ಕರ್ನಾಟಕ

karnataka

ETV Bharat / bharat

BUDGET: ಮಧ್ಯಮ ವರ್ಗದವರಿಗೆ ತೆರಿಗೆ ಗಿಫ್ಟ್​​, ರೈತರಿಗೆ ಬಂಪರ್​​: 3 ಲಕ್ಷ ಕೋಟಿಗೇರಿದ ರಕ್ಷಣಾ ಬಜೆಟ್

By

Published : Feb 1, 2019, 12:11 PM IST

Updated : Feb 2, 2019, 11:58 AM IST

ಸಂಸತ್​ ಭವನಕ್ಕೆ ಆಗಮಿಸಿದ ವಿತ್ತ ಸಚಿವ ಗೊಯಲ್​

2019-02-01 15:49:30

BUDGET: ಮಧ್ಯಮ ವರ್ಗದವರಿಗೆ ತೆರಿಗೆ ಗಿಫ್ಟ್​​, ರೈತರಿಗೆ ಬಂಪರ್​​: 3 ಲಕ್ಷ ಕೋಟಿಗೇರಿದ ರಕ್ಷಣಾ ಬಜೆಟ್

ಸಂಸತ್​ ಭವನಕ್ಕೆ ಆಗಮಿಸಿದ ವಿತ್ತ ಸಚಿವ ಗೊಯಲ್​
  • ಕೇಂದ್ರ ಸರ್ಕಾರದಿಂದ ಅಂಕಿ-ಅಂಶಗಳ ಸೋರಿಕೆ: ಮಲ್ಲಿಕಾರ್ಜುನ್​ ಖರ್ಗೆ ಗಂಭೀರ ಆರೋಪ
  • ಆರ್ಥಿಕ ಸೇವೆಯನ್ನ ಏಕೆ ಬಿಡುಗಡೆ ಮಾಡಿಲ್ಲವೆಂದು ಖರ್ಗೆ ಪ್ರಶ್ನೆ
  • ಸಂಸತ್​ ಭವನದ ಬಳಿ ಕೇಂದ್ರ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ
  • ಬಜೆಟ್​​ ಮಂಡನೆಗೆ ಕ್ಷಣಗಣನೆ, ಮುಂಬೈ ಷೇರು ಪೇಟೆಯಲ್ಲಿ ಏರಿಕೆ
  • ಈ ಹಿಂದಿನ ಬಜೆಟ್​ನಲ್ಲಿ ರೈತರ ಹಿತರಕ್ಷಣೆ ಕಾಯಲಾಗಿದ್ದು, ಈ ಬಜೆಟ್​​ನಲ್ಲೂ ಹೆಚ್ಚಿನ ಆದ್ಯತೆ: ಕೃಷಿ ಸಚಿವ
  • ಬಜೆಟ್​​ನಲ್ಲಿ ರೈತರ ಹಿತರಕ್ಷಣೆಗೆ ಎಲ್ಲ ರೀತಿಯ ಕ್ರಮ: ಕೇಂದ್ರ ಕೃಷಿ ಸಚಿವ
  • ಕ್ಯಾಬಿನೆಟ್​ ಸಭೆಗೆ ಕೇಂದ್ರ ಸಚಿವರಾದ ರಾಜನಾಥ್​ ಸಿಂಗ್​,ರವಿಶಂಕರ್​ ಪ್ರಸಾದ್​, ಸುಷ್ಮಾ ಸ್ವರಾಜ್​ ಆಗಮನ
  • ಕ್ಯಾಬಿನೆಟ್​ ಸಭೆ ಹಿನ್ನಲೆ: ಸಂಸತ್​ ಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ
  • ಬಜೆಟ್​ ಮಂಡನೆ ಹಿನ್ನೆಲೆ: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ತೆಲಗು ದೇಶಂ ಪಾರ್ಟಿ ಸಂಸದರು ಸಂಸತ್​ ಭವನದ ಆವರಣದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ, ಮಧ್ಯಂತರ ಬಜೆಟ್​ಗೆ ವಿರೋಧ
  • ಪ್ರಧಾನಿ ಮೋದಿ ನೇತೃತ್ವದ ಕ್ಯಾಬಿನೆಟ್​ ಸಭೆ ಮುಕ್ತಾಯ, 2019ರ ಮಧ್ಯಂತರ ಬಜೆಟ್​ಗೆ ಒಪ್ಪಿಗೆ
  • ಬೆಳಗ್ಗೆಯಿಂದ ಸರ್ಕಾರಿ ಮೂಲಕ ಬಜೆಟ್​ ಅಂಶಗಳನ್ನ ಮಾಧ್ಯಮ ಕಚೇರಿಗಳಿಗೆ ಕಳುಹಿಸಿಕೊಡುತ್ತಿವೆ. ಗೊಯೆಲ್​ ಮಂಡಿಸುವ ಬಜೆಟ್​ನಲ್ಲಿ ಈ ಅಂಶಗಳಿದ್ದರೆ ಮಾಹಿತಿ ಸೋರಿಕೆ ಖಚಿತ: ಮನೀಷ್​ ತಿವಾರಿ ಆರೋಪ
  • ಸಂಸತ್​ ಕಲಾಪ್​ ಆರಂಭ:  ಬಜೆಟ್​ ಓದಲು ಆರಂಭಿಸಿದ ಪಿಯೂಷ್​ ಗೋಯಲ್​ ರೆಡಿ
  • ನರೇಂದ್ರ ಮೋದಿ ನೇತೃತ್ವದ ಪಾರದರ್ಶನ ಆಡಳಿತ :ಗೋಯಲ್​
  • ಬಜೆಟ್​ ಮಂಡನೆಗೆ ಸ್ಪೀಕರ್​ ಸುಮಿತ್ರಾ ಮಹಾಜನ್​ ಗ್ರೀನ್​ ಸಿಗ್ನಲ್
  • ಜನರ ಶ್ರೇಯೋಭಿವೃದ್ಧಿಗೆ ಎಲ್ಲ ರೀತಿಯ ಸೌಕರ್ಯ, 2020ರ ವೇಳೆಗೆ ನ್ಯೂ ಇಂಡಿಯಾ ರಚನೆ

