ ಕೋರಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಭಾರತೀಯ ವಾಯುಪಡೆಯ 88ನೇ ವಾರ್ಷಿಕೋತ್ಸವದ ಪ್ರಯುಕ್ತ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವಿಟರ್ ಮೂಲಕ ಶುಭಾಶಯ ಕೋರಿದ್ದಾರೆ.
ಭಾರತೀಯ ವಾಯುಪಡೆ ದಿನ
ಈ ಬಗ್ಗೆ ಟ್ವಿಟ್ ಮಾಡಿರುವ ರಾಜನಾಥ್ ಸಿಂಗ್, 'ಭಾರತೀಯ ವಾಯುಪಡೆ ಸದಾ ಕಾಲ ದೇಶದ ಆಗಸವನ್ನು ರಕ್ಷಣೆ ಮಾಡುತ್ತದೆ ಎಂಬ ವಿಶ್ವಾಸವಿದೆ. ಏನೇ ಬರಲಿ ಸದಾ ಕಾಲ ನೀಲಿ ಆಕಾಶದಲ್ಲಿ ಹಾರುವ ಯೋಧರು ಹಾಗೂ ಅವರ ಕುಟುಂಬಗಳಿಗೆ ಶುಭಾಶಯ ಕೋರುತ್ತೇನೆ' ಎಂದಿದ್ದಾರೆ.
1932, ಅಕ್ಟೋಬರ್ 8ರಂದು ಮೊದಲ ಬಾರಿಗೆ ಭಾರತೀಯ ವಾಯುಪಡೆ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಅ. 8ರಂದು ಭಾರತೀಯ ವಾಯುಪಡೆ ದಿನವನ್ನಾಗಿ ಆಚರಿಸಲಾಗುತ್ತದೆ.