ಮುಂಬೈ:ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ಇಂದು ನಟನ ಸಹೋದರಿ ಮಿತು ಸಿಂಗ್ ಮತ್ತು ಮಾಜಿ ಬ್ಯುಸಿನೆಸ್ ಮ್ಯಾನೇಜರ್ ಶೃತಿ ಮೋದಿ ಅವರನ್ನು ವಿಚಾರಣೆಗೊಳಪಡಿಸಲಿದೆ.
ಈಗಾಗಲೇ ಮಿತು ಸಿಂಗ್ ಮತ್ತು ಶೃತಿ ಮೋದಿ ಇಡಿ ಕಚೇರಿಗೆ ಬಂದಿದ್ದು, ವಿಚಾರಣೆ ಆರಂಭವಾಗಿದೆ.

ನಟನ ಹಣಕಾಸಿನ ವಿಚಾರ ಕುರಿತ ತನಿಖೆಗೆ ಸಂಬಂಧಿಸಿದಂತೆ ಇಡಿ ನಿನ್ನೆ ಸುಶಾಂತ್ರ ಸ್ನೇಹಿತೆ ರಿಯಾ ಚಕ್ರವರ್ತಿ, ಅವರ ತಂದೆ ಮತ್ತು ಸಹೋದರನ ವಿಚಾರಣೆ ನಡೆಸಿತ್ತು. ಅಲ್ಲದೇ ಸುಶಾಂತ್ರ ಸಹೋದರಿ ರಾಣಿ ಸಿಂಗ್ ಹಾಗೂ ತಂದೆ ಕೆ.ಕೆ.ಸಿಂಗ್ ಅವರ ಹೇಳಿಕೆಗಳನ್ನು ಸಿಬಿಐ ಅಧಿಕಾರಿಗಳು ನಿನ್ನೆ ರೆಕಾರ್ಡ್ ಮಾಡಿಕೊಂಡಿದ್ದರು.
ಸುಶಾಂತ್ ಸಿಂಗ್ ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದು, ಪ್ರಕರಣವನ್ನು ಸಿಬಿಐ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಪ್ರಕರಣ ಸಂಬಂಧ ನಟಿ ರಿಯಾ ಚಕ್ರವರ್ತಿ, ಶೃತಿ ಮೋದಿ ಮತ್ತು ಸಿದ್ಧಾರ್ಥ್ ಪಿಥಾನಿ ಸೇರಿದಂತೆ ಆರು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.