2019-02-01 16:50:44

ಬಜೆಟ್​ ಲೈವ್​​: ಕಿಸಾನ್​ ಸಮ್ಮಾನ್​ ಯೋಜನೆ ಘೋಷಣೆ,ರೈತರಿಗೆ ಬಂಪರ್​

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇಂದು ಮಧ್ಯಂತರ ಬಜೆಟ್​ ಮಂಡನೆ ಮಾಡಿದೆ. ಕೇಂದ್ರ ರೈಲ್ವೆ ಸಚಿವ ಪಿಯೂಷ್​ ಗೋಯಲ್​ ಚುನಾವಣೆ ಗಮನದಲ್ಲಿಟ್ಟುಕೊಂಡು ಬಜೆಟ್​ ಮಂಡನೆ ಮಾಡಿದ್ದು, ಮಧ್ಯಮ ವರ್ಗ, ರೈತರು ಹಾಗೂ ರಕ್ಷಣಾ ವಲಯಕ್ಕೆ ಹೆಚ್ಚಿನ ಗಿಫ್ಟ್​ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

  • ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಕೆ ಮೂಲಕ ಉತ್ಪಾದನೆಯಲ್ಲಿ ಹೆಚ್ಚಳ
  • ಹೀರೊಮೊಟೊಕಾರ್ಪ್, ಬಜಾಜ್ ಆಟೊ ಮತ್ತು ಟಿವಿಎಸ್‌ ಮೋಟಾರ್ಸ್‌ ಕಂಪನಿಗಳು ದ್ವಿಚಕ್ರ ವಾಹನಗಳ ಮೇಲಿರುವ ಶೇ28ರ ಜಿಎಸ್‌ಟಿ ಹೊರೆಯನ್ನು ಶೇ18ಕ್ಕೆ ಇಳಿಸಲು ಕ್ರಮ
  • ಪುನರ್ ನವೀಕರಣ ಮಾಡಬಹುದಾದ ಇಂಧನ ಬಳಕೆಗೆ ಉತ್ತೇಜನ
  • ನಮ್ಮ ಅಭಿವೃದ್ಧಿಯ ಸಕಲ ಕ್ರೆಡಿಟ್​ ಜನರಿಗೆ ಸಲ್ಲಬೇಕು.  
  • ದೇಶದ ನಿವಾಸಿಗಳ ಜೋಶ್​ನಿಂದ ದೇಶದ ಬದಲಾವಣೆ.
  • ಇದು ಮಧ್ಯಂತರ ಬಜೆಟ್​ ಅಲ್ಲ. ದೇಶದ ವಿಖಾಸ ಯೋಜನೆಯ ಮಂತ್ರ
  • 2020ರವರೆಗೆ ಹೊಸ ಮನೆಗಳ ನಿರ್ಮಾಣ ಯೋಜನೆಗೆ ತೆರಿಗೆ ವಿನಾಯ್ತಿ.
  • ಆಫರ್ಡಬಲ್​ ಹೌಸ್​ಗಳ ಪ್ರಯೋಜನಕ್ಕಾಗಿ ಹೊಸ ಯೋಜನೆ.
  • 3 ಕೋಟಿ ತೆರಿಗೆ ಪಾವತಿದಾರರಿಗೆ ಅನುಕೂಲ
  • 6.5 ಲಕ್ಷದವರೆಗೆ ಸಂಬಳ ಇರುವವರು, ಪಿಎಫ್​ ಹಾಗೂ ಸರ್ಕಾರಿ ಯೋಜನೆಗಳಲ್ಲಿ ಇನ್ವೆಸ್ಟ್​ ಮಾಡಿದರೆ ತೆರಿಗೆ ಪಾವತಿ ಇಲ್ಲ.
  • ಆದಾಯ ತೆರಿಗೆದಾರರಿಗೆ ಬಿಗ್ ರಿಲೀಫ್​ ಮಾಡಿದ ಕೇಂದ್ರ ಸರ್ಕಾರ
  • ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ. ಇದರಿಂದ 3 ಕೋಟಿ ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲ.
  • 6.5 ಲಕ್ಷದವರೆಗೆ ಆದಾಯ ತೆರಿಗೆ ಪಾವತಿಸುವಂತಿಲ್ಲ. ಉಳಿತಾಯ ಯೋಜನೆಗಳ ಮೇಲೆ ಒಂದೂವರೆ ಲಕ್ಷದವರೆಗೆ ಹೂಡಿಕೆಗೆ ಅವಕಾಶ.
  • ನವ ಭಾರತ ನಿರ್ಮಾಣಕ್ಕೆ ನಾವು ಇಟ್ಟಿರುವ ಹೆಜ್ಜೆ ಜಾಗತಿಕ ಮಟ್ಟದಲ್ಲಿ ಭಾರತವನ್ನು ಗುರುತಿಸುವಂತೆ ಮಾಡಿದೆ.
  • ಏಕ್​ ಪಾವ್​ ರಕ್ತಾಹು... ಹಜಾರ್​ ಲಾಕ್​​ ಫೂಲ್​ ಪಡ್ತೀಹೆ
  • ಮರಾಠಿ ಕವಿ ಪಂದ್ಯದ ಮೂಲಕ ಬಜೆಟ್​ ಮುಗಿಸಿದ ವಿತ್ತ ಸಚಿವ
  • ಬಜೆಟ್​ ಮಂಡನೆ ಮುಕ್ತಾಯ, ಸೋಮವಾರಕ್ಕೆ ಅಧಿವೇಶನ ಮುಂದೂಡಿಕೆ

2019-02-01 16:13:23

3 ಲಕ್ಷ ನಕಲಿ ಕಂಪನಿಗಳಿಗೆ ಕೊಕ್​

  • ಕೋಲ್ಕತಾ-ವಾರಣಾಸಿ ವರೆಗೆ ಸರಕುಗಳ ನೌಕಾ ಸೇವೆ.
  • ಸಾಗರ್​ ಮಾಲಾ ಯಾತ್ರೆಗಳ ಮೂಲಕ ಪೋರ್ಟ್​ಗಳ ನಿರ್ಮಾಣ.
  • ವೈಮಾನಿಕ ಕ್ಷೇತ್ರದಲ್ಲಿ ಗಣನೀಯ ಬದಲಾವಣೆ. ಉಡಾನ್​ ಯೋಜನೆಯಿಂದ ಕ್ರಾಂತಿ. ರಕ್ಷಣಾ ವಲಯಕ್ಕೆ ರೂ3 ಲಕ್ಷ ಕೋಟಿಗೂ ಅಧಿಕ ಮೊತ್ತ ಮೀಸಲು, ಕಳೆದ 2 ವರ್ಷಗಳಲ್ಲಿ ಇಪಿಎಫ್ಒ ಸದಸ್ಯರ ಸಂಖ್ಯೆ 2 ಕೋಟಿಗೆ ಏರಿಕೆ
  • ಮೊಬೈಲ್​ ಡೇಟಾ, ಫೋನ್​ ಕರೆ ದರ 50 ಪ್ರತಿಶತ ಇಳಿಕೆ. 12 ಲಕ್ಷ ಜನರಿಗೆ ಇದಿರಿಂದ ಕೆಲಸ.
  • ಬಯೋ ಫ್ಯೂಲ್​ ಮತ್ತು ಇನ್ನಿತರ ತಂತ್ರಜ್ಞಾನಗಳ ಅಳವಡಿಕೆ.
  • ಸೋಲಾರ್​ ಕ್ಷೇತ್ರದಿಂದ ಉದ್ಯೋಗಗಳು ಸೃಷ್ಟಿ.
  • ಜಾಗತಿಕ ತಾಪಮಾನ ಇಳಿಕೆಗೆ ಭಾರತ ನಿರ್ಧಾರ. ಸೋಲಾರ್​ ವಿದ್ಯುತ್​ ಬಳಕೆ ಕಳೆದ ಐದು ವರ್ಷಗಳಲ್ಲಿ ದ್ವಿಗುಣ.
  • ಒಂದೇ ಭಾರತ್​ ಎಕ್ಸ್​ಪ್ರೆಸ್​ ರೈಲುಗಳು ಸದ್ಯದಲ್ಲೇ ಸೇವೆಗೆ ಸಿದ್ಧ.  ದೇಶದ ಅತ್ಯುನ್ನತ ವೇಗದ ರೈಲು ಇದು
  • ದಿನದ 24 ಗಂಟೆಗಳಲ್ಲೂ ಆನ್​ಲೈನ್​ ಮೂಲಕ ತೆರಿಗೆ ಪಾವತಿ.
  • ಐಟಿ ಇಲಾಖೆ ಆನ್​ಲೈನ್​ ಮೂಲಕ ಕೆಲಸ ಮಾಡುತ್ತಿದೆ.
  • ನೇರ ತೆರಿಗೆಯಲ್ಲಿ ಮಹತ್ವದ ಬದಲಾವಣೆ.
  • ಉರಿ ಚಿತ್ರ ನೋಡುವ ಸೌಭಾಗ್ಯ ಸಿಕ್ಕಿದ್ದು ನನ್ನ ಅದೃಷ್ಟ.
  • ಸ್ಟಾರ್ಟ್​ ಅಪ್​ಗಳಿಗೆ ಹೆಚ್ಚು ಅನುದಾನ. ಹೊಸ ಸಾಲ ಯೋಜನೆ.
  • ಮಧ್ಯಮ ವರ್ಗದವರ ಮೇಲಿನ ತೆರಿಗೆ ಇಳಿಕೆಗೆ ನಿರ್ಧಾರ
  • ಆದಾಯ ತೆರಿಯಲ್ಲಿ ಯಾವುದೇ ಬದಲಾವಣೆ ಇಲ್ಲ, ಕಳೆದ ವರ್ಷದಂತೆ ಈ ವರ್ಷ ತೆರಿಕೆ
  • ಮನೆ ಖರೀದಿಸುವವರ ಮೇಲೆ ಜಿಎಸ್​ಟಿ ಇಳಿಕೆ
  • 1 ಲಕ್ಷಕ್ಕೂ ಹೆಚ್ಚು ಜನರು ಅಪನಗದೀಕರಣ ನಂತರ ತೆರಿಗೆ ಪಾವತಿಸಿದ್ದಾರೆ.
  • ಕಾಳ ಧನಿಕರಿಂದ 6900 ಕೋಟಿ 1600 ಕೋಟಿ ರೂಪಾಯಿ ತೆರಿಗೆ ವಸೂಲು, 3 ಲಕ್ಷ ನಕಲಿ ಕಂಪನಿಗಳಿಗೆ ಕೊಕ್​
  • ಉದ್ದೇಶಿತ ವಿತ್ತೀಯ ಕ್ರಿಮಿನಲ್​ಗಳಿಗೆ ತಕ್ಕ ಪಾಠ
  • ಕಪ್ಪು ಹಣ ತಡೆಯಲು ಸರ್ಕಾರದಿಂದ ಇನ್ನಿಲ್ಲದ ಪ್ರಯತ್ನ.
  • ಡಿಜಿಟಲ್​ ಆರ್ಥಿಕತೆಯು ನಮ್ಮ ವಿತ್ತೀಯ ವ್ಯವಹಾರಗಳನ್ನು ಪಾರದರ್ಶಕಗೊಳಿಸುತ್ತದೆ.
  • 2030ರೊಳಗಾಗಿ ಪ್ರತಿಯೊಬ್ಬರಿಗೂ ಮನೆ ಸಿಗಬೇಕೆಂಬುದು ನಮ್ಮ ಉದ್ದೇಶ.
  • 1 ಲಕ್ಷಕ್ಕೂ ಹೆಚ್ಚು ಜನರು ಅಪನಗದೀಕರಣ ನಂತರ ತೆರಿಗೆ ಪಾವತಿಸಿದ್ದಾರೆ.
  • 3 ಲಕ್ಷ ನಕಲಿ ಕಂಪನಿಗಳಿಗೆ ಕೊಕ್​
  • ಕಾಳ ಧನಿಕರಿಂದ 6900 ಕೋಟಿ 1600 ಕೋಟಿ ರೂಪಾಯಿ ತೆರಿಗೆ ವಸೂಲು.
  • ಉದ್ದೇಶಿತ ವಿತ್ತೀಯ ಕ್ರಿಮಿನಲ್​ಗಳಿಗೆ ತಕ್ಕ ಪಾಠ
  • ದೇಶದ ಸ್ವಾಭಿಮಾನದ ಪ್ರಶ್ನೆ ಇದು. ತೈಲಕ್ಕಾಗಿ ಕೈ ಒಡ್ಡಬೇಕಾಗಿಲ್ಲ.
  • 2030ರ ವೇಳೆಗೆ ವಿದ್ಯುತ್​ ಚಾಲಿತ ವಾಹನಗಳ ಹೆಚ್ಚು ಬಳಕೆ.
  • ಮುಂದಿನ 11 ವರ್ಷಗಳಲ್ಲಿ ಡಿಜಿಟಲ್​ ಆರ್ಥಿಕತೆಯು ನಮ್ಮ ವಿತ್ತೀಯ ವ್ಯವಹಾರಗಳನ್ನು ಪಾರದರ್ಶಕಗೊಳಿಸುತ್ತದೆ.
  • 2022ರ ವೇಳೆಗೆ ನಭಕ್ಕೆ ಜಿಗಿಯಲಿರುವ ಭಾರತೀಯ ಅಂತರಿಕ್ಷ ಯಾನಿಗಳು.
  • ಮೈಕ್ರೊ ನೀರಾವರಿ ಯೋಜನೆಗಳ ಮೂಲಕ ನೀರು ಪೂರೈಕೆ.
  • ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
  • ಭಾರತೀಯ ಚಿತ್ರರಂಗಕ್ಕೆ ಬಂಪರ್ ಕೊಡುಗೆ: ಎಲ್ಲಾ ಭಾಷೆಯ ಸಿನಿಮಾಗಳಿಗೂ ಅನುಮತಿ.
  • ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ 3 ಲಕ್ಷ ಕೋಟಿಗೇರಿದ ರಕ್ಷಣಾ ಬಜೆಟ್.
  • ಸ್ವಚ್ಛ ನದಿ ಯೋಜನೆಗಳ ಮೂಲಕ ನದಿಗಳ ಶುದ್ಧೀಕರಣ.
  • ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಕೆ ಮೂಲಕ ಉತ್ಪಾದನೆಯಲ್ಲಿ ಹೆಚ್ಚಳ
  • ದೇಶದ ಎಲ್ಲ ನದಿಗಳ ಸ್ವಚ್ಛತೆ, ಕುಡಿಯಲು ಶುದ್ಧ ನೀರು.
  • ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ 38 ಸಾವಿರ ಕೋಟಿ ರೂ ಅನುದಾನ
  • ಪರಿಶಿಷ್ಟ ಜಾತಿ ಅಭಿವೃದ್ಧಿಗೆ 76 ಸಾವಿರ ಕೋಟಿ ರೂ. ಅನುದಾನ.
  • ರಾಷ್ಟ್ರೀಯ ಶಿಕ್ಷಣ ಮಿಷನ್​ಗೆ 38,578 ಕೋಟಿ ಅನುದಾನ.

2019-02-01 16:06:55

ಮೋದಿ ಸರ್ಕಾರದಿಂದ ರೈತರ ಕುಟುಂಬಗಳಿಗೆ ಲಾಭ

  • ಈ ಮೂಲಕ ಗ್ರಾಮೀಣ ಪ್ರದೇಶದ ಜನರ ಮನಸ್ಥಿತಿಯನ್ನೇ ಬದಲಿಸಲಾಗಿದೆ.
  • ಸ್ವಚ್ಛ ಭಾರತ ಮಿಷನ್​ ಮೂಲಕ ಭಾರತದ ಗ್ರಾಮಾಂತರ ಭಾಗದ ಸ್ವರೂಪವನ್ನೇ ಬದಲಿಸಿದ್ದೇವೆ.
  • ಕಲ್ಲಿದ್ದಲು, ತರಂಗಾಂತರ ಮಾರಾಟದಲ್ಲಿ ಪಾರ್ದರ್ಶಕತೆ ಕಾಯ್ದುಕೊಂಡಿದ್ದೆವೆ.
  • 50 ಕೋಟಿ ಮಂದಿಗೆ ಔಷಧಗಳನ್ನು ನೀಡಲು, ಅನುದಾನ.
  • 143 ಕೋಟಿ ಸಿಎಫ್​ಎಲ್​ ಬಲ್ಬ್​ ನೀಡುವ ಮೂಲಕ ವಿದ್ಯುತ್​ಅನ್ನು ಮಿತವಾಗಿ ಬಳಸುವ ಕಾರ್ಯಕ್ಕೆ ನಾಂದಿ ಹಾಡಿದೆವು.
  • ಸೌಭಾಗ್ಯ ಯೋಜನೆ ಮೂಲಕ ವಿದ್ಯುತ್​ ಸೌಲಭ್ಯ ಇಲ್ಲದ ಗ್ರಾಮಗಳಿಗೆ ಪವರ್​ ಕನೆಕ್ಷನ್​.
  • ಪ್ರಧಾನ ಮಂತ್ರಿ ಆವಾಸ್​ ಯೋಜನೆ ಮೂಲಕ ಒಂದು ಮುಕ್ಕಾಲು ಕೋಟಿ ಮನೆಗಳ ನಿರ್ಮಾಣ.
  • ಜನ್​ ಔಷಧಿ ಕೇಂದ್ರಗಳ ಮೂಲಕ ಕಡಿಮೆ ಖರ್ಚಿನಲ್ಲಿ ಔಷಧಗಳು ದೊರೆಯುವಂತೆ ಮಾಡಲಾಗುತ್ತಿದೆ.
  • ಪ್ರಧಾನ್​ ಮಂತ್ರಿ ಕಿಸಾನ್​ ಸಮ್ಮಾನ್​ ನಿಧಿಯನ್ನು ಸರ್ಕಾರ ಜಾರಿಗೆ ತರುತ್ತಿದೆ. ಎರಡು ಹೆಕ್ಟೇರ್ ಜಮೀನು ಹೊಂದಿರುವ ಸಣ್ಣ ಪುಟ್ಟ ಕೃಷಿಕರಿಗೆ ಪ್ರತಿವರ್ಷ ಆರು ಸಾವಿರ ರೂಪಾಯಿ ಪ್ರತಿವರ್ಷ ಅನುದಾನ.
  • ಗ್ರಾಮಾಂತರ ಪ್ರದೇಶಗಳಲ್ಲಿ ಕೃಷಿಯೇ ಮುಖ್ಯ ಉದ್ಯೋಗ.
  • ಶಿಕ್ಷಣ, ಆರೋಗ್ಯ, ನೀರಾವರಿ, ಸ್ಕಿಲ್​ ಡೆವಲಪ್​ಮೆಂಟ್​ ಕ್ಷೇತ್ರಗಳಲ್ಲಿ ದೇಶದ ಎಲ್ಲ ರಾಜ್ಯಗಳು ಪೈಪೋಟಿಯಲ್ಲಿ ಮುಂದುವರಿಯುತ್ತಿದೆ.
  • ಈ ಅನುದಾನವು ರೈತರ ಖಾತೆಗಳಿಗೆ ಮೂರು ಕಂತುಗಳಾಗಿ (2 ಸಾವಿರ ರೂ.) ನೇರವಾಗಿ ವರ್ಗಾವಣೆಯಾಗಲಿದೆ.
  • 12 ಕೋಟಿ ರೂ ರೈತರ ಕುಟುಂಬಗಳಿಗೆ ಲಾಭ
  • ಸಣ್ಣ ರೈತರಿಗಾಗಿ ಪ್ರಧಾನಿ ಕಿಸಾನ್ ಸಮ್ಮಾನ್ ಯೋಜನೆ... ರೈತರ ಖಾತೆಗೆ ನೇರವಾಗಿ ಹಣ
  • ಪಶುಸಂಗೋಪನೆ ಹಾಗೂ ಮೀನುಗಾರಿಕೆಗಾಗಿ ಕೃಷಿಕರಿಗೆ ಸಾಲ ನೀಡಲಾಗುತ್ತದೆ.
  • ಮೀನುಗಾರಿಕೆಗಾಗಿ ಹೊಸ ಸಚಿವಾಲಯ
  • ಗೋವುಗಳ ಸಂರಕ್ಷಣೆಗಾಗಿ ಬಜೆಟ್​ನಲ್ಲಿ ಹೊಸ ಅನುದಾನ.

2019-02-01 16:12:04

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇಂದು ಮಧ್ಯಂತರ ಬಜೆಟ್​ ಮಂಡನೆ ಮಾಡಿದೆ. ಕೇಂದ್ರ ರೈಲ್ವೆ ಸಚಿವ ಪಿಯೂಷ್​ ಗೋಯಲ್​ ಚುನಾವಣೆ ಗಮನದಲ್ಲಿಟ್ಟುಕೊಂಡು ಬಜೆಟ್​ ಮಂಡನೆ ಮಾಡಿದ್ದು, ಮಧ್ಯಮ ವರ್ಗ, ರೈತರು ಹಾಗೂ ರಕ್ಷಣಾ ವಲಯಕ್ಕೆ ಹೆಚ್ಚಿನ ಗಿಫ್ಟ್​ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

  • ಈ ಯೋಜನೆಗಾಗಿ ಪ್ರಸಕ್ತ ಬಜೆಟ್​ನಲ್ಲಿ 7 ಸಾವಿರ ಕೋಟಿ ರೂ. ಅನುದಾನ.
  • ಪಶುಪಾಲನೆ ಮೀನುಗಾರಿಕೆ ಯೋಜನೆಗೆ 750 ಕೋಟಿ ರಾಷ್ಟ್ರೀಯ ಕಾಮಾಧೇನು ಯೋನನೆ ಘೋಷಣೆ, 2 ಹೆಕ್ಟೇರ್ ಭೂಮಿ ಇರುವ ರೈತರಿಗೆ 6 ಸಾವಿರ ರೂ.
  • ಬಡ ರೈತರ ಆದಾಯ ಹೆಚ್ಚಳಕ್ಕೂ ಕ್ರಮ ಕೈಗೊಳ್ಳಲಾಗಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಆರಂಭಿಸಲಾಗಿದೆ.
  • ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ.
  • ಅಸಂಘಟಿತ ಕಾರ್ಮಿಕರು ತಿಂಗಳಿಗೆ 100 ರೂ. ಕಟ್ಟಿದರೆ 60 ವರ್ಷ ನಂತರ ಮೂರು ಸಾವಿರ ರೂ. ಪಿಂಚಣಿ.
  • ಪ್ರಧಾನಿ ಜೀವನ್​ ಜ್ಯೋತಿ ಯೋಜನೆ ಮೂಲಕ ಹೊಸ ಪಿಂಚಣಿ ಜಾರಿ.
  • ಹೊಸ ಪಿಂಚಣಿ ಯೋಜನೆಗೆ ಪುನಶ್ಚೇತನ. 21 ಸಾವಿರ ರೂ. ವೇತನ ಪಡೆಯುವವರಿಗೆ ಬೋನಸ್​.
  • ರಿಸ್ಕ್​ ಏರಿಯಾಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚು ಸಂಬಳ.
  • ಭಾರತೀಯ ಯೋಧರಿಗೆ ಒನ್​ ರಾಂಕ್​ ಒನ್​ ಪೆನ್ಷನ್​ ಜಾರಿಯಾದ ನಂತರ 35 ಸಾವಿರ ಕೋಟಿ ರೂಪಾಯಿ ಅನುದಾನ.
  • ಜೆಮ್​ ಎಂಬ ವೆಬ್​ಸೈಟ್​ ಮೂಲಕ ಸಣ್ಣ ಉದ್ಯಮಗಳು ತಮ್ಮ ಉತ್ಪನ್ನ ಮಾರಾಟ ಮಾಡಬಹುದು.
  • ಎಂಎಸ್​ಎಂಇ ಕ್ಷೇತ್ರಕ್ಕೆ 59 ನಿಮಿಷಗಳಲ್ಲಿ ಸಾಲ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.
  • ಮುಂದಿನ ವರ್ಷ ಎಂಟು ಕೋಟಿ ಮಂದಿಗೆ ಯೋಜನೆ ತಲುಪಿಸಲಾಗುವುದು.
  • ಉಜ್ವಲ ಯೋಜನೆಯಡಿ ಒಂದು ಕೋಟಿ ಗ್ರಾಮೀಣ ಮಹಿಳೆಯರಿಗೆ ಉಚಿತ ಗ್ಯಾಸ್​ ಸಂಪರ್ಕ.
  • ಅಲೆಮಾರಿ ಜನಾಂಗವನ್ನು ಗುರುತಿಸಿ ಅವರಿಗೆ ಅನುದಾನ ನೀಡಲು ನಿರ್ಧಾರ.
  • ತಿಂಗಳಿಗೆ ರೂ100 ಕಟ್ಟುವ ಮೂಲಕ 'ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧಾನ್' ಪಿಂಚಣಿ ಯೋಜನೆಗೆ ಅಸಂಘಟಿತ ವಲಯದ ನೌಕರರು ನೋಂದಾಯಿಸಿಕೊಳ್ಳಬಹುದು. 60 ವರ್ಷಗಳ ನಂತರ ತಿಂಗಳಿಗೆ ರೂ3000 ಪಿಂಚಣಿ ವ್ಯವಸ್ಥೆ

2019-02-01 16:02:31

  • ಜಾಗತಿಕ ಮಟ್ಟದಲ್ಲಿ ನಾವೂ ಅಭಿವೃದ್ಧಿ ಹೊಂದುತ್ತಿದ್ದು, ಅದಕ್ಕಾಗಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ: ಗೋಯಲ್​​
  • ವಿತ್ತ ಸುಧಾರಣೆಯಾದ ನಂತರ ಭಾರತ ವಿಶ್ವದ ಅಗ್ರಗಣ್ಯ ದೇಶ
  • ಪಾರದರ್ಶಕ, ಭ್ರಷ್ಟಾಚಾರ ಮುಕ್ತ ಆಡಳಿತ
  • ದೇಶದ 90ರಷ್ಟು ಭಾಗಗಳಿಗೆ ಶೌಚಾಲಯ ವ್ಯವಸ್ಥೆ
  • ಎಫ್​ಡಿಐ ನೀತಿಗಳನ್ನು ಬದಲಾವಣೆ ಮಾಡಿದ್ದೇ ಇದಕ್ಕೆ ಕಾರಣ.
  • ಕಳೆದ ಐದು ವರ್ಷಗಳಲ್ಲಿ 239 ಬಿಲಿಯನ್​ ಡಾಲರ್​ನಷ್ಟು ಎಫ್​ಡಿಐ ಹರಿದು ಬಂದಿದೆ.
  • ಹಣದುಬ್ಬರ ಇಳಿಸದಿದ್ದರೆ ಮೂಲ ಸೌಕರ್ಯಗಳು ಶೇ. 35ರಷ್ಟು  ಏರಿಕೆ
  • ಶೇ. 4.6 ಇನ್ಫ್ಲೇಶನ್​ ತಂದಿದ್ದೇವೆ.
  • ಹಿಡನ್​ ಟ್ಯಾಕ್ಸ್​, ಹೆಚ್ಚು ತೆರಿಗೆ ಸಂಗ್ರಹಣೆಗೆ ಬ್ರೇಕ್​
  • ವಿತ್ತ ಸುಧಾರಣೆಯಾದ ನಂತರ ಭಾರತ ವಿಶ್ವದ ಅಗ್ರಗಣ್ಯ ದೇಶ
  • 2009 ರಿಂದ 2014ರಲ್ಲಿ ಹಣದುಬ್ಬರ ಇಳಿಕೆ: ಭಾರತ ಜಾಗತಿಕವಾಗಿ 6ನೇ ಸ್ಥಾನ: ಗೋಯಲ್
  • ಎನ್​ಪಿಎಸ್​ ಪ್ರಮಾಣ ಈಗಿಗಿಂತ ಯುಪಿಎ ಅವಧಿಯಲ್ಲೇ ಹೆಚ್ಚಿತ್ತು. ಆದರೆ, ಅದನ್ನು ಕೆಟ್ಟ ಸಾಲ ಎಂದು ಪರಿಗಣಿಸಿರಲಿಲ್ಲ.
  • ದಿವಾಳಿಯಾಗಿದ್ದ ಬ್ಯಾಂಕ್​ಗಳಿಗೆ ಪುನಶ್ಚೇತನ ನೀಡಿದ್ದೇವೆ.
  • ಕಲ್ಲಿದ್ದಲು, ತರಂಗಾಂತರ ಮಾರಾಟದಲ್ಲಿ ಪಾರ್ದರ್ಶಕತೆ ಕಾಯ್ದುಕೊಂಡಿದ್ದೆವೆ.
  • ರಿಯಲ್​ ಎಸ್ಟೇಟ್​ ರೆಗ್ಯುಲೇಷನ್​ ಆ್ಯಕ್ಟ್​  ಜಾರಿಗೆ ತರುವ ಮೂಲಕ ರಿಯಲ್​ ಎಸ್ಟೇಟ್​ ಕ್ಷೇತ್ರದ ಸುಧಾರಣೆ.
  • ಪಾರದರ್ಶಕ ಆಡಳಿತ ನೀಡುವ ಮೂಲಕ ಭ್ರಷ್ಟಾಚಾರಕ್ಕೆ ತಡೆಯೊಡ್ಡಿದ್ದೇವೆ.
  • ಸೌಭಾಗ್ಯ ಯೋಜನೆ ಮೂಲಕ ವಿದ್ಯುತ್​ ಸೌಲಭ್ಯ ಇಲ್ಲದ ಗ್ರಾಮಗಳಿಗೆ ಪವರ್​ ಕನೆಕ್ಷನ್
  • ಪ್ರಧಾನ ಮಂತ್ರಿ ಆವಾಸ್​ ಯೋಜನೆ ಮೂಲಕ ಒಂದು ಮುಕ್ಕಾಲು ಕೋಟಿ ಮನೆಗಳ ನಿರ್ಮಾಣ.
  • ಗ್ರಾಮಗಳಿಗೆ ಬಸ್​ ಸೌಲಭ್ಯ ನೀಡುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ನೆರವು.
  • ಪ್ರಧಾನಮಂತ್ರಿ ಗ್ರಾಮ್​ ಸಡಕ್​ ಯೋಜನೆಗೆ 19 ಸಾವಿರ ಕೋಟಿ ಅನುದಾನ.
  • ಆಡಳಿತ ಸರ್ಕಾರ ಸುಳ್ಳು ಭರವಸೆ ನಿಡಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಅವರಿಗೆ ವಾಸ್ತವ ಗೊತ್ತಿಲ್ಲ.
  • ಹಸಿದ ಹೊಟ್ಟೆಯಲ್ಲಿ ಯಾರೂ ಇರಕೂಡದು ಎನ್ನುವ ಕಾರಣಕ್ಕೆ ಎಂಎನ್​ಆರ್​ಜಿ ಯೋಜನೆಗೆ ಹೆಚ್ಚು ಹಣ ನೀಡಲಾಗಿದೆ.
  • ಮೇಲ್ಜಾತಿಯ ಬಡವರಿಗೆ ಶೇ. 10ರಷ್ಟು ಮೀಸಲು ನೀಡುವ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ನೆರವು.

2019-02-01 11:53:51

ಕೃಷಿ ವಲಯಕ್ಕೆ ಬಂಪರ್​​: ರಕ್ಷಣಾ ವಲಯಕ್ಕೆ 3ಲಕ್ಷ ಕೋಟಿ ಮೊತ್ತ ಮೀಸಲು

  • ಕೃಷಿ ವಲಯದ ಸಮಸ್ಯೆಗಳು, ಸಣ್ಣ ಕೈಗಾರಿಕಾ ವಲಯದ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಮಧ್ಯಮ ವರ್ಗದ ಜನರನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಯೋಜನೆಗಳನ್ನು ಪ್ರಕಟಿಸುವ ಸವಾಲುಗಳಿವೆ.
  • ಪ್ರಮುಖವಾಗಿ ಮಧ್ಯಮ ವರ್ಗ ಸೇರಿದಂತೆ ಕಾರ್ಪೊರೇಟ್ ವಲಯಗಳಿಗೆ ತೆರಿಗೆ ಕಡಿತ, ಕೃಷಿ ವಲಯಕ್ಕೆ ಮತ್ತು ಸಣ್ಣ ಗಾತ್ರದ ಕೈಗಾರಿಕಾ ವಲಯಕ್ಕೆ ಪರಿಹಾರ ಪ್ಯಾಕೇಜ್ ಗಳು ಘೋಷಣೆಯಾಗುವ ಸಾಧ್ಯತೆಯಿದೆ.
  • ಬೆಳಗ್ಗೆ 10 ಗಂಟೆಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಕ್ಯಾಬಿನೆಟ್​ ಸಭೆ
  • ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಸಚಿವ ಪಿಯೂಷ್​ ಗೋಯಲ್​, ಬಜೆಟ್​ ಕುರಿತು ಮಾಹಿತಿ, ಬಜೆಟ್​ ಮಂಡನೆಗೆ ಅನುಮತಿ
  • ಸಂಸತ್​ಗೆ ಬಜೆಟ್​ ಪ್ರತಿಗಳ ಆಗಮನ
  • ಬಜೆಟ್​ ಮಂಡನೆಗೆ ರಾಷ್ಟ್ರಪತಿಗಳ ಅನುಮೋದನೆ ಪಡೆದುಕೊಳ್ಳಲಿರುವ ವಿತ್ತ ಸಚಿವ
  • ರಾಷ್ಟ್ರಪತಿ ಭವನದಿಂದ ತೆರಳಿದ ವಿತ್ತ ಸಚಿವ ಪಿಯೂಷ್​ ಗೋಯಲ್​​
  • ಸಂಸತ್​​ನತ್ತ ಪಿಯೂಷ್​ ಗೋಯಲ್​ ಆಗಮನ
  • ಮಧ್ಯಂತರ ಬಜೆಟ್​ ಮಂಡನೆ ಹಿನ್ನಲೆ, ರೂಪಾಯಿ ಮೌಲ್ಯದಲ್ಲಿ ಹೆಚ್ಚಳ
  • ಪ್ರಧಾನಿ ಮೋದಿ ನೇತೃತ್ವದಲ್ಲಿ ಕ್ಯಾಬಿನೆಟ್​ ಸಭೆ ಆರಂಭ, ಸಂಸತ್​ ಭವನಕ್ಕೆ ಆಗಮಿಸಿದ ವಿತ್ತ ಸಚಿವ ಗೊಯಲ್
Last Updated : Feb 2, 2019, 11:58 AM IST

ABOUT THE AUTHOR

...view details